ಬಲರಾಂಪುರ (ಉತ್ತರ ಪ್ರದೇಶ): ಪಿಪಿಇ ಕಿಟ್ ಧರಿಸಿದ ವ್ಯಕ್ತಿ ಸೇರಿ 4 ಮಂದಿ ಮೃತದೇಹವನ್ನು ಸೇತುವೆಯೊಂದರಿಂದ ರಾಪ್ತಿ ನದಿಗೆ ಎಸೆಯಲು ಪ್ರಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊಟ್ವಾಲಿ ನಗರದ ಸಿಸಾಯ್ ಘಾಟ್ ಸೇತುವೆಯ ಮೇಲೆ ನಡೆದಿರುವ ಘಟನೆ ಎಂದು ತಿಳಿದು ಬಂದಿದೆ.
ವಿಡಿಯೋವನ್ನು ದಾರಿಹೋಕರು ಚಿತ್ರೀಕರಿಸಿದ್ದಾರೆ. ಇನ್ನು, ಈ ಬಗ್ಗೆ ಮಾತನಾಡಿದ ಬಲರಾಂಪುರದ ಮುಖ್ಯ ವೈದ್ಯಾಧಿಕಾರಿ (ಸಿಎಂಒ) ಡಾ.ವಿಜಯ್ ಬಹದ್ದೂರ್ ಸಿಂಗ್, ಘಟನೆ ಬಗ್ಗೆ ಕ್ರಮ ಕೈಗೊಂಡಿದ್ದು, ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.