ನವದೆಹಲಿ:ಫೆಬ್ರವರಿ 6ರಂದು ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಭಾಷಣವೊಂದರ ಪದವನ್ನ ಸಂಸದೀಯ ಕಲಾಪಗಳ ಕಡಿತದಿಂದ ತೆಗೆದುಹಾಕಿರುವ ಅಪರೂಪದ ವಿದ್ಯಮಾನ ನಡೆಸಿದೆ.
ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಪ್ರಧಾನಿ ನರೇಂದ್ರ ಮೋದಿ ಪದ ಬಳಿಸಿದ್ದು, ಅದನ್ನು ಸಭಾಪತಿ ಎಂ. ವೆಂಕಯ್ಯ ನಾಯ್ಡು ಕಡಿತದಿಂದ ತೆಗೆದು ಹಾಕಿದ್ದಾರೆ ಎಂದು ರಾಜ್ಯಸಭಾ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಎನ್ಪಿಆರ್ ಬಗ್ಗೆ ಮಾತನಾಡುತ್ತಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳ ವಿರುದ್ಧ ಮಾತನಾಡುತ್ತಿದ್ದಾಗ ಬಳಕೆ ಮಾಡಿರುವ ಪದ ಇದಾಗಿದೆ ಎಂದು ತಿಳಿದು ಬಂದಿದೆ. ಆದರೆ, ಅದು ಅಸಂವಿಧಾನಿಕ ಪದ ಅಲ್ಲ ಎಂದು ರಾಜ್ಯಸಭೆ ಮೂಲಗಳು ಸ್ಪಷ್ಟಪಡಿಸಿವೆ. ಅದನ್ನು ಪ್ರಕಟಣೆಯಲ್ಲೂ ಸ್ಪಷ್ಟವಾಗಿ ಹೇಳಿದೆ.