ನವದೆಹಲಿ: ಕಳೆದ 13 ದಿನಗಳಲ್ಲಿ ಭಾರತವು ಮೂರು ಲಕ್ಷ ರೆಮ್ಡೆಸಿವಿರ್ ಬಾಟಲ್ಗಳು, 6,738 ಆಮ್ಲಜನಕ ಸಾಂಧ್ರಕಗಳು ಹಾಗೂ 3,856 ಆಮ್ಲಜನಕ ಸಿಲಿಂಡರ್‌ಗಳು ಮತ್ತು 16 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಜಾಗತಿಕ ಸಮುದಾಯದಿಂದ ಪಡೆದುಕೊಂಡಿದೆ ಎಂದು ಅಧಿಕೃತ ಮಾಹಿತಿ ಹೊರಬಿದ್ದಿದೆ.
ಹಾಗೆಯೇ ಏಪ್ರಿಲ್ 4 ರಿಂದ ಮೇ 8 ರವರೆಗೆ ಒಟ್ಟು 4,668 ವೆಂಟಿಲೇಟರ್‌ಗನ್ನು ಸಹ ಭಾರತಕ್ಕೆ ಕಳುಹಿಸಲಾಗಿದೆ. ಕೆನಡಾ, ಥಾಯ್ಲೆಂಡ್, ನೆದರ್ಲ್ಯಾಂಡ್ಸ್, ಆಸ್ಟ್ರಿಯಾ, ಜೆಕ್ ರಿಪಬ್ಲಿಕ್, ಇಸ್ರೇಲ್, ಯುಎಸ್, ಜಪಾನ್, ಮಲೇಷ್ಯಾ, ಯುಎಸ್ (ಗಿಲಿಯಾಡ್), ಯುಎಸ್ (ಸೇಲ್ಸ್‌ಫೋರ್ಸ್) ಮತ್ತು ಥಾಯ್ಲೆಂಡ್ ದೇಶಗಳು ಭಾರತದ ಪರಿಸ್ಥಿತಿಗೆ ಸ್ಫಂದಿಸಿದ್ದು, ಅದರಲ್ಲೂ ಪ್ರಮುಖವಾಗಿ ಮುಖ್ಯವಾದ ವೈದ್ಯಕೀಯ ವಸ್ತುಗಳಾದ 2,404 ಆಮ್ಲಜನಕ ಸಾಂದ್ರಕಗಳು, 25,000 ರೆಮ್ಡೆಸಿವಿರ್ ಬಾಟಲುಗಳು , 218 ವೆಂಟಿಲೇಟರ್‌ಗಳು, ಮತ್ತು 6,92,208 ಪರೀಕ್ಷಾ ಕಿಟ್‌ಗಳನ್ನು ಈ ದೇಶಗಳಿಂದ ಸ್ವೀಕರಿಸಲಾಗಿದೆ.