ನವದೆಹಲಿ: ಆಂಫೊಟೆರಿಸಿನ್ ಬಿ ಎಂಬ ಬ್ಲಾಕ್ ಫಂಗಸ್ ಔಷಧಗಳ 1,06,300 ಬಾಟಲುಗಳನ್ನು ರಾಜ್ಯ ಹಾಗೂ ಕೇಂದ್ರ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಆಂಫೊಟೆರಿಸಿನ್ ಬಿ ಯ ಲಭ್ಯತೆ ಖಾತರಿಪಡಿಸಿಕೊಂಡು, ಹೆಚ್ಚುವರಿ 1,06,300 ಬಾಟಲುಗಳನ್ನು ಇಂದು ಎಲ್ಲಾ ರಾಜ್ಯಗಳು / ಯುಟಿಗಳು ಮತ್ತು ಕೇಂದ್ರ ಸಂಸ್ಥೆಗಳಲ್ಲಿ ಹಂಚಿಕೆ ಮಾಡಲಾಗಿದೆ.
ಲಿಪೊಸೋಮಲ್ ಆಂಫೊಟೆರಿಸಿನ್ ಬಿ ಯ ಹೆಚ್ಚುವರಿ 9,400 ಬಾಟಲುಗಳನ್ನು ಇಂದು ಕರ್ನಾಟಕಕ್ಕೆ ಹಂಚಿಕೆ ಮಾಡಲಾಗಿದ್ದು, ಇಲ್ಲಿಯವರೆಗೆ ಒಟ್ಟು 49,870 ವಯಲ್ಸ್ ಔಷಧಗಳನ್ನು ರಾಜ್ಯಕ್ಕೆ ಹಂಚಿಕೆ ಮಾಡಲಾಗಿದೆ. ಇದಲ್ಲದೇ, ಸಾಂಪ್ರದಾಯಿಕ ಆಂಫೊಟೆರಿಸಿನ್ ಬಿ ಯ 4,680 ಬಾಟಲುಗಳನ್ನು ಇಂದು ಕರ್ನಾಟಕಕ್ಕೆ ಹಂಚಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೇ 27 ರಂದು ಕೇಂದ್ರ ಸರ್ಕಾರವು ಐದು ಕಂಪನಿಗಳಿಗೆ ಲಿಪೊಸೋಮಲ್ ಆಂಫೊಟೆರಿಸಿನ್ ಬಿ ಚುಚ್ಚುಮದ್ದಿನ ಉತ್ಪಾದನೆಯನ್ನು ಹೆಚ್ಚಿಸಲು ಪರವಾನಗಿ ನೀಡಿದೆ ಎಂದು ಕೇಂದ್ರ ಸಚಿವ ಸದಾನಂದಗೌಡ ತಿಳಿಸಿದ್ದಾರೆ.