ಕರ್ನಾಟಕ

karnataka

ETV Bharat / headlines

ಬಲವಾದ ಇಚ್ಛಾಶಕ್ತಿಯಿಂದ ಕೊರೊನಾ ಗೆದ್ದ ಸೀನಿಯರ್ಸ್​​ ಇವರು!! - ಕೊರೊನಾ ಗೆದ್ದ ಸೀನಿಯರ್​ ಸಿಟಿಜನ್​

ಇಚ್ಛಾಶಕ್ತಿ, ದೃಢ ಮನಸ್ಸಿನ ಸ್ಥಿತಿಯಿಂದ ಕೊರೊನಾವನ್ನು ಸೋಲಿಸುವ ಮೂಲಕ ತಮ್ಮ ವಿಲ್​ ಪವರ್​ನ್ನು ತೋರಿಸಿಕೊಟ್ಟಿದ್ದಾರೆ ಈ ಕೆಲವು ಧೀರ ಅನುಭವಿ ಕೊರೊನಾ ಯೋಧರು..

gujarath
gujarath

By

Published : Apr 29, 2021, 8:43 PM IST

ಸೂರತ್(ಗುಜರಾತ್):ಕೊರೊನಾ ಸೋಂಕು ತನ್ನ ಬಾಹುವನ್ನು ಮತ್ತಷ್ಟು ಹೆಚ್ಚಿಸುತ್ತಲೇ ಹೋಗುತ್ತಿದೆ. ಎಷ್ಟೋ ಮಂದಿ ಇದಕ್ಕೆ ನಲುಗಿ ಹೋಗಿದ್ದಾರೆ, ಪ್ರಾಣ ತೆತ್ತಿದ್ದಾರೆ. ಈ ನಡುವೆ ಕೆಲ ಹಿರಿಯರು ತಮ್ಮ ಇಚ್ಛಾಶಕ್ತಿ, ದೃಢ ಮನಸ್ಸಿನ ಸ್ಥಿತಿಯಿಂದ ಕೊರೊನಾವನ್ನು ಸೋಲಿಸುವ ಮೂಲಕ ತಮ್ಮ ವಿಲ್​ ಪವರ್​ನ್ನು ತೋರಿಸಿಕೊಟ್ಟಿದ್ದಾರೆ. ಈ ಕೆಲವು ಧೀರ ಅನುಭವಿ ಕೊರೊನಾ ಯೋಧರ ಬಗ್ಗೆ ವಿಶೇಷ ವರದಿ ಇಲ್ಲಿದೆ

105 ವರ್ಷದ ಅಜ್ಜಿಗೆ ಶರಣಾದ ಕೊರೊನಾ

ಸೂರತ್​ನ ಸಚಿನ್ ಗ್ರಾಮದ 105 ವರ್ಷದ ಉಜಿಬಾಗೆ ಕೊರೊನಾ ರೋಗ ಬಾಧಿಸಿತ್ತು. ಆದ್ರೆ ಬಲವಾದ ಇಚ್ಛಾಶಕ್ತಿಯುಳ್ಳ ಅಜ್ಜಿಗೆ ಕೊರೊನಾವೇ ಶರಣಾಗಿ ಹೋಗಿತ್ತು. ಅಜ್ಜಿಯು ರೋಗದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಾಗ ಆಕೆಯ ಕುಟುಂಬವು ತುಂಬಾ ಸಂತೋಷ ವ್ಯಕ್ತಪಡಿಸಿತ್ತು. 105 ವರ್ಷ ವಯಸ್ಸಿನ ಉಜಿಬಾರ ನೇರ ನಿಲುವು ಯುವಕರನ್ನೂ ನಾಚಿಸುವಂತಿದೆ. ಮಗನೇ, ಕೊರೊನಾ ನನಗೆ ಯಾವುದೇ ಹಾನಿ ಮಾಡಲಾರದು. ನನಗೆ ಏನೂ ಆಗುವುದಿಲ್ಲ. ನಾನು ಸಂಪೂರ್ಣವಾಗಿ ಚೇತರಿಸಿಕೊಂಡು ಮನೆಗೆ ಬರುತ್ತೇನೆ, ಎಂಬ ಮಾತುಗಳನ್ನು ಹೇಳಿದಾಗ, ಅವಳಿಗೆ ಚಿಕಿತ್ಸೆ ನೀಡುವ ವೈದ್ಯರು ಆಕೆಯ ಆತ್ಮವಿಶ್ವಾಸವನ್ನು ನೋಡಿ ಆಶ್ಚರ್ಯಚಕಿತರಾದರು.

