ಕರ್ನಾಟಕ

karnataka

ETV Bharat / headlines

ರಾಯಚೂರಲ್ಲಿ ವಿದ್ಯಾರ್ಥಿನಿ ನಿಗೂಢ ಸಾವು ಪ್ರಕರಣ ಖಂಡಿಸಿ ಮೌನ ಮೆರವಣಿಗೆ - Shraddanjali

ರಾಯಚೂರು ವಿದ್ಯಾರ್ಥಿನಿ ಸಾವು ಪ್ರಕರಣ ಖಂಡಿಸಿ ಸ್ವಸ್ತಿಕ್ ಗೆಳೆಯರ ಬಳಗದಿಂದ ಮೌನ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಕೊನೆಯಲ್ಲಿ ವಿದ್ಯಾರ್ಥಿನಿ ಸಾವಿಗೆ ನ್ಯಾಯ ದೊರಕಿಸಿ ಕೊಡುವಂತೆ ಒತ್ತಾಯಿಸಲಾಯಿತು.

ವಿದ್ಯಾರ್ಥಿನಿ ಸಾವು ಖಂಡಿಸಿ ಮೌನ ಮೆರವಣಿಗೆ

By

Published : Apr 22, 2019, 10:53 AM IST

Updated : Apr 22, 2019, 1:27 PM IST

ಬೆಂಗಳೂರು: ನಗರದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಸಾವು ಖಂಡಿಸಿ ಹೊಸಕೋಟೆ ಸ್ವಸ್ತಿಕ್ ಗೆಳೆಯರ ಬಳಗದ ವತಿಯಿಂದ ಮೇಣದ ಬತ್ತಿ ಹಿಡಿದು ಮೌನ ಮೆರವಣಿಗೆ ಮಾಡಲಾಯಿತು.

ಮೆರವಣಿಗೆಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ಸ್ವಇಚ್ಛೆಯಿಂದ ಬಂದವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಗಂಗಮ್ಮ ಗುಡಿ, ಕೆಇಬಿ ಸರ್ಕಲ್‌ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮೌನ ಮೆರವಣಿಗೆ ಮಾಡಿದರು.

ವಿದ್ಯಾರ್ಥಿನಿ ಸಾವು ಖಂಡಿಸಿ ಮೌನ ಮೆರವಣಿಗೆ

ಮೆರವಣಿಗೆಯಲ್ಲಿ ಮಾನವ ಸರಪಳಿ ನಿರ್ಮಿಸಿ ವಿದ್ಯಾರ್ಥಿನಿ ಪರ ಘೋಷಣೆ ಕೂಗಿದರು. ನೂರಾರು ಜನ ಸರ್ವಜನಿಕರು ಸೇರಿ ಮೇಣದ ಬತ್ತಿ ಹಚ್ಚುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ಆಕೆಯ ಸಾವಿಗೆ ನ್ಯಾಯ ಕೇಳಿದರು. ನಂತರ ಆಕೆಯ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಒಂದು ನಿಮಿಷ ಮೌನಾಚರಣೆ ಮಾಡಿದರು.

ಈ ವೇಳೆ ಲಾವಣ್ಯ ಎಂಬುವರು ಮಾತನಾಡಿ, ಹೆಣ್ಣುಮಕ್ಕಳನ್ನು ಚಿಕ್ಕ ವಯಸ್ಸಿನಿಂದ ದೊಡ್ಡವರಾಗುವವರೆಗೆ ಎಷ್ಟು ಜವಾಬ್ದಾರಿಯಿಂದ ಸಾಕಿರುತ್ತೇವೆ. ಆದರೆ, ಯಾರೋ ಒಬ್ಬ ಈ ರೀತಿಯ ಕೃತ್ಯ ಎಸಗಿದರೆ ಆ ತಂದೆ ತಾಯಿಗೆ ಎಷ್ಟು ನೋವಾಗಬಹುದು ಎಂದು ಹೇಳುತ್ತಾ ಭಾವುಕರಾದರು. ವಿದ್ಯಾರ್ಥಿನಿ ಸಾವು ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಉಗ್ರ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು

Last Updated : Apr 22, 2019, 1:27 PM IST

For All Latest Updates

TAGGED:

Shraddanjali

ABOUT THE AUTHOR

...view details