ಕರ್ನಾಟಕ

karnataka

ETV Bharat / international

ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್​ನಲ್ಲಿ 3R ಬಂಡುಕೋರರ ದಾಳಿ: 30 ಮಂದಿ ಸಾವು - ಯಾರು 3R ಬಂಡುಕೋರರು

ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್​ನ ರಾಜಧಾನಿ ಬಂಗುಯಿ ನಗರದಿಂದ ಉತ್ತರಕ್ಕೆ ಸುಮಾರು 500 ಕಿಲೋಮೀಟರ್ ದೂರದಲ್ಲಿರುವ ಎರಡು ಗ್ರಾಮಗಳ ಮೇಲೆ 3R ಬಂಡುಕೋರರು ದಾಳಿ ನಡೆಸಿದ್ದಾರೆ.

30 civilian died in Rebel attacks in  the Central African Republic
ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್​ನಲ್ಲಿ 3R ಬಂಡುಕೋರರ ದಾಳಿ: 30 ಮಂದಿ ಸಾವು

By

Published : Dec 1, 2021, 8:05 AM IST

ಬಂಗುಯಿ(ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್): ಬಂಡುಕೋರರು ನಡೆಸಿದ ಭೀಕರ ದಾಳಿಯಲ್ಲಿ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್​​ನ ವಾಯವ್ಯ ಭಾಗದಲ್ಲಿ ಸುಮಾರು ಇಬ್ಬರು ಸೈನಿಕರು ಸೇರಿದಂತೆ 30 ಮಂದಿ ಸಾವನ್ನಪ್ಪಿದ್ದಾರೆ.

ಭಯೋತ್ಪಾದಕರ ದಾಳಿ ಭಾನುವಾರ ನಡೆದಿದೆ. ಮಂಗಳವಾರ ಅಧಿಕಾರಿಗಳು ದಾಳಿಯ ಕುರಿತು ಪೂರ್ಣ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ಮಾಹಿತಿಯಂತೆ, ಕ್ಯಾಮರೂನ್‌ ರಾಷ್ಟ್ರದ ಗಡಿಗೆ ಸಮೀಪದಲ್ಲಿರುವ ಕೈಟಾ ಮತ್ತು ಬೇಯೆಂಗೌ ಗ್ರಾಮಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ.

ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್​ನ ರಾಜಧಾನಿ ಬಂಗುಯಿ ನಗರದಿಂದ ಉತ್ತರಕ್ಕೆ ಸುಮಾರು 500 ಕಿಲೋಮೀಟರ್ ದೂರದಲ್ಲಿ ಈ ಗ್ರಾಮಗಳಿವೆ ಎಂದು ಪ್ರಾದೇಶಿಕ ಆಡಳಿತಾಧಿಕಾರಿ ಇಸೈ ಗ್ಬಾನಿನ್ ಸ್ಪಷ್ಟನೆ ನೀಡಿದ್ದು, 3R ಬಂಡುಕೋರರಿಂದ ಈ ದಾಳಿ ನಡೆದಿದೆ ಎಂದು ಇಸೈ ಗ್ಬಾನಿನ್ ಆರೋಪಿಸಿದ್ದಾರೆ.

ಯಾರಿವರು 3R ಬಂಡುಕೋರರು?

ಇವರು ಸೆಂಟ್ರಲ್​ ಆಫ್ರಿಕನ್ ರಿಪಬ್ಲಿಕ್​ನ ಬಂಡುಕೋರರಾಗಿದ್ದು, Return, Reclamation, Rehabilitation ( ರಿಟರ್ನ್​​, ರಿಕ್ಲಾಮೇಷನ್, ರಿಹ್ಯಾಬಿಲಿಟೇಷನ್​​) ಎಂಬ ಸಿದ್ಧಾಂತಗಳ ಅಡಿಯಲ್ಲಿ ಕೆಲಸ ಮಾಡುವ ಕಾರಣದಿಂದ ಈ ಸಂಘಟನೆಯನ್ನು 3R ಎಂದು ಕರೆಯಲಾಗುತ್ತದೆ.

ಸೆಂಟ್ರಲ್​ ಆಫ್ರಿಕನ್ ರಿಪಬ್ಲಿಕ್​ನ ವಾಯವ್ಯ ಭಾಗದಲ್ಲಿ ಫುಲಾನಿ ಜನಸಮುದಾಯವನ್ನು ರಕ್ಷಿಸುವ ಸಲುವಾಗಿ 2015ರ ಡಿಸೆಂಬರ್​ನಲ್ಲಿ ಹುಟ್ಟಿಕೊಂಡ ಈ ಸಂಘಟನೆ, ಈಗಾಗಲೇ ಸೆಂಟ್ರಲ್ ಆಫ್ರಿಕನ್ ಸರ್ಕಾರದ ವಿರುದ್ಧದ ಅನೇಕ ಅಪರಾಧಗಳಲ್ಲಿ ಭಾಗಿಯಾಗಿದೆ.

ಇದನ್ನೂ ಓದಿ:ನೈಜೀರಿಯಾ ಜೈಲಿನ ಮೇಲೆ ಉಗ್ರರ ದಾಳಿ ; 11 ಮಂದಿ ಸಾವು, 262 ಕೈದಿಗಳು ಪರಾರಿ

ABOUT THE AUTHOR

...view details