ಮಂಡ್ಯ: ಕೆಲ ದಿನಗಳ ಹಿಂದೆ ಚೆನ್ನೈನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದ ಹುಚ್ಚ ವೆಂಕಟ್ ಇದೀಗ ಮಂಡ್ಯದಲ್ಲಿ ಅಡ್ಡಾಡುತ್ತಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಡ್ಯದಲ್ಲಿ ಹುಚ್ಚ ವೆಂಕಟ್... ವಿಡಿಯೋ ವೈರಲ್ - ಪಾಂಡವಪುರದ ಮಂಡ್ಯ ಸರ್ಕಲ್
ಹುಚ್ಚ ವೆಂಕಟ್ ಮಂಡ್ಯದ ಪಾಂಡವಪುರದಲ್ಲಿ ಕಾಣಸಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನಟ, ನಿರ್ಮಾಪಕ ಹುಚ್ಚ ವೆಂಕಟ್ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಅಭಿಮಾನಿಗಳು ಸಂಜೆ ಪಾಂಡವಪುರದಲ್ಲಿ ಅವರನ್ನು ಮಾತನಾಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಂಜೆ ಏಕಾಏಕಿ ಪಾಂಡವಪುರದ ಮಂಡ್ಯ ಸರ್ಕಲ್‌ನಲ್ಲಿ ಕಾಣಿಸಿಕೊಂಡಿದ್ದರಂತೆ. ಅಲ್ಲದೆ ಪ್ರತ್ಯಕ್ಷದರ್ಶಿಗಳು ಹುಚ್ಚ ವೆಂಕಟ್ ಕಾರಿನಲ್ಲಿ ಬಂದಿದ್ದನ್ನು ನೋಡಿದ್ದಾರೆ ಎನ್ನಲಾಗಿದೆ.
ಕಳೆದ 15 ದಿನದ ಹಿಂದೆ ಚೆನೈನಲ್ಲಿ ಹುಚ್ಚನ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದು ಸುದ್ದಿಯಾಗಿತ್ತು. ಚಪ್ಪಲಿ ಇಲ್ಲದೇ, ಹರಿದ ಬಟ್ಟೆಯಲ್ಲಿ ಅಡ್ಡಾಡುತ್ತಿದ್ದ ಹುಚ್ಚ ವೆಂಕಟ್ ವಿಡಿಯೋ ವೈರಲ್ ಆಗಿತ್ತು.