ಆದ್ರೆ ಆಕೆ ಹೇಳಿದಂತೆ ಒಂಬತ್ತು ದಿನಗಳ ಚಿಕಿತ್ಸೆಯ ನಂತರ ಆಕೆಯ ಕೊರೊನಾ ವರದಿ ನೆಗೆಟಿವ್ ಬಂದಿತ್ತು.

ಕೊರೊನಾ ಸೋಲಿಸಿದ ಸೂರತ್‌ನ ಇಬ್ಬರು ಹಿರಿಯ ನಾಗರಿಕರು

ಸೂರತ್‌ನ ಹೊಸ ಸಿವಿಲ್ ಆಸ್ಪತ್ರೆಯ ಕಿಡ್ನಿ ಆಸ್ಪತ್ರೆಯಲ್ಲಿ ದಾಖಲಾದ ಇಬ್ಬರು ಹಿರಿಯ ನಾಗರಿಕರು ಕೋವಿಡ್​ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡರು. ಸೂರತ್‌ನ ಕತಾರ್ಗಂ ಪ್ರದೇಶದ ನಿವಾಸಿ, 75 ವರ್ಷದ ಮಧುಮೇಹಿ ಗೋರ್ಧನ್‌ಭಾಯ್ ಆಶರಾಮ್, ಮತ್ತು 65 ವರ್ಷದ ಶ್ಯಾಮ್ ಹಿರಾಚಂದ್ ಬ್ರಿಜ್ವಾನಿ ಅವರು ಆಕ್ಸಿಜನ್ ಪಡೆದು ಚಿಕಿತ್ಸೆಗೊಳಗಾಗಿದ್ದರು. ಆದ್ರೆ ಇಬ್ಬರೂ ವೈದ್ಯಕೀಯ ಚಿಕಿತ್ಸೆಯ ನಂತರ ಚೇತರಿಸಿಕೊಂಡು ತಮ್ಮ ಮನೆಗಳಿಗೆ ಮರಳಿದ್ದಾರೆ.

ಗೋರ್ಧನ್‌ಭಾಯ್ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಅವರ ಸೋಂಕು 40 ರಿಂದ 50 ಪ್ರತಿಶತದಷ್ಟಿತ್ತು ಮತ್ತು ಉಸಿರಾಟದ ತೊಂದರೆ ಕಾರಣ ಹತ್ತು ದಿನಗಳ ಕಾಲ ಆಮ್ಲಜನಕವನ್ನು ಹಾಕಲಾಯಿತು. ಆದ್ರೆ 11 ನೇ ದಿನ ಬಿಡುಗಡೆ ಮಾಡಲಾಯಿತು. ಅವರಿಗೆ ಐದು ಡೋಸ್ ರೆಮ್ಡೆಸಿವಿರ್​ ಚುಚ್ಚುಮದ್ದನ್ನು ಸಹ ನೀಡಲಾಯಿತು. ಶ್ಯಾಮ್ ಹಿರಾಚಂದ್ ಬ್ರಿಜ್ವಾನಿ ಅವರನ್ನು ಸಿವಿಲ್ ಆಸ್ಪತ್ರೆಗೆ ಕರೆತಂದಾಗ ಅವರಿಗೆ 40 ಪ್ರತಿಶತದಷ್ಟು ಸೋಂಕು ಇತ್ತು. ಅವರಿಗೂ ಒಂಬತ್ತು ದಿನಗಳ ಕಾಲ ಆಮ್ಲಜನಕವನ್ನು ಹಾಕಲಾಯಿತು. ಅವನೂ ಸಹ ಆ ಬಳಿಕ ಸಂಪೂರ್ಣವಾಗಿ ಚೇತರಿಸಿಕೊಂಡನು.

