ಗುವಾಹಟಿ : ಉಲ್ಫಾ (ಐ) ನಾಯಕ ಮತ್ತು ಮೇಜರ್ ಜನರಲ್ ಜಿಬಾನ್ ಮೊರನ್ ಅಲಿಯಾಸ್ ಗುಂಡ್ ಡಂಗೋರಿಯಾ 37 ವರ್ಷಗಳ ಕಾಲ ಬಂಡಾಯಗಾರನಾಗಿ ಕಳೆದ ನಂತರ ಈಗ ಮುಖ್ಯವಾಹಿನಿಗೆ ಬರಲು ನಿರ್ಧರಿಸಿದ್ದಾನೆ.
1984ರಲ್ಲಿ ಸಂಘಟನೆಯಲ್ಲಿ ಸೇರಿಕೊಂಡು ಬರ್ಮಾದಲ್ಲಿ ತರಬೇತಿ ಪಡೆದ ನಂತರ ಈವರೆಗೂ ತನ್ನ ಜೀವಿತಾವಧಿಯನ್ನು ಕಾಡಿನಲ್ಲಿಯೇ ಕಳೆದಿದ್ದಾನೆ.
ಉಲ್ಫಾ ಇಂದು ಬಿಡುಗಡೆ ಮಾಡಿದ ಪತ್ರದಲ್ಲಿ, 65 ವರ್ಷದ ನಾಯಕ ಸಂಸ್ಥೆಯನ್ನು ತೊರೆದು ಅವರ ಕುಟುಂಬದೊಂದಿಗೆ ಸೇರಲು ಅವಕಾಶ ನೀಡಲಾಗಿದೆ. ಆದರೆ, ದಂಗೆಕೋರ ಎಲ್ಲಿದ್ದಾನೆ ಎಂಬುದು ಇನ್ನೂ ತಿಳಿದು ಬಂದಿಲ್ಲ ಎಂದು ಉಲ್ಲೇಖ ಮಾಡಲಾಗಿದೆ.
ಏಪ್ರಿಲ್ 25 ರಂದು ಬಿಡುಗಡೆಯಾದ ಈ ಹೇಳಿಕೆಯಲ್ಲಿ, ಉಲ್ಫಾ (ಐ) ದಂಗೆಕೋರ ಜೀವನವನ್ನು ತೊರೆಯುವ ನಿರ್ಧಾರವನ್ನು ಉಲ್ಲೇಖಿಸಿದೆ, ಅವರು ತಮ್ಮ ಉಳಿದ ಜೀವನವನ್ನು ತಮ್ಮ ಕುಟುಂಬ ಸದಸ್ಯರೊಂದಿಗೆ ಕಳೆಯಬಹುದು ಎಂದು ಬರೆಯಾಗಿದ್ದು, ಉಲ್ಫಾ (ಐ) ಅಧ್ಯಕ್ಷ ಮತ್ತು ಮುಖ್ಯಸ್ಥ ಅಭಿಜಿತ್ ಅಸೋಮ್ ಅವರು ಪತ್ರದಲ್ಲಿ ಸಹಿ ಮಾಡಿದ್ದಾರೆ.ಹಾಗೆಯೇ ಅವರಿಗೆ ಶುಭ ಹಾರೈಸಿದ್ದಾರೆ.
ಉಲ್ಫಾ (ಐ) ನಾಯಕ ಈ ಮೂಲಕ ತನ್ನ ನಾಲ್ಕು ದಶಕಗಳ ಸುದೀರ್ಘ ಜೀವನವನ್ನು ನಿಷೇಧಿತ ಉಗ್ರಗಾಮಿ ಗುಂಪನ್ನು ಬಿಟ್ಟು ಬಿಟ್ಟು ತನ್ನ ಮನೆಗೆ ಮರಳಲು ಸಜ್ಜಾಗಿದ್ದಾನೆ.