ಕನ್ನಡ ಮಾತ್ರವಲ್ಲ, ಭಾರತೀಯ ಚಿತ್ರರಂಗ ಎದುರು ನೋಡುತ್ತಿರುವ ಬಹುನಿರೀಕ್ಷಿತ 'ವಿಕ್ರಾಂತ್ ರೋಣ' ಚಿತ್ರ ಈಗಾಗಲೇ ಟ್ರೈಲರ್ ಹಾಗು ಹಾಡುಗಳಿಂದ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ವಿಕ್ರಾಂತ್ ರೋಣನನ್ನು ತ್ರಿಡಿಯಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಚಿತ್ರ ಬಿಡುಗಡೆಯನ್ನು ಹಬ್ಬದಂತೆ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.
ಬೆಂಗಳೂರಿನ ಶೇಷಾದ್ರಿ ರಸ್ತೆಯ ಆನಂದ್ ಆರ್ಟ್ಸ್ನಲ್ಲಿ ಸಿನೆಮಾದ ಕಟೌಟ್ಗಳು ಸಿದ್ಧಗೊಳ್ಳುತ್ತಿವೆ. ಇದೇ ಮೊದಲ ಬಾರಿಗೆ ಥಿಯೇಟರ್‌ಗಳ ಅಂಗಳದಲ್ಲಿ ಸುದೀಪ್ ಜೊತೆಗಿನ ಅಪ್ಪು ಅವರ ಕಟೌಟ್ಗಳನ್ನೂ ಸಹ ಹಾಕಲಾಗುತ್ತಿದೆ. ಇಬ್ಬರು ನಟರ ಸ್ನೇಹ ಸಂಬಂಧವನ್ನು ತಿಳಿಸುವ ಉದ್ದೇಶ ಇದರ ಹಿಂದಿದ್ದು 32 ಅಡಿ ಉದ್ದದ ಕಟೌಟ್ ಅನ್ನು ಬೆಂಗಳೂರಿನ ಥಿಯೇಟರ್ ಮುಂದೆ ಹಾಕಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.