ಆಕ್ಸಿಜನ್ ಮಟ್ಟವು 56 ಕ್ಕೆ ಇಳಿದ ಬಳಿಕವೂ ಕೊರೊನಾ ಗೆದ್ದ ದಿಟ್ಟೆ

ಕೊರೊನಾವನ್ನು ಸೋಲಿಸಿದ 50 ವರ್ಷದ ರೋಗಿ ತರುಬೆನ್ ಪಿಥಾಡಿಯಾ ಅವರ ಪ್ರಕರಣವು ಇಲ್ಲಿ ಮುಖ್ಯವಾಗಿದೆ. ಏಕೆಂದರೆ ಚಿಕಿತ್ಸೆಯ ಸಮಯದಲ್ಲಿ ಆಕೆಯ ಆಮ್ಲಜನಕದ ಮಟ್ಟವು ಒಂದು ಹಂತದಲ್ಲಿ 56 ಕ್ಕೆ ಇಳಿದಿತ್ತು. ಆದರೂ, ಆರು ದಿನಗಳ ಚಿಕಿತ್ಸೆಯ ನಂತರ ಅವಳು ಸಂಪೂರ್ಣವಾಗಿ ಚೇತರಿಸಿಕೊಂಡಳು. ಕೊರೊನಾಗೆ ರಾಜ್ಯ ಸರ್ಕಾರವು ನೀಡುತ್ತಿರುವ ಚಿಕಿತ್ಸೆ ಮತ್ತು ಸೌಲಭ್ಯ ತುಂಬಾ ಒಳ್ಳೆಯದಿದೆ. ನನಗೆ ಆರು ದಿನಗಳವರೆಗೆ ಉಚಿತವಾಗಿ ಔಷಧ, ಚಿಕಿತ್ಸೆ, ಆಮ್ಲಜನಕವನ್ನು ನೀಡಲಾಯಿತು. ಖಾಸಗಿ ಆಸ್ಪತ್ರೆಯಾಗಿದ್ದರೆ ನನಗೆ ಲಕ್ಷಾಂತರ ವೆಚ್ಚವಾಗುತ್ತಿತ್ತು. ಆದ್ರೆ ಒಂದೇ ರೂಪಾಯಿ ಖರ್ಚು ಮಾಡದೆ ಚಿಕಿತ್ಸೆ ಪಡೆದೆ ಅಂತಾರೆ ತರುಬೆನ್.

ರಾಜ್‌ಕೋಟ್‌ನಲ್ಲಿ ಕೊರೊನಾ ಗೆದ್ದು ಬೀಗಿದ ನಾಲ್ವರು ವೃದ್ಧರು

ವಯಸ್ಸಿನ ಹೊರತಾಗಿಯೂ, ಕೊರೊನಾವನ್ನು ಆತ್ಮವಿಶ್ವಾಸ ಮತ್ತು ಚಿಕಿತ್ಸೆಯ ಸಾಲಿನಲ್ಲಿ ನಂಬಿಕೆಯೊಂದಿಗೆ ಸೋಲಿಸಬಹುದು. ರಾಜ್‌ಕೋಟ್‌ನ ಸಾಮ್ರಾಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸದ್ಭಾವನಾ ಓಲ್ಡ್​ಏಜ್ ಹೋಂನ ನಾಲ್ಕು ಕೊರೊನಾ ಯೋಧರು ಆತ್ಮ ವಿಶ್ವಾಸದಿಂದ ವೈದ್ಯಕೀಯ ಚಿಕಿತ್ಸೆಯಿಂದಾಗಿ ಮಾರಣಾಂತಿಕ ರೋಗವನ್ನು ಸೋಲಿಸಿದ್ದಾರೆ. ಸಮ್ರಾಸ್ ಕೋವಿಡ್ ಕೇಂದ್ರದಲ್ಲಿ 14 ದಿನಗಳು ತಂಗಿದ್ದಾಗ ಅವರಿಗೆ ಮನೆಯ ರೀತಿಯೇ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಅವರು ಹೇಳಿದರು.

