ಬೆಂಗಳೂರು: ಎಚ್‌ಎಎಲ್ ತನ್ನ ವಿವಿಧ ಸಂಕೀರ್ಣಗಳು ಮತ್ತು ವಿಭಾಗದಲ್ಲಿ ಕೆಲಸ ಮಾಡುವ ನೌಕರರಿಗೆ ರಜೆ ನೀಡಿದೆ.
ಕೊರೊನಾ ಉಲ್ಬಣ: ಹೆಚ್ಎಎಲ್ ಉದ್ಯೋಗಿಗಳಿಗೆ ರಜೆ ಘೋಷಣೆ - Essential services like medical, water, electricity etc remain undisrupted
ಕೊರೊನಾ ಸಂಖ್ಯೆ ಹೆಚ್ಚಳ ಹಿನ್ನೆಲೆ ಹೆಚ್ಎಎಲ್ ಸಂಸ್ಥೆ ತನ್ನ ಸಿಬ್ಬಂದಿಗಳಿಗೆ ವೇತನ ಸಹಿತ ರಜೆ ಘೋಷಣೆ ಮಾಡಿದೆ. ಬೆಂಗಳೂರಿನಲ್ಲಿ ಏಪ್ರಿಲ್ 23 ರಿಂದ 27 ರವರೆಗೆ, ಲಖನೌ / ಕಾನ್ಪುರದಲ್ಲಿ 21 ರಿಂದ 23 ರವರೆಗೆ, ನಾಸಿಕ್ನಲ್ಲಿ 21 ರಿಂದ 24 ರವರೆಗೆ ಹೆಚ್ಎಎಲ್ ಮುಚ್ಚಲಾಗಿದೆ.
ಬೆಂಗಳೂರಿನಲ್ಲಿ ಏಪ್ರಿಲ್ 23 ರಿಂದ 27 ರವರೆಗೆ, ಲಖನೌ / ಕಾನ್ಪುರದಲ್ಲಿ 21 ರಿಂದ 23 ರವರೆಗೆ, ನಾಸಿಕ್ನಲ್ಲಿ 21 ರಿಂದ 24 ರವರೆಗೆ ಹೆಚ್ಎಎಲ್ ಮುಚ್ಚಲಾಗಿದೆ. ಕೋವಿಡ್ ಸಂಬಂಧ ಎಚ್ಚರಿಕೆ ವಹಿಸುವಂತೆ ನೌಕರರಿಗೆ ಸೂಚಿಸಲಾಗಿದೆ. ಸಂಸ್ಥೆಯು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುತ್ತದೆ ಎಂದು ವಕ್ತಾರ ಗೋಪಾಲ್ ಸುತಾರ್ ಮಾಹಿತಿ ನೀಡಿದ್ದಾರೆ.
ಪಿಎಸ್‌ಯುಗಳ ಕಾರ್ಯನಿರ್ವಹಣೆಗೆ ಸರ್ಕಾರ ಅನುಮತಿ ನೀಡಿತ್ತು. ಆದರೆ, ಕೊರೊನಾ ಸಮುದಾಯ ಹರಡುವಿಕೆ ನಿಯಂತ್ರಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ರಜಾ ದಿನವು ಯಾವುದೇ ಕಾರ್ಮಿಕರ ವೇತನದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.