ಕರ್ನಾಟಕ

karnataka

ETV Bharat / headlines

ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಂಟು ಆರೋಪ ಪ್ರಕರಣ: ನಟಿಯರ ಜೊತೆ ರಾಜಕಾರಣಿಗಳ ಲಿಂಕ್​! - Basavaraj bommai

ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ನಟಿಯರು ಪಾರ್ಟಿಯಲ್ಲಿ ಭಾಗಿಯಾದ ನಟ, ನಟಿಯರ ಹೆಸರು, ರಾಜಕಾರಣಿಗಳ, ಉದ್ಯಮಿಗಳ ಹೆಸರು, ಪೊಲೀಸರ, ನಿರ್ದೇಶಕರ ಹೆಸರು ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಮಂದಿಯ ಮಾಹಿತಿ ಬಿಚ್ಚಿಟ್ಟಿದ್ದಾರೆ ಎನ್ನಲಾಗ್ತಿದೆ.

Ccb
Ccb

By

Published : Sep 14, 2020, 10:08 AM IST

ಬೆಂಗಳೂರು: ಚಂದನವನದಲ್ಲಿ ಡ್ರಗ್ಸ್ ಮಾಫಿಯಾ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಇಬ್ಬರು ನಟಿ ಮಣಿಯರನ್ನು ಸಿಸಿಬಿ ಬಂಧಿಸಿ ವಿಚಾರಣೆ ನಡೆಸುತ್ತಿದೆ. ಈ ನಟಿಯರ ಹೇಳಿಕೆ ಆಧಾರದ ಮೇರೆಗೆ ಮುಂದಿನ ದಾಳಿಗೆ ಪೊಲೀಸರು ಪಟ್ಟಿ ಸಿದ್ಧಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ಈ ಪಟ್ಟಿಯನ್ನು ಗೃಹ ಇಲಾಖೆಗೆ ಕೂಡ ನೀಡಿದ್ದು, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಕೂಡ ‌ಮುಂದಿನ ದಿನಗಳಲ್ಲಿ ಡ್ರಗ್ಸ್ ಮಾಫಿಯಾ ಜಾಲವನ್ನು ಭೇದಿಸಲು ದಾಳಿ ಮತ್ತಷ್ಟು ತೀವ್ರವಾಗಿ ನಡೆಯಲಿದೆ ಎಂದಿದ್ದಾರೆ.

ಬಂಧಿತ ನಟಿಯರನ್ನು ನಿನ್ನೆ ಮಡಿವಾಳದ ಎಫ್ಎಸ್​ಎಲ್ ಕಚೇರಿಯಲ್ಲಿ ಸುಮಾರು 7 ಗಂಟೆಗಳ ಕಾಲ ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು, ಡ್ರಗ್ಸ್ ಜಾಲದಲ್ಲಿ ಇನ್ಯಾರು ಭಾಗಿಯಾಗಿದ್ದಾರೆ ಅನ್ನೋದರ ಬಗ್ಗೆ ಪ್ರಶ್ನೆಗಳನ್ನು ಮುಂದಿಟ್ಟಿದ್ರು. ಮೊದಲು ಪೊಲೀಸರ ಪ್ರಶ್ನೆಗೆ ಸರಿಯಾದ ಉತ್ತರ ನೀಡದ ನಟಿಮಣಿಯರು, ನಂತರ ಸಾಕ್ಷ್ಯಗಳನ್ನು ಮುಂದಿಟ್ಟಾಗ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾದ ನಟ, ನಟಿಯರ ಹೆಸರು, ರಾಜಾಕಾರಣಿಗಳು, ಉದ್ಯಮಿಗಳು, ಪೊಲೀಸರ, ನಿರ್ದೇಶಕರ ಹೆಸರು ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಮಂದಿಯ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ ಎಂದು ಹೇಳಲಾಗ್ತಿದೆ.

