ಕರ್ನಾಟಕ

karnataka

ETV Bharat / headlines

ಯೆಮೆನ್​ನಲ್ಲಿ ಹೌತಿ ಬಂಡುಕೋರರ ಕ್ಷಿಪಣಿ ದಾಳಿಗೆ 17 ಮಂದಿ ಬಲಿ

ಮಾರಿಬ್‌ನ ರೌಧಾ ನೆರೆಹೊರೆಯಲ್ಲಿರುವ ಗ್ಯಾಸ್ ಸ್ಟೇಷನ್‌ ಮೇಲೆ ಹೌತಿ ಬಂಡುಕೋರರು ನಡೆಸಿದ ಭೀಕರ ಕ್ಷಿಪಣಿ ದಾಳಿಯಲ್ಲಿ ಸುಮಾರು 17 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

By

Published : Jun 6, 2021, 11:21 AM IST

ಹೌತಿ ಬಂಡುಕೋರರಿಂದ ಕ್ಷಿಪಣಿ ದಾಳಿ
ಹೌತಿ ಬಂಡುಕೋರರಿಂದ ಕ್ಷಿಪಣಿ ದಾಳಿ

ಕೈರೋ:ಯೆಮನ್‌ನಲ್ಲಿ ಹೌತಿ ಬಂಡುಕೋರರು ನಡೆಸಿದ ಕ್ಷಿಪಣಿ ದಾಳಿಯಲ್ಲಿ ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ, ಪ್ರಾಣ ಹಾನಿ ಸಂಭವಿಸಿದೆ. ಘಟನೆಯಲ್ಲಿ 5 ವರ್ಷದ ಬಾಲಕಿ ಸೇರಿ 17 ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇಲ್ಲಿನ ನಗರವಾಧ ಮಾರಿಬ್‌ನ ರೌಧಾ ನೆರೆಹೊರೆಯಲ್ಲಿರುವ ಗ್ಯಾಸ್ ಸ್ಟೇಷನ್‌ಗೆ ಕ್ಷಿಪಣಿ ಅಪ್ಪಳಿಸಿತ್ತು. ಪರಿಣಾಮ ಹದಿನೇಳು ಜನರು ಸ್ಥಳದಲ್ಲೇ ಅಸುನೀಗಿದ್ದು ಹಲವರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಯೆಮೆನ್​ನ ಮಾಹಿತಿ ಸಚಿವ ಮೌಮರ್ ಅಲ್-ಇರ್ಯಾನಿ, ವಿಶ್ವಸಂಸ್ಥೆ ಹಾಗೂ ಅಮೆರಿಕಕ್ಕೆ ಈ ದಾಳಿಯನ್ನು ಖಂಡಿಸುವಂತೆ ಮನವಿ ಮಾಡಿದ್ದಾರೆ.

ದಾಳಿಯ ಹೊಣೆ ಹೊತ್ತು ಇಲ್ಲಿಯವರೆಗೆ ಹೌತಿ ಬಂಡುಕೋರರಿಂದ ಯಾವುದೇ ಪ್ರತ್ರಿಕ್ರಿಯೆ ಬಂದಿಲ್ಲ. ಕ್ಷಿಪಣಿ ದಾಳಿಯ ಸ್ವಲ್ಪ ಸಮಯದ ಬೆನ್ನಲ್ಲೇ ಬಂಡುಕೋರರು ಸ್ಫೋಟಕ ತುಂಬಿದ ಡ್ರೋನ್ ದಾಳಿ ನಡೆಸಿದ್ದಾರೆ. ಇದು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲು ಧಾವಿಸಿದ ಎರಡು ಆಂಬುಲೆನ್ಸ್‌ಗಳನ್ನು ನಾಶಪಡಿಸಿವೆ ಎಂದು ಸರ್ಕಾರಿ ಪ್ರಾಯೋಜಿತ ಎಸ್‌ಎಬಿಎ ಸುದ್ದಿ ಸಂಸ್ಥೆ ತಿಳಿಸಿದೆ.

ಮಾರಿಬ್ ಪಟ್ಟಣವನ್ನು ವಶಕ್ಕೆ ಪಡೆಯಲು ಕಳೆದ ಫೆಬ್ರವರಿಯಿಂದ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಯತ್ನಿಸುತ್ತಿದ್ದಾರೆ. ಯೆಮನ್‌ನ ಉತ್ತರ ಭಾಗದಲ್ಲಿ ತನ್ನ ನಿಯಂತ್ರಣ ಸ್ಥಾಪಿಸಲು ಹೌತಿ ಯತ್ನಿಸುತ್ತಿದೆ. ಆದರೆ ಸೌದಿ ನೇತೃತ್ವದ ಒಕ್ಕೂಟದ ಬೆಂಬಲಿತ ಸರ್ಕಾರಿ ಪಡೆಗಳು ತಕ್ಕ ತಿರುಗೇಟು ನೀಡುತ್ತಿರುವ ಹಿನ್ನೆಲೆಯಲ್ಲಿ ಬಂಡುಕೋರರಿಗೆ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ.

For All Latest Updates

ABOUT THE AUTHOR

...view details