ಕರ್ನಾಟಕ

karnataka

ETV Bharat / international

ಉಗ್ರರ ಅಟ್ಟಹಾಸಕ್ಕೆ 35 ಜನ ಬಲಿ: ಸೇನಾ ಕಾರ್ಯಾಚರಣೆಯಲ್ಲಿ 80 ಭಯೋತ್ಪಾದಕರು ಹತ - ಉಗ್ರರ ದಾಳಿಗೆ 35 ಜನರು ಬಲಿ

ಪಶ್ಚಿಮ ಆಫ್ರಿಕಾದ ಪುಟ್ಟ ದೇಶ ಬುರ್ಕಿನ ಫಾಸೊದಲ್ಲಿ ಉಗ್ರರ ದಾಳಿಯಿಂದ 35 ಜನ ಸಾವಿಗೀಡಾಗಿದ್ದು, ಸೇನೆ 80 ಉಗ್ರಗಾಮಿಗಳನ್ನು ಹೊಡೆದುರುಳಿಸಿದೆ.

35 civilians 80 terrorists killed in attack in Burkina Faso,ಬುರ್ಕಿನ ಫಸೊದಲ್ಲಿ ಉಗ್ರರ ದಾಳಿ
ಬುರ್ಕಿನ ಫಸೊದಲ್ಲಿ ಉಗ್ರರ ದಾಳಿ,

By

Published : Dec 25, 2019, 7:47 AM IST

ಉಗಡೌಗೌ (ಬುರ್ಕಿನ ಫಾಸೊ):ಪಶ್ಚಿಮಆಫ್ರಿಕಾದಉತ್ತರ ಬುರ್ಕಿನ ಫಾಸೊದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 35 ಜನ ನಾಗರಿಕರು ಸಾವಿಗೀಡಾಗಿದ್ದು, ಸೇನಾ ಕಾರ್ಯಾಚರಣೆಯಲ್ಲಿ 80 ಜನ ಉಗ್ರಗಾಮಿಗಳು ಹತರಾಗಿದ್ದಾರೆ ಎಂದು ದೇಶದ ಅಧ್ಯಕ್ಷ ರೋಚ್ ಮಾರ್ಕ್ ಕಬೋರ್ ತಿಳಿಸಿದ್ದಾರೆ.

ಸೌಮ್ ಪ್ರಾಂತ್ಯದ ಅರ್ಬಿಂದಾ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ. 'ಉಗ್ರಗಾಮಿಗಳ ಜೊತೆ ಕಾಳಗಕ್ಕಿಳಿದ ನಮ್ಮ ಸೈನಿಕರು 80 ಮಂದಿಯನ್ನು ಹತ್ಯೆ ಮಾಡಿದ್ದಲ್ಲದೆ, ಪ್ರಮುಖ ಮಿಲಿಟರಿ ಉಪಕರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅನಾಗರಿಕ ದಾಳಿಯಲ್ಲಿ ದೇಶದ 35 ಜನರು ಸಾವಿಗೀಡಾಗಿದ್ದು, ಹೆಚ್ಚಿನವರು ಮಹಿಳೆಯರಾಗಿದ್ದಾರೆ' ಎಂದು ರೋಚ್ ಮಾರ್ಕ್ ಕಬೋರ್ ಟ್ವೀಟ್ ಮಾಡಿದ್ದಾರೆ.

ಈ ದಾಳಿಯ ಹೊಣೆಯನ್ನು ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ. ಸದ್ಯ ಬುರ್ಕಿನ ಫಾಸೊ ಅಧ್ಯಕ್ಷ ರೋಚ್ ಮಾರ್ಕ್ ಕಬೋರ್ ಎರಡು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ್ದಾರೆ.

ABOUT THE AUTHOR

...view details