ಢಾಕಾ:ತಿಂಡಿಯಲ್ಲಿ ಕೂದಲು ಸಿಕ್ಕಿದ್ದಕ್ಕೆ ಬಲವಂತವಾಗಿ ಹೆಂಡತಿಯ ತಲೆಯನ್ನೇ ಪತಿ ಬೋಳಿಸಿರುವ ಅಮಾನವೀಯ ಘಟನೆ ಬಾಂಗ್ಲಾದೇಶದ ಜಾಯ್‌ಪುರ್‌ನ ವಾಯುವ್ಯ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಹಾಗೂ ಸಂಪ್ರದಾಯವಾದಿ ಮುಸ್ಲಿಂ ರಾಷ್ಟ್ರಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ ಎಂದು ಮಹಿಳಾ ಹಕ್ಕುಗಳ ಗುಂಪುಗಳು ಎಚ್ಚರಿಸಿದ್ದರಿಂದ ಆರೋಪಿ ಬಬ್ಲು ಮಂಡಲ್ನನ್ನು (35) ಪೊಲೀಸರು ಬಂಧಿಸಿದ್ದಾರೆ.
ಊಟದಲ್ಲಿ ಕೂದಲು ಸಿಕ್ಕಿದ್ದಕ್ಕೆ ಪತ್ನಿಯ ತಲೆಯನ್ನೇ ಬೋಳಿಸಿದ ಭೂಪ - ಅಮಾನವೀಯ ಘಟನೆ
ತಿಂಡಿಯಲ್ಲಿ ಕೂದಲು ಸಿಕ್ಕಿದ್ದಕ್ಕೆ ಕೋಪಗೊಂಡ ಪತಿ, ಹೆಂಡತಿಯ ತಲೆಯನ್ನೇ ಪತಿ ಬೋಳಿಸಿರುವ ಅಮಾನವೀಯ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಉಪಹಾರದ ವೇಳೆ ಕೂದಲು ಸಿಕ್ಕಿದ್ದಕ್ಕೆ ಕೋಪಗೊಂಡಿರುವ ಬಬ್ಲು ಮಂಡಲ್, ಪತ್ನಿಯನ್ನು ಬಾಯಿಗೆ ಬಂದ ಹಾಗೆ ಬೈದಿದ್ದು, ಬಳಿಕ ಬಲವಂತವಾಗಿ ಬ್ಲೇಡ್ನಲ್ಲಿ ಆಕೆಯ ತಲೆ ಬೋಳಿಸಿದ್ದಾನೆ. ಬಬ್ಲು ವಿರುದ್ಧ 'ಸ್ವಯಂಪ್ರೇರಣೆಯಿಂದ ಘೋರ ನೋವನ್ನುಂಟುಮಾಡಿದ' ಹಾಗೂ 23 ವರ್ಷ ವಯಸ್ಸಿನ ಪತ್ನಿಯ 'ನಮ್ರತೆಗೆ ಧಕ್ಕೆ' ತಂದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದ್ದು, ಇದು ಗರಿಷ್ಠ 14 ವರ್ಷಗಳ ಜೈಲು ಶಿಕ್ಷೆಯನ್ನು ಒಳಗೊಂಡಿರುತ್ತದೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಶಹರಿಯಾರ್ ಖಾನ್ ತಿಳಿಸಿದ್ದಾರೆ.
ಈ ಘಟನೆಯು ಬಾಂಗ್ಲಾದೇಶದಲ್ಲಿ ಮಹಿಳೆಯರ ಮೇಲಿನ ನಿಂದನೆ ಮತ್ತು ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವ ಕಾನೂನುಗಳ ಹೊರತಾಗಿಯೂ ಹೆಚ್ಚುತ್ತಿರುವ ದಬ್ಬಾಳಿಕೆಯನ್ನು ಎತ್ತಿ ತೋರಿಸುತ್ತದೆ ಎಂಬುದು ಮಹಿಳಾ ಹೋರಾಟಗಾರರ ಆರೋಪವಾಗಿದೆ. ಇನ್ನು ಈ ವರ್ಷ ಜನವರಿ ಮತ್ತು ಜೂನ್ ನಡುವೆ ಬಾಂಗ್ಲಾದಲ್ಲಿ ಒಟ್ಟು 630 ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದ್ದು, ಅವರ ಮೇಲಿನ ಹಲ್ಲೆ ನಂತರ 37 ಮಹಿಳೆಯರು ಸಾವನ್ನಪ್ಪಿದ್ದರೆ, ಇತರ ಏಳು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಲ್ಲದೇ 106 ಅತ್ಯಾಚಾರಕ್ಕೆ ಯತ್ನ ಪ್ರಕರಣಗಳು ಇವೆ.