ಕರ್ನಾಟಕ

karnataka

ನೈಜೀರಿಯಾದಲ್ಲಿ 18 ಭಾರತೀಯರ ಅಪಹರಣ: ಪತ್ತೆಗಾಗಿ ಸರ್ವಪ್ರಯತ್ನ

By

Published : Dec 5, 2019, 1:01 PM IST

ನೈಜೀರಿಯಾದ ಕರಾವಳಿ ಭಾಗದಲ್ಲಿ ಹಾಂಕಾಂಗ್​​​ ಧ್ವಜಾರೋಹಣ ಮಾಡಿದ್ದ ನೇವ್​ ಕಾನ್​​ಸ್ಟೆಲ್ಲೇಷನ್​ ಹಡಗಿನಲ್ಲಿ 18 ಮಂದಿ ಭಾರತೀಯರನ್ನು ಕಡಲ್ಗಳ್ಳರು ಅಪಹರಿಸಿದ್ದಾರೆ.

18 Indians on Hong Kong Vessel Kidnapped
18 Indians on Hong Kong Vessel Kidnapped

ನವದೆಹಲಿ: ನೈಜೀರಿಯಾದ ಕಡಲ ತೀರದ ಭಾಗದಲ್ಲಿ ಹಾಂಕಾಂಗ್​​ ಧ್ವಜಾರೋಹಣ ಮಾಡಿದ್ದ ನೇವ್​ ಕಾನ್​​ಸ್ಟೆಲ್ಲೇಷನ್​ ಹಡಗು ಮತ್ತು 18 ಮಂದಿ ಭಾರತೀಯರನ್ನು ಕಡಲ್ಗಳ್ಳರು ಅಪಹರಿಸಿದ್ದಾರೆ.

ಹಡಗನ್ನು ಸ್ವಾಧೀನಕ್ಕೆ ಪಡೆದಿರುವ ಕಡಲ್ಗಳ್ಳರು ಅದರಲ್ಲಿದ್ದ ಒಟ್ಟು 19 ಮಂದಿಯನ್ನು ಅಪಹರಿಸಿದ್ದಾರೆ. ಅಷ್ಟು ಮಂದಿಯಲ್ಲಿ 18 ಭಾರತೀಯರು ಇದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಭಾರತೀಯರನ್ನು ರಕ್ಷಿಸಲು ಸಹಾಯಕ್ಕಾಗಿ ಆಫ್ರಿಕನ್ ರಾಷ್ಟ್ರದ ಅಧಿಕಾರಿಗಳು, ನೈಜಿರಿಯಾ ಸರ್ಕಾರ ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಭಾರತೀಯ ರಾಯಭಾರಿ ಕಚೇರಿ ನಿರಂತರ ಸಂಪರ್ಕದಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಹಾಂಕಾಂಗ್​​​​​ ಧ್ವಜಾರೋಹಣ ಮಾಡಿದ ‘ವಿಎಲ್‌ಸಿಸಿ, ನೇವ್ ಕನ್ಸ್​​​ಲ್ಲೇಷನ್​’ ಡಿಸೆಂಬರ್ 3ರಂದು ತನ್ನ ಸ್ವಾಧೀನಕ್ಕೆ ಪಡೆದುಕೊಂಡಿದೆ ಎಂದು ಎಆರ್​​ಎಕ್ಸ್​ ಮ್ಯಾರಿಟೈಮ್ ತನ್ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿತ್ತು. ಎಆರ್​​ಎಕ್ಸ್​ ಮ್ಯಾರಿಟೈಮ್ ಈ ಪ್ರದೇಶದಲ್ಲಿನ ಕಡಲ ಬೆಳವಣಿಗೆಗಳನ್ನು ಪತ್ತೆಹಚ್ಚುವ ಜಾಗತಿಕ ಸಂಸ್ಥೆ.

ABOUT THE AUTHOR

...view details