ಹೈದರಾಬಾದ್ : ಕೆಲವು ಸಡಿಲಿಕೆಗಳೊಂದಿಗೆ ಲಾಕ್‌ಡೌನ್ ಅನ್ನು ಜೂನ್ 10 ರಿಂದ 19 ರವರೆಗೆ ವಿಸ್ತರಿಸಲು ತೆಲಂಗಾಣ ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.
ತೆಲಂಗಾಣದಲ್ಲಿ '6 to 6' ನೊಂದಿಗೆ ಹತ್ತು ದಿನಗಳ ಕಾಲ ಮತ್ತೆ ಲಾಕ್‌ಡೌನ್ ವಿಸ್ತರಣೆ
ಲಾಕ್ ಡೌನ್ ನಿಯಮಗಳನ್ನು ಸಂಜೆ ಆರು ಗಂಟೆಯಿಂದ ಬೆಳಗ್ಗೆ ಆರು ಗಂಟೆಯವರೆಗೆ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ತೆಲಂಗಾಣ ಕ್ಯಾಬಿನೆಟ್ ಪೊಲೀಸರಿಗೆ ನಿರ್ದೇಶನ ನೀಡಿದೆ.
lock-down-extended-another-ten-days-with-extra-relaxations-in-telangana
ಬೆಳಿಗ್ಗೆ 6 ರಿಂದ ಸಂಜೆ 5 ರವರೆಗೆ ಸಡಿಲಿಕೆ ಮಾಡಿದ್ದು, ಒಂದು ಗಂಟೆಯನ್ನು ಜನರು ತಮ್ಮ ಮನೆಗಳಿಗೆ ಮರಳಲು ಅವಕಾಶ ಮಾಡಿಕೊಡಲಾಗಿದೆ. ಲಾಕ್‌ಡೌನ್ ನಿಯಮಗಳನ್ನು ಸಂಜೆ ಆರು ಗಂಟೆಯಿಂದ ಬೆಳಗ್ಗೆ ಆರು ಗಂಟೆಯವರೆಗೆ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕ್ಯಾಬಿನೆಟ್ ಪೊಲೀಸರಿಗೆ ನಿರ್ದೇಶನ ನೀಡಿದೆ.
ಇನ್ನು ಸತ್ತುಪಲ್ಲಿ, ಮತಿರಾ, ನಲ್ಲಗೊಂಡ, ನಾಗಾರ್ಜುನ ಸಾಗರ್, ದೇವರಕೊಂಡ, ಮುನುಗೋಡ, ಮಿರಿಯಾಲಗುಡ ಮತ್ತು ಇತರ ಕ್ಷೇತ್ರಗಳಲ್ಲಿ ಬೆಳಗ್ಗೆ 6 ರಿಂದ ಮಧ್ಯಾಹ್ನ 1 ರವರೆಗೆ ಪ್ರಸ್ತುತ ನಿಯಮಗಳಂತೆ ಲಾಕ್ ಡೌನ್ ಅನ್ನು ಮುಂದುವರೆಸಲು ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ.