ಬೆಂಗಳೂರು :ಕಾಳಸಂತೆಯಲ್ಲಿ ರೆಮ್ಡಿಸಿವರ್ ಮಾರಾಟ ಮತ್ತು ಖಾಲಿ ರೆಮ್ಡಿಸಿವರ್ ಬಾಟಲ್ಗಳಲ್ಲಿ ಆ್ಯಂಟಿಬಯೋಟಿಕ್ ಹಾಕಿ ಜನರಿಗೆ ವಂಚನೆ ಮಾಡುತ್ತಿದ್ದ ವೈದ್ಯನನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಅಜಯ್ ಕುಮಾರ್ ಯಾದವ್ ಬಂಧಿತ ವೈದ್ಯ. ಬಂಧಿತನಿಂದ ₹36 ಸಾವಿರ ಬೆಲೆಯ 8 ನಕಲಿ ರೆಮಿಡಿಸಿವರ್ ವಶಕ್ಕೆ ಪಡೆಯಲಾಗಿದೆ. ಆರೋಪಿಯು ಮೂಲತಃ ಉತ್ತರಪ್ರದೇಶವನಾಗಿದ್ದು, ಹಲವು ವರ್ಷಗಳಿಂದ ಬಾಗಲೂರಿನಲ್ಲಿ ನೆಲೆಸಿದ್ದ. ಇನ್ನು, ಸ್ವಂತ ಕ್ಲಿನಿಕ್ ಹೊಂದಿದ್ದ ಈತ, ಕೆಲ ಆಸ್ಪತ್ರೆಗಳಿಗೆ ವಿಸಿಟರ್ ಡಾಕ್ಟರ್ನಾಗಿ ಕೆಲಸ ಮಾಡುತ್ತಿದ್ದ.
ನಗರದಲ್ಲಿ ಕೊರೊನಾ ಹೆಚ್ಚಾದಂತೆ ರೆಮ್ಡಿಸಿವರ್ ಇಂಜೆಕ್ಷನ್ಗೆ ಹೆಚ್ಚಿನ ಬೇಡಿಕೆ ಬಂದಿತ್ತು. ಈ ವೇಳೆ ಆಸ್ಪತ್ರೆಯಿಂದ ಕದ್ದು ತಂದ ರೆಮ್ಡಿಸಿವರನ್ನು ತಮ್ಮ ಕ್ಲಿನಿಕ್ನ ರೋಗಿಗಳಿಗೆ ಸುಮಾರು 11 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದ ಎಂದು ನಗರ ಪೂರ್ವ ವಿಭಾಗದ ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ.