ಪಾಲಿ (ರಾಜಸ್ಥಾನ): ಶಸ್ತ್ರಸಜ್ಜಿತ ದರೋಡೆಕೋರರು ಆಭರಣ ಅಂಗಡಿಗೆ ನುಗ್ಗಿ 50 ಲಕ್ಷ ರೂಪಾಯಿ ಮೌಲ್ಯದ ಆಭರಣ ಮತ್ತು 2 ಲಕ್ಷ ರೂಪಾಯಿ ಹಣವನ್ನು ದರೋಡೆ ಮಾಡಿದ್ದಾರೆ. ರಾಜಸ್ಥಾನದ ಪಾಲಿಯಲ್ಲಿ ಈ ಘಟನೆ ಜರುಗಿದೆ.
ದುಷ್ಕರ್ಮಿಗಳು ದಾಳಿ ವೇಳೆ ಮೊಬೈಲ್ ಫೋನ್, ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ನಾಶಪಡಿಸಿದ್ದಾರೆ. ಘಟನೆ ಸಂಬಂಧ ಮಾಹಿತಿ ಪಡೆದ ನಂತರ, ಪೊಲೀಸ್ ಅಧಿಕಾರಿಗಳು ತಂಡದೊಂದಿಗೆ ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ಕೃತ್ಯ ಎಸಗಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.