ಕರ್ನಾಟಕ

karnataka

ETV Bharat / international

ಮಸೀದಿ ಮೇಲೆ ಬಂದೂಕುಧಾರಿಗಳ ದಾಳಿ: ಐವರ ಸಾವು, 18 ಮಂದಿ ಅಪಹರಣ - ಬಂದೂಕುಧಾರಿಗಳಿಂದ ಜನರ ಅಪಹರಣ

ಬಂದೂಕುಧಾರಿಗಳು ಮಸೀದಿ ಮೇಲೆ ದಾಳಿ ನಡೆಸಿ ಐವರನ್ನ ಕೊಂದು 18 ಮಂದಿ ಅಪಹರಿಸಿರುವ ಘಟನೆ ನೈಜೀರಿಯಾದಲ್ಲಿ ನಡೆದಿದೆ.

Nigeria mosque attack
ನೈಜೀರಿಯಾದಲ್ಲಿ ಮಸೀದಿ ಮೇಲೆ ದಾಳಿ

By

Published : Nov 23, 2020, 4:38 PM IST

ಅಬುಜಾ ( ನೈಜೀರಿಯಾ): ಬಂದೂಕುದಧಾರಿಗಳು ಮಸೀದಿಯ ಮೇಲೆ ನಡೆಸಿದ್ದು, ದಾಳಿಯಲ್ಲಿ 5 ಮಂದಿ ಸಾವನ್ನಪ್ಪಿ, 18 ಮಂದಿಯನ್ನು ಅಪಹರಿಸಲಾಗಿದೆ ಎಂದು ನೈಜೀರಿಯಾ ಪೊಲೀಸರು ಮಾಹಿತಿ ನೀಡಿದ್ದಾರೆ.

ಝಂಫಾರಾ ರಾಜ್ಯದ ಮಸೀದಿಯ ಮೇಲೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿ, ಪ್ರಾರ್ಥನೆಗೆ ಆಗಮಿಸಿದ್ದ ಇಬ್ಬರನ್ನು ಕೊಂದಿದ್ದರು. ಇದರ ಜೊತೆಗೆ ಮಸೀದಿಯ ಇಮಾಮ್ ಜೊತೆಗೆ 18 ಮಂದಿಯನ್ನು ಅಪಹರಿಸಲಾಗಿದೆ ಎಂದು ಪೊಲೀಸ್ ವಕ್ತಾರ ಮೊಹಮದ್ ಶೆಹು ಕ್ಸಿನುವಾ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ.

ಮಸೀದಿಯ ಬಳಿ ಇಬ್ಬರು ಸಾವನ್ನಪ್ಪಿದ್ದರೆ, ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಮೊಹಮದ್ ಶೆಹು ಸ್ಪಷ್ಟನೆ ನೀಡಿದ್ದಾರೆ.

ಸ್ಥಳೀಯರ ಪ್ರಕಾರ ಬಂದೂಕುಧಾರಿಗಳು ಮೋಟಾರ್​ ಬೈಕ್​​ಗಳ ಮೂಲಕ ಮಸೀದಿಗೆ ಆಗಮಿಸಿದ್ದು, ದಾಳಿ ನಡೆಸಿ, ಹಲವರನ್ನು ಅಪಹರಿಸಿ, ಅರಣ್ಯ ಪ್ರದೇಶದ ಒಳಗೆ ಓಡಿದ್ದಾರೆ ಎನ್ನಲಾಗಿದೆ. ದಾಳಿಯ ನಂತರ ಸ್ಥಳದಲ್ಲಿ ಪೊಲೀಸರು ಬೀಡುಬಿಟ್ಟಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details