ಕರ್ನಾಟಕ

karnataka

ETV Bharat / headlines

ಮಗನ ಸಾವಿನ ಸುದ್ದಿ ಕೇಳಿ ಚಿಕ್ಕಪ್ಪನಿಗೆ ಹೃದಯಾಘಾತ: ಸಾವಿನಲ್ಲೂ ಒಂದಾದ ಅಪ್ಪ-ಮಗ - Gadag crime news

ವಿದ್ಯುತ್ ಶಾಕ್‌ನಿಂದ ತನ್ನ ಸಹೋದರನ ಮಗ ಸಾವನ್ನಪ್ಪಿರುವ ಸುದ್ದಿ ಕೇಳಿ ಆತನ ಚಿಕ್ಕಪ್ಪ ಕೂಡ ಸಾವಿಗೀಡಾದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

Death
Death

By

Published : Sep 20, 2020, 2:59 PM IST

ಗದಗ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಯವಕ ಮೃತಪಟ್ಟ ಸುದ್ದಿ ಕೇಳಿ ಚಿಕ್ಕಪ್ಪನೂ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಗಾಡಗೋಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಕುಡಿಯುವ ನೀರಿಗಾಗಿ ಮೋಟಾರ್ ಆನ್ ಮಾಡಲು ಹೋಗಿದ್ದ ವೇಳೆ ಪ್ರವೀಣ್ ಹೊಸಮನಿಗೆ (25) ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿದ್ದಾನೆ. ಇನ್ನು ದಿಢೀರ್‌ ಸಾವಿನ ಸುದ್ದಿ ಕೇಳಿ 60 ವರ್ಷದ ಕುಬೇರಪ್ಪ ಹೊಸಮನಿ ಎನ್ನುವವರು ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ಕುಬೇರಪ್ಪ ನಿವೃತ್ತ ಶಿಕ್ಷಕರಾಗಿದ್ದು, ಪ್ರವೀಣ್ ನ ಶಿಕ್ಷಣ, ಲಾಲನೆ ಪಾಲನೆ ಎಲ್ಲವನ್ನು ನೋಡಿಕೊಂಡಿದ್ದರು. ಜೊತೆಗೆ ಅನೂನ್ಯವಾಗಿದ್ದ ಇವರಿಬ್ಬರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಮಗ-ಚಿಕ್ಕಪ್ಪ ಸಾವಿನಲ್ಲೂ ಒಂದಾಗಿದ್ದಾರೆ. ಈಗಾಗಲೇ ಕುಬೇರಪ್ಪ ಹಾಗೂ‌ ಪ್ರವೀಣ್ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಇಬ್ಬರ ಸಾವಿನಿಂದ ಗಾಡಗೋಳಿ ಗ್ರಾಮ ಶೋಕ ಸಾಗರದಲ್ಲಿ ಮುಳುಗಿದೆ.

ABOUT THE AUTHOR

...view details