ರಾಯಚೂರು: ಪ್ರೊಬೇಷನರಿ ಐಪಿಎಸ್ ಅಧಿಕಾರಿಯೊಬ್ಬರು ಸರ್ಕಾರಿ ಶಾಲೆಯಲ್ಲಿ ಮಕ್ಕಳೊಂದಿಗೆ ಬಿಸಿಯೂಟ ಸವಿದು ಸರಳತೆ ಮೆರೆದಿದ್ದಾರೆ. ಸದ್ಯ ಈ ಅಧಿಕಾರಿಯ ಸರಳತೆ ಮೆಚ್ಚುಗೆಗೆ ಪಾತ್ರವಾಗಿದೆ.
ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸವಿದು ಸರಳತೆ ತೋರಿದ ಐಪಿಎಸ್ ಅಧಿಕಾರಿ - ನಿಖಿಲ್ ಬಳ್ಳಾವರ್
ಐಪಿಎಸ್ ಅಧಿಕಾರಿ ಸರ್ಕಾರಿ ಶಾಲೆಯಲ್ಲಿ ಮಕ್ಕಳೊಂದಿಗೆ ಬಿಸಿಯೂಟ ಸವಿದು ಸರಳತೆ ಮೆರೆದಿದ್ದಾರೆ. ಇವರ ಸರಳತೆಗೆ ಶಿಕ್ಷಕರು ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಜಿಲ್ಲೆಯ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರೊಬೇಷನರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಿಖಿಲ್ ಬಳ್ಳಾವರ್, ದೇವದುರ್ಗ ತಾಲೂಕಿನ ಕೊಪ್ಪರ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸವಿದ ಅಧಿಕಾರಿ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೂಕ್ಷ್ಮ ಮತಗಟ್ಟೆಗಳ ಮುಂಜಾಗ್ರತಾ ಕ್ರಮವಾಗಿ ಪರಿಶೀಲನೆ ನಡೆಸಲು ಇತ್ತೀಚೆಗೆ ಕೊಪ್ಪರ ಗ್ರಾಮದ ಸರ್ಕಾರಿ ಶಾಲೆಗೆ ತೆರಳಿದ್ರು. ಈ ವೇಳೆ ಮಧ್ಯಾಹ್ನದ ಊಟದ ಸಮಯವಾಗಿದ್ದರಿಂದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಸಹ ಬಿಸಿಯೂಟವನ್ನು ಊಟ ಮಾಡಿದ್ರು. ಈ ಮೂಲಕ ಕೆಲ ಉನ್ನತ ಅಧಿಕಾರಿಗಳು ಸಹ ಸಿಂಪಲ್ ಆಗಿರುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾದ್ರು.
ಉನ್ನತ ಅಧಿಕಾರಿಯೊಬ್ಬರು ತಮ್ಮೊಡನೆ ಊಟ ಮಾಡಿರುವುದಕ್ಕೆ ಶಾಲೆಯವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು. ಬಳಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಡನೆ ಅಧಿಕಾರಿ ಪೋಟೋ ಕ್ಲಿಕ್ಕಿಸಿಕೊಂಡರು. ಐಪಿಎಸ್ ಅಧಿಕಾರಿಯ ಸರಳತೆಗೆ ಶಿಕ್ಷಕರು ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ದೇವದುರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಿಖಿಲ್ ಬಳ್ಳಾವರ್ ಈ ಮೊದಲು ಸದರ್ ಬಜಾರ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ರು.