ಕೊರೊನಾ ಸಮಯದಲ್ಲಿ ಸಾಕಷ್ಟು ಜನ ಸಿನಿಮಾ ತಾರೆಯರು ಮದುವೆ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಹಾಗೆಯೇ ಬಹುಕಾಲದ ಗೆಳತಿ ಜೊತೆ ನಟ ದಾನೀಶ್ ಸೇಠ್ ನೋಂದಣಿ ವಿವಾಹ ಮಾಡಿಕೊಂಡಿದ್ದಾರೆ. ಹಂಬಲ್ ಪೊಲಿಟಿಷಿಯನ್ ನೊಗರಾಜ್, ಫ್ರೆಂಚ್ ಬಿರಿಯಾನಿ ಸಿನಿಮಾ ಖ್ಯಾತಿಯ ಮತ್ತು ನಿರೂಪಕ ದಾನೀಶ್ ಸೇಠ್ ಸರಳವಾಗಿ ಮದುವೆ ಆಗಿದ್ದಾರೆ.
ಕೆಲ ತಿಂಗಳ ಹಿಂದೆ ದಾನೀಶ್ ಸೇಠ್, ಬಹುಕಾಲದ ಗೆಳತಿ ಅನ್ಯಾ ರಂಗಸ್ವಾಮಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರ ಬಗ್ಗೆ ಹೇಳಿಕೊಂಡಿದ್ದರು. ಈಗ ನಿನ್ನೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡೆವು ಅಂತಾ ದಾನೀಶ್ ಸೇಠ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಅನ್ಯಾ ಹಾಗೂ ನನ್ನ ಕುಟುಂಬದ ಹಾಗೂ ಸ್ನೇಹಿತರ ಸಮ್ಮುಖದಲ್ಲಿ 15 ಜನರ ಮುಂದೆ ಉಂಗುರ ಬದಲಾಯಿಸಿಕೊಂಡೆವು. ಈ ಪಯಣ ಪ್ರೀತಿಯಿಂದ ಕೂಡಿರಲಿ ಎಂದು ಬಯಸುತ್ತ, ನಮ್ಮಿಬ್ಬರಿಗೂ ಹಾರೈಸಿ ಎಂದು ಮದುವೆಯ ಫೋಟೋಗಳನ್ನು ದಾನೀಶ್ ಸೇಠ್ ಹಂಚಿಕೊಂಡಿದ್ದಾರೆ.