ಡೊಡೊಮಾ(ತಾಂಜಾನಿಯಾ):ಚಾಲಕ ಜನಸಂದಣಿಯ ಕಾರನ್ನು ಚಲಾಯಿಸಿದ ಪರಿಣಾಮವಾಗಿ 14 ಮಂದಿ ಸಾವನ್ನಪ್ಪಿ, 22 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ತಾಂಜಾನಿಯಾದಲ್ಲಿ ನಡೆದಿದೆ ಎಂದು ತಾಂಜಾನಿಯಾ ಅಧ್ಯಕ್ಷೀಯ ಕಚೇರಿ ಸೋಮವಾರ ಮಾಹಿತಿ ನೀಡಿದೆ.
ಪೊಲೀಸರ ಪ್ರಕಾರ ಆಗ್ನೇಯ ಮೆಟ್ವಾರಾ ಪ್ರದೇಶದ ಲಿಡುಂಬೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೇಗವಾಗಿ ಬರುತ್ತಿದ್ದ ಸ್ಕ್ಯಾನಿಯ ಕಾರು ನಿಯಂತ್ರಣ ಕಳೆದುಕೊಂಡಿದೆ. ಈ ವೇಳೆ ಜನಸಂದಣಿಯ ಮೇಲೆ ಕಾರನ್ನು ಚಾಲಕ ಚಲಾಯಿಸಿದ್ದಾನೆ. ಘಟನೆಯಲ್ಲಿ 14 ಜನ ಸಾವನ್ನಪ್ಪಿದ್ದು, 22 ಮಂದಿ ಗಾಯಗೊಂಡಿದ್ದಾರೆ.