ವಾಷಿಂಗ್ಟನ್ :ಕೊರೊನಾ ವೈರಸ್‌ನ ಮೂಲ ಪುರುಷ ಚೀನಾ ವಿರುದ್ಧ ಕೆಂಡ ಕಾರುತ್ತಿರುವ ವಿಶ್ವದ ದೊಡ್ಡಣ್ಣ ಅಮೆರಿಕಾ ಡ್ರ್ಯಾಗನ್ ದೇಶದ ವಿರುದ್ಧ ಮತ್ತೊಂದು ಸಮರ ಸಾರುತ್ತಿದೆ. ಚೀನಾ ಅವಿಷ್ಕಾರ ಮಾಡುತ್ತಿರುವ ವ್ಯಾಕ್ಸಿನ್‌ನ ಯಾವುದೇ ಕಾರಣಕ್ಕೂ ಅಮೆರಿಕಾ ಬಳಸುವುದಿಲ್ಲ ಎಂದು ಯುಎಸ್‌ನ ಸಾಂಕ್ರಾಮಿಕ ರೋಗ ತಜ್ಞ ಅಂಟೋನಿ ಫೌಸಿ ಹೇಳಿದ್ದಾರೆ.
ಚೀನಾ ಮಾತ್ರವಲ್ಲದೆ ರಷ್ಯಾ ಸಂಶೋಧನೆ ಮಾಡುವ ಲಸಿಕೆಯನ್ನೂ ಅಮೆರಿಕಾ ತನ್ನ ರೋಗಿಗಳ ಚಿಕಿತ್ಸೆಗೆ ನೀಡುವುದಿಲ್ಲ ಎಂದು ಫೌಸಿ ಸ್ಪಷ್ಟ ಪಡಿಸಿದ್ದಾರೆ. ತನ್ನ ದೇಶದ ಸುರಕ್ಷತೆಯ ಅಗ್ರಮಾನ್ಯ ಕಾರಣ ನೀಡಿರುವ ಅಮೆರಿಕಾ, ತನ್ನ ನೀತಿ ನಿಯಮಗಳಲ್ಲಿ ಯಾವ ದೇಶ ಪಾರದರ್ಶನ ಹೊಂದಿಲ್ಲವೋ ಅಂತಹ ದೇಶಗಳ ವ್ಯಾಕ್ಸಿನ್ ಬಳಸುವುದಿಲ್ಲ ಎಂದಿದೆ.