18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪುನಾರಂಭ, ಆದ್ಯತೆ ಗುಂಪುಗಳಿಗೆ ಮೊದಲು ಲಸಿಕೆ - ಮುಖ್ಯ ನ್ಯಾಯಮೂರ್ತಿ ಎ. ಎಸ್ ಓಕ
ಆದ್ಯತೆ ಗುಂಪುಗಳನ್ನು ಗುರುತಿಸಿ ಲಸಿಕೆ ಪುನಾರಂಭಗೊಳಿಸುವ ಬಗ್ಗೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಆದೇಶ ಹೊರಡಿಸಿದ್ದು, 18 ರಿಂದ 44 ವರ್ಷ ವಯಸ್ಸಿನವರು ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ.
ಬೆಂಗಳೂರು: 18 ರಿಂದ 44 ವರ್ಷ ವಯಸ್ಸಿನವರಿಗೆ ಆದ್ಯತೆ ಗುಂಪುಗಳನ್ನು ಗುರುತಿಸಿ ಲಸಿಕೆ ಪುನರಾರಂಭಗೊಳಿಸುವ ಬಗ್ಗೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಆದೇಶ ಹೊರಡಿಸಿದೆ.
ಆದ್ಯತೆ ಗುಂಪುಗಳು:
18-44 ವರ್ಷ ವಯಸ್ಸಿನ ಫಲಾನುಭವಿಗಳಿಗೆ ಮೇ 22 ರಿಂದ ಲಸಿಕೆ ಪ್ರಾರಂಭ
- ರಾಜ್ಯ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ
- ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಆದ್ಯತೆ ಗುಂಪುಗಳ ಪಟ್ಟಿ ಅಂತಿಮಗೊಳಿಸಲು ಸೂಚನೆ ನೀಡಲಾಗಿದೆ.
ರಾಜ್ಯ ಕೊರೊನಾ ಮುಂಚೂಣಿ ಕಾರ್ಯಕರ್ತರು
- ಅಂಗವೈಕಲ್ಯ ಹೊಂದಿರುವವರು
- ಖೈದಿಗಳು
- ಚಿತಾಗಾರ ಸಿಬ್ಬಂದಿ
- ಆರೋಗ್ಯ ಕಾರ್ಯಕರ್ತರ ನಿಕಟ ಕುಟುಂಬಸ್ಥರು
- ಕೋವಿಡ್ ಕೆಲಸಕ್ಕೆ ನಿಯೋಜಿಸಿದ ಶಿಕ್ಷಕರು
- ಸರ್ಕಾರಿ ಸಾರಿಗೆ ಸಿಬ್ಬಂದಿ
- ಆಟೋ ಮತ್ತು ಕ್ಯಾಬ್ ಚಾಲಕರು
- ವಿದ್ಯುತ್- ನೀರು ಸರಬರಾಜು ಮಾಡುವವರು
- ಅಂಚೆ ಇಲಾಖೆ ಸಿಬ್ಬಂದಿ
- ಬೀದಿ ಬದಿ ವ್ಯಾಪಾರಿ
- ಭದ್ರತೆ ಹಾಗೂ ಹೌಸ್ ಕೀಪಿಂಗ್ ಸಿಬ್ಬಂದಿಗಳು
- ನ್ಯಾಯಾಂಗ ಅಧಿಕಾರಿಗಳು
- ವಯೋವೃದ್ಧರ ಆರೈಕೆದಾರರು
- ಮಕ್ಕಳ ಸಂರಕ್ಷಣಾಧಿಕಾರಿಗಳು
- ಮಾಧ್ಯಮದವರು
- ಆಸ್ಪತ್ರೆಗಳಿಗೆ ಸರಕು ಸರಬರಾಜು ಮಾಡುವ ವ್ಯಕ್ತಿಗಳು
