ಕರ್ನಾಟಕ

karnataka

ETV Bharat / headlines

ಕೋವಿಡ್​ ಎರಡನೇ ಅಲೆ.. ತಮಿಳುನಾಡು ಇಂದಿನಿಂದ ಲಾಕ್​ - ತಮಿಳುನಾಡು ಲಾಕ್​ಡೌನ್​

ಶೇ 50 ರಷ್ಟು ಪ್ರಯಾಣಿಕರೊಂದಿಗೆ ಮಾತ್ರ ರೈಲು, ಮೆಟ್ರೋ ಮತ್ತು ಬಸ್ ಸೇವೆಗೆ ಅವಕಾಶ ನೀಡಲಾಗಿದೆ. ಹವಾನಿಯಂತ್ರಣವಿಲ್ಲದ ದಿನಸಿ ಮತ್ತು ತರಕಾರಿ ಅಂಗಡಿಗಳನ್ನು ಹೊರತುಪಡಿಸಿ ಯಾವುದೇ ಮಳಿಗೆಗಳಿಗೆ ಅನುಮತಿ ಇಲ್ಲ.

Tamilnadu
Tamilnadu

By

Published : May 6, 2021, 7:23 PM IST

ಚೆನ್ನೈ(ತಮಿಳುನಾಡು):ಕೋವಿಡ್​ ಪ್ರಕರಣಗಳ ಉಲ್ಬಣವನ್ನು ತಡೆಯಲು, ತಮಿಳುನಾಡು ಸರ್ಕಾರ ಮೇ 6 ರಿಂದ 20ರ ವರೆಗೆ ಹೊಸ ನಿರ್ಬಂಧಗಳನ್ನು ಪ್ರಕಟಿಸಿದೆ.

ಕೋವಿಡ್​ ಪರಿಸ್ಥಿತಿ ಕುರಿತು ಮುಖ್ಯ ಕಾರ್ಯದರ್ಶಿ ರಾಜೀವ್ ರಂಜನ್ ಸೇರಿದಂತೆ ರಾಜ್ಯದ ಉನ್ನತ ಅಧಿಕಾರಿಗಳು ಡಿಎಂಕೆ ನಾಯಕ, ನಿಯೋಜಿತ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರೊಂದಿಗೆ ವಿವರವಾಗಿ ಸಭೆ ನಡೆಸಿದರು. ಹೊಸ ನಿರ್ಬಂಧಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಶೇಕಡಾ 50 ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಲಾಗಿದೆ.

ಶೇ 50 ರಷ್ಟು ಪ್ರಯಾಣಿಕರೊಂದಿಗೆ ಮಾತ್ರ ರೈಲು, ಮೆಟ್ರೋ ಮತ್ತು ಬಸ್ ಸೇವೆಗೆ ಅವಕಾಶ ನೀಡಲಾಗಿದೆ. ಹವಾನಿಯಂತ್ರಣವಿಲ್ಲದ ದಿನಸಿ ಮತ್ತು ತರಕಾರಿ ಅಂಗಡಿಗಳನ್ನು ಹೊರತುಪಡಿಸಿ ಯಾವುದೇ ಮಳಿಗೆಗಳಿಗೆ ಅನುಮತಿ ಇಲ್ಲ. ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಲ್ಲಿ ಟೇಕ್‌ಅವೇ ಸೇವೆಗಳನ್ನು ಅನುಮತಿಸಲಾಗುವುದು. ಚಹಾ ಅಂಗಡಿಗಳು ಮಧ್ಯಾಹ್ನ 12 ರವರೆಗೆ ತೆರೆದಿರುತ್ತವೆ. ಸಭಾಂಗಣಗಳು, ತೆರೆದ ಸಭೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಅಂತ್ಯಕ್ರಿಯೆಯಲ್ಲಿ ಕೇವಲ 20 ಜನರಿಗೆ ಮತ್ತು ಮದುವೆಗಳಲ್ಲಿ 50 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. ಕರ್ಫ್ಯೂ ಭಾನುವಾರದಂದು ಜಾರಿಯಲ್ಲಿರುತ್ತದೆ.

ಇನ್ನು ಆಹಾರ ಆದೇಶದಲ್ಲಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಾದ ಸ್ವಿಗ್ಗಿ ಮತ್ತು ಜೋಮ್ಯಾಟೊ ಬೆಳಿಗ್ಗೆ 6 ರಿಂದ 10 ರವರೆಗೆ, ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಮತ್ತು ಸಂಜೆ 6 ರಿಂದ 9 ಗಂಟೆಯವರೆಗೆ ರೆಸ್ಟೋರೆಂಟ್‌ಗಳಿಂದ ಆಹಾರವನ್ನು ತೆಗೆದುಕೊಳ್ಳಲು ಅನುಮತಿಸಲಾಗಿದೆ. ಅಗತ್ಯ ಸೇವೆಗಳು, ಮಾಧ್ಯಮ, ಸರಕು ಸಾಗಣೆ ಮತ್ತು ವೈದ್ಯಕೀಯ ಅವಸರಗಳನ್ನು 24 ಗಂಟೆಯೂ ಅನುಮತಿಸಲಾಗುವುದು. ನೈಟ್​ ಕರ್ಫ್ಯೂ ರಾತ್ರಿ 10 ರಿಂದ ಬೆಳಗ್ಗೆ 4 ರವರೆಗೆ ಮುಂದುವರಿಯಲಿದೆ.

ತಮಿಳುನಾಡಿನಲ್ಲಿ ಸತತ ಎರಡನೇ ದಿನ 20,000 ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯದ ಆರೋಗ್ಯ ಇಲಾಖೆ ತಿಳಿಸಿದೆ. ತಮಿಳುನಾಡಿನಲ್ಲಿ ಕೊರೊನಾಗೆ ಕನಿಷ್ಠ 1.20 ಲಕ್ಷ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 18,000 ಕ್ಕೂ ಹೆಚ್ಚು ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ಚೆನ್ನೈನಲ್ಲಿ ಮಾತ್ರ ಬುಧವಾರ 6,000 ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿವೆ. ಚೆಂಗಲ್ಪಟ್ಟು, ಕೊಯಮತ್ತೂರು, ತಿರುವಳ್ಳೂರು ಜಿಲ್ಲೆಗಳಲ್ಲಿ 24 ಗಂಟೆಗಳಲ್ಲಿ ತಲಾ 1,000 ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿವೆ.

ABOUT THE AUTHOR

...view details