ಕರ್ನಾಟಕ

karnataka

ETV Bharat / international

ಜಿಹಾದಿಗಳ ದಾಳಿಗೆ ಉತ್ತರ ಬುರ್ಕಿನಾ ಫಾಸೊದ 36 ನಾಗರೀಕರು ಬಲಿ - terrorist group attack

ಸೋಮವಾರ ಫಾಸೊದ ಹಳ್ಳಿಗಳಿಗೆ ನುಗ್ಗಿ ದಾಳಿ ನಡೆಸಿದ ಉಗ್ರರು 36 ನಾಗರಿಕರನ್ನು ಕೊಂದಿದ್ದಾರೆ. ಈ ಹಿನ್ನಲೆ ಜಿಹಾದಿಗಳ ವಿರುದ್ಧದ ಹೋರಾಟದಲ್ಲಿ ಸಹಕರಿಸುವಂತೆ ಮಂಗಳವಾರ ಸರ್ಕಾರ ಸ್ಥಳೀಯರ ಬೆಂಬಲವನ್ನು ಕೋರಿದೆ.

36 civilians killed in northern Burkina Faso
ಜಿಹಾದಿಗಳ ದಾಳಿಗೆ ಉತ್ತರ ಬುರ್ಕಿನಾ ಫಾಸೊದ 36 ನಾಗರೀಕರು ಬಲಿ

By

Published : Jan 22, 2020, 10:18 AM IST

ವಾಗಡೌಗೌ(ಉತ್ತರ ಬುರ್ಕಿನಾ): ಸೋಮವಾರ ಫಾಸೊದ ಹಳ್ಳಿಗಳಿಗೆ ನುಗ್ಗಿ ದಾಳಿ ನಡೆಸಿದ ಉಗ್ರರು 36 ನಾಗರಿಕರನ್ನು ಕೊಂದಿದ್ದಾರೆ. ಈ ಹಿನ್ನಲೆ ಜಿಹಾದಿಗಳ ವಿರುದ್ಧದ ಹೋರಾಟದಲ್ಲಿ ಸಹಕರಿಸುವಂತೆ ಮಂಗಳವಾರ ಸರ್ಕಾರ ಸ್ಥಳೀಯರ ಬೆಂಬಲವನ್ನು ಕೋರಿದೆ.

ಮೊದಲು ನಾಗರೋಗೊ ಗ್ರಾಮದ ಮಾರುಕಟ್ಟೆಯ ಮೇಲೆ ದಾಳಿ ಮಾಡಿದ "ಭಯೋತ್ಪಾದಕ ಗುಂಪು" 32 ನಾಗರಿಕರ ಮೇಲೆ ಹಲ್ಲೆ ಎಸಗಿ, ಸುಟ್ಟು ಕೊಂದಿದೆ. ಅನಂತರ ಅಲಮೌ ಗ್ರಾಮದಲ್ಲಿ ಇನ್ನೂ ನಾಲ್ಕು ಜನರನ್ನು ಕೊಂದು ಅಟ್ಟಹಾಸ ಮೆರೆದಿದೆ. ಜೊತೆಗೆ ಘಟನೆಯಲ್ಲಿ ಇನ್ನೂ ಮೂವರು ಗಾಯಗೊಂಡಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ನಾಗರಿಕರ ವಿರುದ್ಧದ ಈ ಪುನರಾವರ್ತಿತ ದಾಳಿಗಳನ್ನು ಎದುರಿಸುತ್ತಿರುವ ಸರ್ಕಾರವು ರಕ್ಷಣಾ ಮತ್ತು ಭದ್ರತಾ ಪಡೆಗಳೊಂದಿಗೆ ಸ್ಪಷ್ಟ ಸಹಯೋಗ ನೀಡುವಂತೆ ಜನರಲ್ಲಿ ಮನವಿ ಮಾಡಿಕೊಂಡಿದೆ.
ಜೊತೆಗೆ, ಜಿಹಾದಿಗಳ ವಿರುದ್ಧ ಹೋರಾಡಲು ಸ್ಥಳೀಯ ಸ್ವಯಂಸೇವಕರನ್ನು ನೇಮಕ ಮಾಡಲು ಅವಕಾಶ ನೀಡುವ ಹೊಸ ಕಾನೂನೊಂದನ್ನು ಬುರ್ಕಿನಾ ಸಂಸತ್ತು ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಿತು. ನೇಮಕಗೊಂಡ ಸ್ವಯಂ ಸೇವಕರಿಗೆ ಲಘು ಆಯುಧಗಳನ್ನು ಒದಗಿಸಿತು.

ಯುಎನ್ ಪ್ರಕಾರ, ಕಳೆದ ವರ್ಷ ಜಿಹಾದಿ ದಾಳಿಯಲ್ಲಿ ಮೂರು ಸಹೇಲ್ ದೇಶಗಳ ಒಟ್ಟು 4,000 ಜನರು ಸಾವನ್ನಪ್ಪಿದ್ದರು. ಜಿಹಾದಿಗಳೊಂದಿಗೆ ಹೋರಾಡಲು ಬುರ್ಕಿನಾ ಫಾಸೊ ಸೈನ್ಯದ ಬಳಿ ಸುಸಜ್ಜಿತ ಆಯುಧಗಳಿಲ್ಲ ಮತ್ತು ತರಬೇತಿ ಸಾಲುತ್ತಿರಲಿಲ್ಲ. ಆದರೆ, ಇತ್ತೀಚಿಗೆ ಅವರು ನಡೆಸಿದ ಹಲವಾರು ಕಾರ್ಯಾಚರಣೆಗಳಲ್ಲಿ ನೂರಾರು ಜಿಹಾದಿಗಳನ್ನು ಕೊಂದಿದ್ದು, ಸರಣಿ ಯಶಸ್ಸನ್ನು ಕಂಡಿದೆ.

ABOUT THE AUTHOR

...view details