ಕುಷ್ಟಗಿ (ಕೊಪ್ಪಳ): ನಾ ಏನಾದ್ರೂ ಸುಳ್ಳು ಹೇಳಿದ್ರ ಚಪ್ಪಲಿ ಐತೀ ಹೊಡೆದು ಹೋಗ್ರಿ ಎಂದು ಪೊಲೀಸರ ವಿರುದ್ದ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹರಿಹಾಯ್ದುರು.
ಇಂದು ತಾಲೂಕಿನ ಕೇಸೂರಿನ ಯುವಕ ಆಯುಷ್ಮಾನ್ ಕಾರ್ಡ್ ಕುಷ್ಟಗಿಗೆ ಬಂದಾಗ ಮಾರುತಿ ವೃತ್ತದಲ್ಲಿ ಪೊಲೀಸರು ತಡೆದು ದಂಡ ಹಾಕಲು ಮುಂದಾಗಿದ್ದಾರೆ. ಆಗ ಯುವಕ ಕುಷ್ಟಗಿ ತಾಲೂಕು ಸರ್ಕಾರಿ ಆಸ್ಪತ್ರೆಯ ಸಭೆಯಲ್ಲಿದ್ದ ಶಾಸಕರಿಗೆ ಫೋನ್ ಮಾಡಿದ್ದಾನೆ. ಆಗ ಪೊಲೀಸರು ಯಾವ ಎಂಎಲ್ಎ ಹೋಗು ಯಾರ ಜೊತೆಗೂ ಮಾತನಾಡುವುದಿಲ್ಲ. ದಂಡ ಕಟ್ಟು ಎಂದು ದಬಾಯಿಸಿದ್ದಾನೆ. ಇದನ್ನು ಫೋನ್ನಲ್ಲಿ ಕೇಳಿಸಿಕೊಂಡಿದ್ದ ಶಾಸಕ ಬಯ್ಯಾಪೂರ ಕುಪಿತರಾಗಿ ನೇರವಾಗಿ ಮಾರುತಿ ವೃತ್ತಕ್ಕೆ ಆಗಮಿಸಿ ಪೇದೆ ಮಂಜುನಾಥ ಹಿರೇವಂಕಲಕುಂಟ ವಿರುದ್ಧ ಏರು ಧ್ವನಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ತರಾಟೆಗೆ ತೆಗೆದುಕೊಂಡರು.
ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ
ಆಗ ಪೇದೆ ನಾಳೆಯಿಂದ ಮಾಸ್ಕ್ ಇಲ್ಲದವರಿಗೆ ಹಿಡಿದು ದಂಡ ಹಾಕುವುದಿಲ್ಲ ಎಂದಾಗ ಶಾಸಕರನ್ನು ಮತ್ತಷ್ಟು ಕೆರಳಿಸಿತು. ಅನಗತ್ಯವಾಗಿ ಸಂಚರಿಸುವವರಿಗೆ ದಂಡ ಹಾಕ್ರಿ ಯಾರು ಬ್ಯಾಡ ಅಂತರ, ಸುಮ್ಮನೇ ಕಿರುಕುಳ ಕೊಡಬ್ಯಾಡ್ರಿ, ದವಾಖಾನೆ, ಬ್ಯಾಂಕ್ ಅವಶ್ಯಕತೆ ಇದ್ದವರು ಬರುತ್ತಿದ್ದು, ಅಂತವರಿಗೆ ವಿಚಾರಿಸಿ ದಂಡ ಹಾಕಬ್ಯಾಡ್ರೀ ನಾ.. ಹೇಳಿದ್ದು ಸುಳ್ಳು ಆಗಿದ್ದರೆ ಇದ ಚಪ್ಪಲಿಲೇ ಹೊಡ್ರೀ ಎಂದರು.
ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ
ಆಗ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಅವರು ಮಧ್ಯೆ ಪ್ರವೇಶಿಸಿ ಕೊರೊನಾ ಸೋಂಕು ಉಲ್ಬಣಿಸುತ್ತಿದ್ದು, ಜನ ಸಂಚಾರ ನಿಯಂತ್ರಿಸಲೇ ಬೇಕಿದೆ ಎಂದು ಸಮಾಜಾಯಿಷಿಗೆ ಯತ್ನಿಸಿದರಾದರೂ ಪೊಲೀಸರಿಗೆ ಸೌಜನ್ಯದಿಂದ ಮಾತನಾಡಲು ಕಲಿಸಿ ಎಂದಾದ ಸಂಬಂಧಿಸಿದ ಪೇದೆ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕೊರೊನಾ ಸಂದರ್ಭದಲ್ಲಿ ರೈತರು ಸಂಕಷ್ಟದಲ್ಲಿದ್ದು, ಗ್ಯಾಸ್, ಪೆಟ್ರೋಲ್, ಗೊಬ್ಬರ, ಔಷಧ ದರ ಹೆಚ್ಚಿದ್ದು, ರೈತನಿಗೆ ವಿಷ ಕುಡಿಯುವ ಪರಿಸ್ಥಿತಿ ಇದೆ ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ದಂಡ ಹಾಕಿ ಕಿರುಕುಳ ನೀಡಬ್ಯಾಡ್ರೀ ಎಂದು ಶಾಸಕರು ಪೊಲೀಸರಿಗೆ ಸೂಚಿಸಿದರು.