ನವದೆಹಲಿ: ಕೇಂದ್ರ ರಕ್ಷಣಾ ಸಚಿವಾಲಯ ಮತ್ತು ಭಾರತೀಯ ಸೇನೆ ವತಿಯಿಂದ ಉದ್ಯೋಗಕ್ಕೆ ಅರ್ಜಿ ಕರೆಯಲಾಗಿದೆ. ಸೈನ್ಯಕ್ಕೆ ಸೇರಲು ಆಸಕ್ತಿ ಹೊಂದಿರುವ ಮಹಿಳೆಯರಿಗೂ ಇದೊಂದು ಸುವರ್ಣಾವಕಾಶ.
ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಎಎಸ್‌ಸಿ ಕೇಂದ್ರ (ದಕ್ಷಿಣ) -2ದಲ್ಲಿ ಅಡುಗೆ ತಯಾರಕರು, ಚಾಲಕ ಮತ್ತು ನಾಗರಿಕ ಬೋಧಕ ಹುದ್ದೆಗೆ ಖಾಲಿ ಇರುವ 100 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.10 ನೇ ತರಗತಿ ಪಾಸ್ ಆದ ಯುವಕರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರು ಅರ್ಜಿಯೊಂದಿಗೆ ದೃಢೀಕರಿಸಿದ ದಾಖಲೆಗಳನ್ನು ಅಂಚೆ ಮೂಲಕ ಕಳುಹಿಸಬೇಕು. ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಜೂನ್ 12.
ವಿವರಗಳು:
ಹುದ್ದೆ | ಹುದ್ದೆ ಸಂಖ್ಯೆ | ಸಂಬಳ |
ಕ್ಲೀನರ್ | 40 ಹುದ್ದೆ | Rs 18,000/ಮಾಸಿಕ |
ಅಡುಗೆ ತಯಾರಕ | 15 ಹುದ್ದೆ | Rs 19,900/ಮಾಸಿಕ |
ವಾಹನ ಚಾಲಕ | 42 ಹುದ್ದೆ | Rs 19,900/ಮಾಸಿಕ |
ನಾಗರಿಕ ಅಡುಗೆ ಬೋಧಕ | 3 ಹುದ್ದೆ | Rs 19,900/ಮಾಸಿಕ |
ಅರ್ಹತೆ:
ಕ್ಲೀನರ್- 10 ನೇ ತರಗತಿ ಉತ್ತೀರ್ಣ, ಸಂಬಂಧಿತ ಕೆಲಸದಲ್ಲಿ ನುರಿತ
ಅಡುಗೆ ತಯಾರಕ- 10 ನೇ ತರಗತಿ ಉತ್ತೀರ್ಣ, ಅಡುಗೆಯಲ್ಲಿ ನುರಿತ (ಕನಿಷ್ಠ 1 ವರ್ಷದ ಅನುಭವದೊಂದಿಗೆ)
ವಾಹನ ಚಾಲಕ-ಹೆವಿ ಮೋಟಾರ್ ವಾಹನ ಚಾಲಕರ ಪರವಾನಗಿ ಇರಬೇಕು 2 ವರ್ಷಗಳ ಚಾಲನಾ ಅನುಭವ ಇರಬೇಕು.
ನಾಗರಿಕ ಅಡುಗೆ ಬೋಧಕ- 10 ನೇ ತರಗತಿ ಉತ್ತೀರ್ಣ ಆಗಿರಬೇಕು. ಅಡುಗೆ ಡಿಪ್ಲೊಮಾ, ಅಡುಗೆ ಬೋಧಕರಾಗಿ 1 ವರ್ಷದ ಅನುಭವ ಇರಬೇಕು.
ವಯಸ್ಸಿನ ಮಿತಿ- 18 ರಿಂದ 25 ವರ್ಷಗಳು
ಅರ್ಜಿ ಕಳುಹಿಸಲು ವಿಳಾಸ:
ಪ್ರಿಸೈಡಿಂಗ್ ಅಧಿಕಾರಿ, ನಾಗರಿಕ ನೇರ ನೇಮಕಾತಿ ಮಂಡಳಿ, ಸಿಎಚ್‌ಕ್ಯು, ಎಎಸ್‌ಸಿ ಕೇಂದ್ರ (ದಕ್ಷಿಣ) -2 ಎಟಿಸಿ, ಅಡ್ವಾನ್ಸ್ ಪೋಸ್ಟ್, ಬೆಂಗಳೂರು -07
ಮಹಿಳಾ ಸೈನಿಕರಿಗೆ ಅರ್ಜಿ ಆಹ್ವಾನ: