ಕರ್ನಾಟಕ

karnataka

ETV Bharat / international

ಜಿಹಾದಿಗಳ ದಾಳಿಯಲ್ಲಿ 19 ಸೈನಿಕರು ಸೇರಿ 20 ಜನರ ಹತ್ಯೆ...! - ಬುರ್ಕಿನಾ ಫಾಸೊ ದಾಳಿಯಲ್ಲಿ 19 ಸೈನಿಕರು ಮತ್ತು ನಾಗರಿಕೊಬ್ಬ ಸೇರಿ 20 ಜನರ ಹತ್ಯೆ,

ಜಿಹಾದಿಗಳು (jihadis) ನಡೆಸಿದ ದಾಳಿಯಲ್ಲಿ ಸುಮಾರು 19 ಸೈನಿಕರು (19 soldiers) ಸೇರಿದಂತೆ 20 ಜನರು ಮೃತಪಟ್ಟಿರುವ ಘಟನೆ ಉತ್ತರ ಬರ್ಕಿನಾ ಫಾಸೋದಲ್ಲಿ (northern Burkina Faso) ಭಾನುವಾರ ನಡೆದಿದೆ.

19 soldiers and 1 civilian killed,  19 soldiers and 1 civilian killed in Burkina Faso attack,  Burkina Faso attack news,  19 ಸೈನಿಕರು ಮತ್ತು ನಾಗರಿಕೊಬ್ಬ ಸೇರಿ 20 ಜನರ ಹತ್ಯೆ,  ಬುರ್ಕಿನಾ ಫಾಸೊ ದಾಳಿಯಲ್ಲಿ 19 ಸೈನಿಕರು ಮತ್ತು ನಾಗರಿಕೊಬ್ಬ ಸೇರಿ 20 ಜನರ ಹತ್ಯೆ,  ಬುರ್ಕಿನಾ ಫಾಸೊ ದಾಳಿ ಸುದ್ದಿ
ಉತ್ತರ ಬುರ್ಕಿನಾ ಫಾಸೊದಲ್ಲಿ ದಾಳಿ

By

Published : Nov 15, 2021, 8:21 AM IST

ಬುರ್ಕಿನಾ ಫಾಸೊ: ಉತ್ತರ ಬುರ್ಕಿನಾ ಫಾಸೊದಲ್ಲಿನ (northern Burkina Faso) ಜೆಂಡರ್ಮ್ ಪೋಸ್ಟ್ ಮೇಲೆ ಜಿಹಾದಿಗಳು (jihadis) ನಡೆಸಿದ ದಾಳಿಯಲ್ಲಿ ಕನಿಷ್ಠ 19 ಸೈನಿಕರು (19 soldiers) ಮತ್ತು ಒಬ್ಬ ನಾಗರಿಕ ಸೇರಿ 20 ಜನರು ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ ಸೈನಿಕರು ಸಾವನ್ನಪ್ಪಿರುವುದರ ಬಗ್ಗೆ ಭಾನುವಾರ ಭದ್ರತಾ ಸಚಿವಾಲಯ ತಿಳಿಸಿದೆ.

ಮಾಲಿ ಮತ್ತು ಬುರ್ಕಿನಾ ಫಾಸೊದ (Burkina Faso border and Mali) ಗಡಿಯ ಸಮೀಪದಲ್ಲಿರುವ ಸೌಮ್ ಪ್ರಾಂತ್ಯದ ಇನಾಟಾ ಪಟ್ಟಣದಲ್ಲಿ ಜಿಹಾದಿಗಳು (jihadis) ದಾಳಿ ನಡೆಸಿದ್ದು, ದಾಳಿಯಲ್ಲಿ 19 ಸೈನಿಕರು (19 soldiers) ಸೇರಿದಂತೆ 20 ಜನ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಭದ್ರತಾ ಸಚಿವ ಮ್ಯಾಕ್ಸಿಮ್ ಕೋನ್ (Minister of Security Maxime Kone)​ ಮಾಧ್ಯಮದಲ್ಲಿ ತಿಳಿಸಿದ್ದಾರೆ.

ಮಿಲಿಟರಿ ಹೆಲಿಕಾಪ್ಟರ್ (military helicopter) ಮೇಲಕ್ಕೆ ಹಾರುತ್ತಿರುವಾಗ ಬಹಳಷ್ಟು ದೇಹಗಳನ್ನು ನೋಡಿದೆ ಎಂದು ಮಾಧ್ಯಮಗಳೊಂದಿಗೆ ಮಾತನಾಡಲು ಅನುಮತಿ ಇಲ್ಲದ ಕಾರಣ ಅನಾಮಧೇಯತೆಯ ಷರತ್ತಿನ ಮೇಲೆ ಯೋಧರೊಬ್ಬರು (soldier) ಮಾಹಿತಿ ನೀಡಿದ್ದಾರೆ.

ಐದು ವರ್ಷಗಳಿಗೂ ಹೆಚ್ಚು ಕಾಲ ಅಲ್-ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್‌ಗೆ (al-Qaida and the Islamic State) ಸಂಬಂಧಿಸಿದ ಜಿಹಾದಿ ಗುಂಪುಗಳು ಈ ದಾಳಿ ನಡೆಸಿವೆ ಎನ್ನಲಾಗಿದೆ.

ದೀರ್ಘಕಾಲದಿಂದ ನಡೆಯುತ್ತಿರುವ ಗುಂಪುಗಳ ಹಿಂಸಾಚಾರದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದು, 1.4 ದಶಲಕ್ಷಕ್ಕೂ (1.4 million people) ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

ABOUT THE AUTHOR

...view details