ಮುಂಬೈ: ಹಿಂದಿ ಚಿತ್ರರಂಗದ ಹಿರಿಯ ಕಲಾವಿದ ಮಿಥಿಲೇಶ್ ಚತುರ್ವೇದಿ ನಿಧನರಾಗಿದ್ದಾರೆ. ಚತುರ್ವೇದಿ ಅವರು ಹೃದ್ರೋಗದಿಂದ ಬಳಲುತ್ತಿದ್ದರು ಮತ್ತು ಇದಕ್ಕಾಗಿ ಲಕ್ನೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮಿಥಿಲೇಶ್ ಚತುರ್ವೇದಿ ವಿಧಿವಶರಾಗಿದ್ದಾರೆ ಎಂದು ಅವರ ಅಳಿಯ ಆಶಿಶ್ ಚತುರ್ವೇದಿ ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ಖಚಿತಪಡಿಸಿದ್ದಾರೆ.
ಹಿಂದಿ ಚಿತ್ರರಂಗದ ಹಿರಿಯ ಕಲಾವಿದ ಮಿಥಿಲೇಶ್ ಚತುರ್ವೇದಿ ನಿಧನ - Bollywood actor cinema Mithilesh Chaturvedi no more
ಬಾಲಿವುಡ್ ಹಿರಿಯ ನಟ ಮಿಥಿಲೇಶ್ ಚತುರ್ವೇದಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.
1997ರಲ್ಲಿ ಭಾಯಿ ಭಾಯಿ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟ ಮಿಥಿಲೇಶ್ ಚತುರ್ವೇದಿ ಸಾವಿನ ಸುದ್ದಿಯಿಂದ ಬಾಲಿವುಡ್ ಹಾಗೂ ಟಿವಿ ಇಂಡಸ್ಟ್ರಿಯಲ್ಲಿ ಶೋಕದ ಅಲೆ ಮೂಡಿದೆ. ವೃತ್ತಿಜೀವನದಲ್ಲಿ ಮಿಥಿಲೇಶ್ ಚತುರ್ವೇದಿ ಅನೇಕ ದೊಡ್ಡ ಮತ್ತು ಉತ್ಕೃಷ್ಟ ಬಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿದ್ದರು. ಸನ್ನಿ ಡಿಯೋಲ್ ಅವರೊಂದಿಗೆ ಗದರ್: ಏಕ್ ಪ್ರೇಮ್ ಕಥಾ, ಮನೋಜ್ ಬಾಜ್ಪೇಯಿ ಅವರೊಂದಿಗೆ ಸತ್ಯ, ತಾಲ್, ಬಂಟಿ ಔರ್ ಬಬ್ಲಿ, ಕ್ರಿಶ್ ಮತ್ತು ರೆಡಿ ಸೇರಿದಂತೆ ಶಾರುಖ್ ಖಾನ್ ಅವರ 'ಅಶೋಕ' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಕೋಯಿ ಮಿಲ್ ಗಯಾ ಚಿತ್ರದಲ್ಲಿನ ಅವರ ನಟನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಈ ಚಿತ್ರದಲ್ಲಿ ಅವರು ಹೃತಿಕ್ ರೋಷನ್ ಅವರ ಕಂಪ್ಯೂಟರ್ ಶಿಕ್ಷಕನ ಪಾತ್ರವನ್ನು ನಿರ್ವಹಿಸಿದ್ದರು. 2020 ರಲ್ಲಿ ಅವರು ಸ್ಕ್ಯಾಮ್ 1992 ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡರು. ಇತ್ತೀಚೆಗೆ ಇವರು ಬನಚಢಾ ಎಂಬ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದರು.