ನವದೆಹಲಿ: ವಿಶ್ವದಾದ್ಯಂತದ ರೈತರಿಗಾಗಿ ವಿಶ್ವದ ಮೊದಲ ನ್ಯಾನೊ ಯೂರಿಯಾ ದ್ರವವನ್ನು ಪರಿಚಯಿಸಲಾಗಿದೆ ಎಂದು ಭಾರತೀಯ ರೈತ ರಸಗೊಬ್ಬರ ಸಹಕಾರಿ ಲಿಮಿಟೆಡ್ (ಇಫ್ಕೊ) ಹೇಳಿದೆ.
ಇಂದು ಇಫ್ಕೊ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯ ಪ್ರಕಾರ, ವಿಶ್ವದ ಮೊದಲ ನ್ಯಾನೊ ಯೂರಿಯಾ ದ್ರವವನ್ನು ಭಾರತದಲ್ಲಿ ಆನ್‌ಲೈನ್-ಆಫ್‌ಲೈನ್ ಮೋಡ್‌ನಲ್ಲಿ ನಡೆದ 50ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪರಿಚಯಿಸಲಾಗಿದೆ.
'ಆತ್ಮನಿರ್ಭಾರ ಭಾರತ್' ಮತ್ತು 'ಆತ್ಮನಿರ್ಭರ್ ಕೃಷಿ'ಗೆ ಅನುಗುಣವಾಗಿ ಕಲೋಲ್‌ನ ನ್ಯಾನೊ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.
ನ್ಯಾನೊ ಯೂರಿಯಾ ದ್ರವವನ್ನು ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಹಲವು ವರ್ಷಗಳ ಸಂಶೋಧನೆಯ ನಂತರ ಅಭಿವೃದ್ಧಿಪಡಿಸಿದ್ದಾರೆ ಎಂದು ಇಫ್ಕೊ ಹೇಳಿದೆ.
ಸಸ್ಯ ಪೋಷಣೆಗೆ ನ್ಯಾನೊ ಯೂರಿಯಾ ಲಿಕ್ವಿಡ್ ಪರಿಣಾಮಕಾರಿ. ಇದು ಸುಧಾರಿತ ಪೌಷ್ಠಿಕಾಂಶದ ಗುಣಮಟ್ಟದೊಂದಿಗೆ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಎಂದು ತಿಳಿದು ಬಂದಿದೆ.
ಇದು ಅಂತರ್ಜಲ ನೀರಿನ ಗುಣಮಟ್ಟದ ಮೇಲೆ ಭಾರಿ ಸಕಾರಾತ್ಮಕ ಪರಿಣಾಮ ಬೀರುತ್ತದೆಯಂತೆ. ಹಾಗೆ, ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಮೇಲೆ ಪ್ರಭಾವ ಬೀರುವ ಜಾಗತಿಕ ತಾಪಮಾನ ಏರಿಕೆಯಲ್ಲಿ ಗಮನಾರ್ಹ ಕೆಲಸ ಮಾಡಲಿದೆಯಂತೆ.
ಇದನ್ನೂ ಓದಿ:ಜೂನ್ 15ಕ್ಕೆ ಇಫ್ಕೋ ಸಂಸ್ಥೆಯ ನ್ಯಾನೋ ಯೂರಿಯಾ ಮಾರುಕಟ್ಟೆಗೆ: ಹೊಸ ಕೃಷಿ ಕ್ರಾಂತಿ ಎಂದ ಸದಾನಂದ ಗೌಡ
ಬಹಳಷ್ಟು ಯೂರಿಯಾ ಬಳಕೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ, ಮಣ್ಣಿನ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಮತ್ತು ಸಸ್ಯಗಳು ರೋಗ ಮತ್ತು ಕೀಟಗಳ ಮುತ್ತಿಕೊಳ್ಳುವಿಕೆಗೆ ಹೆಚ್ಚು ಒಳಗಾಗುವಂತೆ ಮಾಡುತ್ತದೆ. ಉತ್ಪಾದನಾ ನಷ್ಟವನ್ನು ಹೆಚ್ಚಿಸುತ್ತದೆ ಎಂದು ಇಫ್ಕೊ ಹೇಳಿದೆ.
ಹೀಗಾಗಿ, ರೈತರು ನ್ಯಾನೊ ಯೂರಿಯಾ ದ್ರವ ಬಳಕೆ ಮಾಡಿದರೆ ಹೆಚ್ಚುವರಿ ಬಳಕೆಯ ಯೂರಿಯಾವನ್ನು ಕಡಿಮೆ ಮಾಡುವ ಮೂಲಕ ಸಮತೋಲಿತ ಪೌಷ್ಠಿಕಾಂಶವನನ್ನು ಬೆಳೆಯಲ್ಲಿ ಹೆಚ್ಚಿಸಲಬಹುದಾಗಿದೆ. ಹಾಗೆ, ಬೆಳೆಗಳು ಬಲವಾದ, ಆರೋಗ್ಯಕರವಾಗಿರುತ್ತವೆ ಎಂದು ತಿಳಿಸಿದ್ದಾರೆ.