ಕೊರೊನಾ ಮೆಟ್ಟಿ ನಿಂತ ರಾಜ್‌ಕೋಟ್‌ನ ಚಂಪಾಬೆನ್‌

ರಾಜ್‌ಕೋಟ್‌ನ ಕ್ಯಾನ್ಸರ್ ಕೋವಿಡ್​ ಆಸ್ಪತ್ರೆಯಲ್ಲಿ ಹತ್ತು ದಿನಗಳ ಕಾಲ ತಂಗಿ ಬಳಿಕ ಮನೆಗೆ ಮರಳಿದ 75 ವರ್ಷದ ಚಂಪಾಬೆನ್‌ನ ಮೊರ್ಬಿಯ ಮಾತುಗಳು ಇವು. ಸರ್ಕಾರಿ ಆಸ್ಪತ್ರೆಯ ಬಗ್ಗೆ ಜನರ ನಕಾರಾತ್ಮಕ ಅನಿಸಿಕೆ ಬದಲಾಯಿಸಲು ಆಕೆ ತಿಳಿಸಿದ್ದಾಳೆ. ಸಿವಿಲ್ ಆಸ್ಪತ್ರೆಯಲ್ಲಿ ಆಕೆ ಪಡೆದ ಚಿಕಿತ್ಸೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾಳೆ. ವೈದ್ಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿಗಳು ಆಕೆಗೆ ಸಲ್ಲಿಸಿದ ಸಮರ್ಪಿತ ಸೇವೆಯನ್ನು ನೆನಪಿಸಿಕೊಂಡ ಆಕೆಯ ಅಳಿಯ ನಾರನ್‌ಭಾಯ್ ಪರ್ಮಾರ್ ಅವರು ಖಾಸಗಿ ಆಸ್ಪತ್ರೆಯಲ್ಲಿ ಪಡೆಯುವುದಕ್ಕಿಂತ ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಪಡೆದೆವು ಎಂದು ಹೇಳುತ್ತಾರೆ.

ಕೊರೊನಾ, ಕ್ಯಾನ್ಸರ್ ಎರಡನ್ನೂ ಜಯಿಸಿದ ವೀರ ಮಹಿಳೆ

ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುತ್ತಿರುವಾಗ 63 ವರ್ಷದ ಚಂದ್ರಿಕಾಬೆನ್​ಗೆ ಕೊರೊನಾ ಬಾಧಿಸಿತ್ತು. ಆಕೆಗೆ ಕೋವಿಡ್​ ಪಾಸಿಟಿವ್​ ಬಂದಾಗ ಕುಟುಂಬ ಸದಸ್ಯರು ತೀವ್ರ ಆತಂಕಕ್ಕೊಳಗಾಗಿದ್ದರು. ಆದರೆ ಅವಳು ತನ್ನ ಧೈರ್ಯದಿಂದ ಎರಡೂ ಕಾಯಿಲೆಗಳನ್ನು ಸೋಲಿಸಿದಳು. ಕಳೆದ ವರ್ಷ ಬೆನ್​ಗೆ ಹೊಟ್ಟೆಯಲ್ಲಿ ನಿರಂತರ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾದಾಗ ಆಕೆ ಮೇದೋಜೀರಕ ಗ್ರಂಥಿಯ ಕ್ಯಾನ್ಸರ್​ನಿಂದ ಬಳಲುತ್ತಿದ್ದು, ಅದು ಮೂರನೇ ಹಂತದಲ್ಲಿದೆ ಎಂದು ತಿಳಿದುಬಂದಿದೆ. ಚಿಕಿತ್ಸೆಯ ಸಮಯದಲ್ಲಿ, ಆಕೆ ಕೋವಿಡ್​ಗೆ ವಕ್ಕರಿಸಿಕೊಂಡಿತ್ತು. ಆದರೂ ಧೈರ್ಯಗೆಡದ ಆಕೆ ಎರಡೂ ರೋಗಗಳ ವಿರುದ್ಧ ಹೋರಾಟವನ್ನು ಮಾಡಿದ್ದರು. ಇಂದು, ಅವಳು ಎರಡೂ ಕಾಯಿಲೆಗಳಿಂದ ಗುಣಮುಖಳಾಗಿದ್ದಾಳೆ ಮತ್ತು ಸಾಮಾನ್ಯ ಜೀವನವನ್ನು ನಡೆಸುತ್ತಿದ್ದಾಳೆ.

For All Latest Updates

TAGGED:

Gujarat News

ABOUT THE AUTHOR

...view details