- ಆಯಿಲ್ ಇಂಡಸ್ಟ್ರಿ ಮತ್ತು ಗ್ಯಾಸ್ ಸರಬರಾಜು ಮಾಡುವವರು
- ಭಾರತೀಯ ಆಹಾರ ನಿಗಮ ಸಿಬ್ಬಂದಿ
- ಎಪಿಎಂಸಿ ಕೆಲಸಗಾರರು
- ವೃದ್ಧಾಶ್ರಮ ವಾಸಿ, ನಿರ್ಗತಿಕರು
ಆದ್ಯತೆ ಗುಂಪುಗಳು
- ಕಟ್ಟಡ ಕಾರ್ಮಿಕರು
- ಟೆಲಿಕಾಂ ಮತ್ತು ಇಂಟರ್ ನೆಟ್ ಸೇವಾದಾರರು
- ವಿಮಾನಯಾನ ಸಂಸ್ಥೆ ಸಿಬ್ಬಂದಿಗಳು
- ಬ್ಯಾಂಕ್ ಸಿಬ್ಬಂದಿ
- ಪೆಟ್ರೋಲ್ ಬಂಕ್ ಕೆಲಸಗಾರರು
- ಚಿತ್ರೋದ್ಯಮ ಸಿಬ್ಬಂದಿಗಳು, ಕಾರ್ಯಕರ್ತರು, ಉದ್ಯಮಿಗಳು
- ಅಡ್ವೋಕೇಟ್ ಗಳು
- ಹೋಟೇಲ್ ಸೇವಾದಾರರು
- ಕೆ.ಎಂ.ಎಫ್ ಸಿಬ್ಬಂದಿಗಳು
- ರೈಲ್ವೆ ಸಿಬ್ಬಂದಿಗಳು
- ಗಾರ್ಮೆಂಟ್ ಕಾರ್ಖಾನೆ ಸಿಬ್ಬಂದಿಗಳು
- ಅರಣ್ಯ ಇಲಾಖೆ ಸಿಬ್ಬಂದಿಗಳು
- ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಿಬ್ಬಂದಿ
- ಗೈಲ್ ಸಿಬ್ಬಂದಿ
- RSK ಕೆಲಸಗಾರರು
- ರಾಜ್ಯ- ರಾಷ್ಟ್ರ ಮಟ್ಟದ ಆಟಗಾರರು
- ಸ್ವಧಾರ್ ಗೃಹ ವಾಸಿಗಳುಣ ರಾಜ್ಯ ಮಹಿಳಾ ನಿಲಯವಾಸಿಗಳು,
- ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ ಸಿಬ್ಬಂದಿಗಳು
ಅನುಷ್ಠಾನಾಧಿಕಾರಿಗಳ ಜವಾಬ್ದಾರಿಗಳು
- ಪ್ರತಿ ಆದ್ಯತೆ ಗುಂಪಿನ ಲಸಿಕಾಕರಣಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು
- ಆಯಾ ಗುಂಪಿನ ನೋಡಲ್ ಅಧಿಕಾರಿಗಳು ಫಲಾನುಭವಿಗಳಿಗೆ ಅರ್ಹತಾ ಪ್ರಮಾಣ ಪತ್ರ, ಲಸಿಕೆ ಪಡೆಯುವ ದಿನಾಂಕ, ಸ್ಥಳ, ಸಮಯ ನಿಗದಿ ಮಾಡುವುದು
- ಲಸಿಕೆ ನೀಡಿದ ದೈನಂದಿನ ಮಾಹಿತಿ ನೀಡಬೇಕು
ಕೋವಿಡ್ -19 ಲಸಿಕಾಕರಣದ ಅನುಷ್ಠಾನ
- ರಾಜ್ಯ ಸರ್ಕಾರ 18- 44 ಫಲಾನುಭವಿಗಳಿಗಾಗಿ ಖರೀದಿಸಿದ ಲಸಿಕೆಯನ್ನೇ ಬಳಸಿಕೊಳ್ಳುವುದು, ಇದರ ಲಭ್ಯತೆ ಖಾತರಿಪಡಿಸಿಕೊಳ್ಳುವುದು
- ಲಭ್ಯ ಇರುವ ಲಸಿಕೆ, ಮಾನವ ಸಂಪನ್ಮೂಲ, ಅರ್ಹ ಫಲಾನುಭವಿಗಳ ಸಂಖ್ಯೆ ಆಧರಿಸಿ ಕ್ರಿಯಾ ಯೋಜನೆ ತಯಾರಿಸಿ ಪ್ರತಿ ದಿನದ ಮಾಹಿತಿ ನೀಡಲು ತಿಳಿಸಲಾಗಿದೆ.