ಈ ನ್ಯಾನೊ ಯೂರಿಯಾ ದ್ರವವು ರೈತರಿಗೆ ಸುಲಭವಾಗಿ ಸಿಗಲಿದೆ. 500 ಮಿಲಿ ಬಾಟಲಿಯ ದ್ರವವು ಕನಿಷ್ಠ ಒಂದು ಚೀಲ ಯೂರಿಯಾಗೊಬ್ಬರಕ್ಕೆ ಸಮನಾಗಿರುತ್ತದೆ ಎಂದು ಇಪ್ಕೊ ಮಾಹಿತಿ ನೀಡಿದೆ. ಆದ್ದರಿಂದ, ಇದು ರೈತರ ಇನ್ಪುಟ್ ವೆಚ್ಚವನ್ನು ಕಡಿಮೆ ಮಾಡುತ್ತದೆ.
ಹಾಗೆ ಜೇಬಿನಲ್ಲಿಯೇ ಇಡಬಹುದು. ಸಣ್ಣ ಗಾತ್ರದ ಬಾಟಲ್ನಲ್ಲಿ ಇದು ಲಭ್ಯವಿದ್ದು, ಲಾಜಿಸ್ಟಿಕ್ಸ್ ಮತ್ತು ಗೋದಾಮಿನ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಅದು ಹೇಳಿದೆ.
ಇದರ ಪರಿಣಾಮಕಾರಿತ್ವವನ್ನು ಪರೀಕ್ಷಿಸಲು ಭಾರತದಾದ್ಯಂತ 94 ಕ್ಕೂ ಹೆಚ್ಚು ಬೆಳೆಗಳ ಮೇಲೆ ಸುಮಾರು 11,000 ರೈತ ಕ್ಷೇತ್ರ ಪ್ರಯೋಗಗಳನ್ನು (ಎಫ್‌ಎಫ್‌ಟಿ) ಕೈಗೊಳ್ಳಲಾಗಿದೆ.
94 ಬೆಳೆಗಳ ಮೇಲೆ ಇತ್ತೀಚೆಗೆ ನಡೆಸಿದ ದೇಶಾದ್ಯಂತ ಪ್ರಯೋಗಗಳಲ್ಲಿ, ಇಳುವರಿಯಲ್ಲಿ ಸರಾಸರಿ 8 ಪ್ರತಿಶತದಷ್ಟು ಹೆಚ್ಚಳ ಕಂಡು ಬಂದಿದೆ ಎಂದು ಇಫ್ಕೊ ಹೇಳಿದೆ.
ಸಾಂಪ್ರದಾಯಿಕ ಯೂರಿಯಾವನ್ನು ಬದಲಿಸಲು ನ್ಯಾನೊ ಯೂರಿಯಾ ಲಿಕ್ವಿಡ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಅದು ಅದರ ಅಗತ್ಯವನ್ನು ಕನಿಷ್ಠ 50 ಪ್ರತಿಶತದಷ್ಟು ಕಡಿತಗೊಳಿಸಬಹುದು ಎಂದು ಉಲ್ಲೇಖಿಸಿದೆ.
500 ಮಿಲಿ ಬಾಟಲಿಯಲ್ಲಿ 40,000 ಪಿಪಿಎಂ ಸಾರಜನಕವನ್ನು ಹೊಂದಿರುತ್ತದೆ, ಇದು ಸಾಂಪ್ರದಾಯಿಕ ಯೂರಿಯಾದ ಒಂದು ಚೀಲದಿಂದ ಒದಗಿಸುವ ಸಾರಜನಕ ಪೋಷಕಾಂಶಕ್ಕೆ ಸಮನಾಗಿರುತ್ತದೆ.
ಜೂನ್ 2021ರೊಳಗೆ ನ್ಯಾನೊ ಯೂರಿಯಾ ಲಿಕ್ವಿಡ್ ಉತ್ಪಾದನೆ ಪ್ರಾರಂಭವಾಗಲಿದೆ ಎಂದು ಇಫ್ಕೊ ತಿಳಿಸಿದೆ. ರೈತರಿಗೆ 500 ಮಿಲಿ ಬಾಟಲಿಗೆ 240 ರೂ.ಗಳಂತೆ ನಿಗದಿಪಡಿಸಲಾಗಿದೆ, ಇದು ಸಾಂಪ್ರದಾಯಿಕ ಯೂರಿಯಾದ ಚೀಲದ ಬೆಲೆಗಿಂತ ಶೇಕಡಾ 10 ರಷ್ಟು ಅಗ್ಗವಾಗಿದೆ.
ಇದನ್ನೂ ಓದಿ :ಜೂನ್ 15ಕ್ಕೆ ಇಫ್ಕೋ ಸಂಸ್ಥೆಯ ನ್ಯಾನೋ ಯೂರಿಯಾ ಮಾರುಕಟ್ಟೆಗೆ: ಹೊಸ ಕೃಷಿ ಕ್ರಾಂತಿ ಎಂದ ಸದಾನಂದ ಗೌಡ