ಕಂಪಾಲಾ, ಉಗಾಂಡಾ:ಮೂವರು ಆತ್ಮಹತ್ಯಾ ಬಾಂಬರ್ಗಳು ತಮ್ಮನ್ನು ತಾವು ಸ್ಫೋಟಿಸಿಕೊಳ್ಳುವುದರ ಜೊತೆಗೆ ಮೂವರು ನಾಗರಿಕರನ್ನು ಬಲಿ ಪಡೆದಿರುವ ಘಟನೆ ಉಗಾಂಡಾದ ರಾಜಧಾನಿ ಕಂಪಾಲಾ ನಗರದ ಮಧ್ಯ ಭಾಗದಲ್ಲಿ ನಡೆದಿದೆ.
33 ಮಂದಿ ಘಟನೆಯಲ್ಲಿ ಗಾಯಗೊಂಡಿದ್ದು, ಅವರನ್ನು ಮುಲಾಗೋ ನ್ಯಾಷನಲ್ ರೆಫರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತೋರ್ವ ಆತ್ಮಹತ್ಯಾ ಬಾಂಬರ್ ಪರಾರಿಯಾಗಿದ್ದು, ಆತನನ್ನು ಹಿಡಿಯಲು ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸ್ ವಕ್ತಾರ ಫ್ರೆಡ್ ಎನಂಗಾ ಮಾಹಿತಿ ನೀಡಿದ್ದಾರೆ.
ಸೆಂಟ್ರಲ್ ಪೊಲೀಸ್ ಠಾಣೆಯ ಚೆಕ್‌ಪಾಯಿಂಟ್‌ನಲ್ಲಿ ಮತ್ತು ಸಂಸತ್ತಿನ ಆವರಣದಲ್ಲಿ ಸೂಸೈಡ್ ಬಾಂಬರ್ಗಳು ದಾಳಿ ನಡೆಸಿದ್ದಾರೆ. ಇದಾದ ನಂತರ ತಮ್ಮನ್ನು ತಾವು ಸ್ಫೋಟಿಸಿಕೊಂಡಿದ್ದಾರೆ ಎಂದು ಪೊಲೀಸ್ ವಕ್ತಾರ ಫ್ರೆಡ್ ಎನಂಗಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.