ಡ್ರಗ್ಸ್ ಜಾಲದಲ್ಲಿ ಕೇಳಿಬಂದ ಹೆಸರುಗಳನ್ನು ಪರಿಶೀಲನೆ ಮಾಡಿ ಆರೋಪಿಗಳ ಹಿನ್ನೆಲೆ, ಆರೋಪಿಗಳು ಭಾಗಿಯಾಗಿದ್ದ ಪಾರ್ಟಿಗಳ ಪಟ್ಟಿ ಸಿದ್ಧಪಡಿಸಿ ಅವರನ್ನು ವಿಚಾರಣೆಗೆ ಬರುವಂತೆ ನೋಟಿಸ್ ನೀಡಲು ಸಿಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ. ಅಥವಾ ನೋಟಿಸ್ ನೀಡದೆಯೇ ನೇರವಾಗಿ ದಾಳಿ ನಡೆಸುವ ಸಾಧ್ಯತೆಯೂ ಇದೆ.

ಮತ್ತೊಂದೆಡೆ ನಟಿ ಮಣಿಯರ ಮೊಬೈಲ್ ಕಾಲ್, ಮೊಬೈಲ್ ನಲ್ಲಿದ್ದ ಮೆಸೇಜ್, ಫೋಟೋಗಳು, ಯಾರ ಜೊತೆ ಯಾರೆಲ್ಲಾ ಆತ್ಮೀಯರಾಗಿದ್ದರು ಅನ್ನೋ ಫೋಟೋಗಳು ವೈರಲ್ ಆಗಿವೆ. ನಿವೃತ್ತ ಐಜಿಪಿ, ಹಾಲಿ ಡಿಸಿಪಿ, ಎಸಿಪಿಗಳು ಹಾಗೆ ಮಾಜಿ, ಹಾಲಿ ರಾಜಕಾರಣಿಗಳು, ನಿರ್ದೇಶಕರು ನಟಿಮಣಿಯರ ಜೊತೆ ಬಹಳ ಆತ್ಮೀಯರಾಗಿರುವ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗ್ತಿದೆ. ಮಾತ್ರವಲ್ಲದೇ ಪ್ರತಿಷ್ಠಿತ ಪಬ್ ಪಾರ್ಟಿ, ಕೆಸಿನೋ ಪಾರ್ಟಿಗಳಲ್ಲಿ ನಿವೃತ್ತ ಅಧಿಕಾರಿಗಳು ಭಾಗಿಯಾಗಿರುವ ವಿಚಾರ ಬಯಲಾಗಿದೆ‌. ಸದ್ಯಕ್ಕೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಯಾವುದೇ ಒತ್ತಡಕ್ಕೆ‌ ಮಣಿಯದೆ ಆರೋಪಿಗಳ ಜೊತೆ ಯಾರೆಲ್ಲಾ ಲಿಂಕ್ ಹೊಂದಿದ್ದಾರೋ ಅವರನ್ನೆಲ್ಲಾ ಮಟ್ಟ ಹಾಕಲು ಸಜ್ಜಾಗಿದ್ದಾರೆ.

ಸದ್ಯಕ್ಕೆ ನಟಿಮಣಿಯರ ಜೊತೆ ಬಹುತೇಕ ಪ್ರತಿಷ್ಠಿತ ವ್ಯಕ್ತಿಗಳೇ ಭಾಗಿಯಾಗಿದ್ದು, ಇದೇ ದರ್ಪದಲ್ಲಿ ತಮ್ಮನ್ನ ಯಾರು ಖೆಡ್ಡಾಕ್ಕೆ ಕೆಡವಲ್ಲ ಅಂದುಕೊಂಡಿದ್ದ ನಟಿ ಮಣಿಯರಿಗೆ ಸಿಸಿಬಿ ಪೊಲೀಸರು ಚಳಿ ಬಿಡಿಸುತ್ತಿದ್ದಾರೆ.

ABOUT THE AUTHOR

...view details