ಕರ್ನಾಟಕ

karnataka

ETV Bharat / headlines

ಭಾರಿ ಮಳೆಗೆ ಪ್ರವಾಹ: ಸಾವಿನ ಕದತಟ್ಟಿ ಹೊರಬಂದ ಯುವಕರು.. VIDEO - : Two men who were crossing Fulmasta river in Aurangabad district

ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಇಬ್ಬರು ಯುವಕರು ದ್ವಿಚಕ್ರ ವಾಹನಗಳೊಂದಿಗೆ ನದಿಯಲ್ಲಿ ಕೊಚ್ಚಿಹೋಗಿದ್ದಾರೆ. ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Two people washed away by the force of river while crossing the bridge on a bike
Two people washed away by the force of river while crossing the bridge on a bike

By

Published : Jun 10, 2021, 5:11 PM IST

Updated : Jun 10, 2021, 7:52 PM IST

ಔರಂಗಾಬಾದ್( ಮಹಾರಾಷ್ಟ್ರ): ಜಿಲ್ಲೆಯಲ್ಲಿ ನಿನ್ನೆ ಭಾರಿ ಮಳೆಯಾಗಿದೆ. ಸಂಜೆ ವೇಳೆ ಇಬ್ಬರು ಯುವಕರು ಪನೆವಾಡಿಯಿಂದ ದ್ವಿಚಕ್ರ ವಾಹನದಲ್ಲಿ ಫುಲ್ಬಾರಿ ಕಡೆಗೆ ಬರುತ್ತಿದ್ದಾಗ ಆಘಾತಕಾರಿ ಘಟನೆ ಜರುಗಿದೆ.

ಫುಲ್ಮಾಸ್ತಾ ನದಿ ಫುಲ್ಬಾರಿ ಪ್ರದೇಶದ ಮೂಲಕ ಹರಿಯುತ್ತದೆ. ನಿನ್ನೆ ನಾಲ್ಕು ಗಂಟೆಗೆ ಬಂದ ವರುಣ ಸುಮಾರು ಒಂದು ಗಂಟೆಗಳ ಕಾಲ ಆರ್ಭಟಿಸಿದ್ದಾನೆ. ಪರಿಣಾಮ ಫುಲ್ಮಾಸ್ತಾ ನದಿಯು ಪ್ರವಾಹಕ್ಕೆ ಒಳಗಾಗಿದೆ.

ಸಾವಿನ ಕದತಟ್ಟಿ ಹೊರಬಂದ ಯುವಕರು.. VIDEO

ಇದೇ ವೇಳೆ, ಸೇತುವೆ ಮೇಲೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಇಬ್ಬರು ಯುವಕರು ದ್ವಿಚಕ್ರ ವಾಹನಗಳೊಂದಿಗೆ ನದಿಯಲ್ಲಿ ಕೊಚ್ಚಿಹೋಗಿದ್ದಾರೆ. ಈ ಘಟನೆ ಮೊಬೈಲ್​ನಲ್ಲಿ ಸೆರೆಹಿಡಿಯಲಾಗಿದೆ. ಅದೃಷ್ಟವಶಾತ್​ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಸೇತುವೆ ತಂಬಾ ಕೆಳಮಟ್ಟದಲ್ಲಿದ್ದು, ಅದನ್ನು ಹೆಚ್ಚಿಸಬೇಕು ಎಂದು ಜನರು ಆಗ್ರಹ ಮಾಡಿದ್ದಾರೆ.

Last Updated : Jun 10, 2021, 7:52 PM IST

ABOUT THE AUTHOR

...view details