ಕರ್ನಾಟಕ

karnataka

ETV Bharat / entertainment

’90 ಬಿಡಿ ಮನೀಗ್ ನಡಿ’.. ನಟ ವೈಜನಾಥ್​ ಬಿರಾದರ್​ರ 500ನೇ ಚಿತ್ರದ ಟ್ರೈಲರ್ ರಿಲೀಸ್.. ಸಿನಿಮಾ ಬಿಡುಗಡೆ ದಿನಾಂಕವೂ ಘೋಷಣೆ - ರಾಷ್ಟ್ರಪ್ರಶಸ್ತಿ ವಿಜೇತ ನಟ ವೈಜನಾಥ್ ಬಿರಾದಾರ

ವೈಜನಾಥ್ ಬಿರಾದಾರ ನಟನೆಯ 500ನೇ ಚಿತ್ರ '90 ಬಿಡಿ ಮನೀಗ್ ನಡಿ' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಜತೆಗೆ ಚಿತ್ರ ಬಿಡುಗಡೆ ದಿನಾಂಕವನ್ನೂ ಚಿತ್ರತಂಡ ಘೋಷಿಸಿದೆ.

90 Bidi Manig Nadi
ನಟ ವೈಜನಾಥ್​ ಬಿರಾದರ್​ರ 500ನೇ ಚಿತ್ರ​

By

Published : Jun 19, 2023, 12:19 PM IST

Updated : Jun 19, 2023, 12:58 PM IST

ರಾಷ್ಟ್ರಪ್ರಶಸ್ತಿ ವಿಜೇತ ನಟ ವೈಜನಾಥ್ ಬಿರಾದಾರ ಅಭಿನಯದ 500ನೇ ಚಿತ್ರ "90 ಬಿಡಿ ಮನೀಗ್ ನಡಿ". ಗಾಂಧಿ ನಗರದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಗಮನ ಸೆಳೆದ ಈ ಚಿತ್ರದ ಟ್ರೇಲರ್ ಬಿಡುಗಡೆ ಜೊತೆಗೆ ರಿಲೀಸ್ ದಿನಾಂಕವನ್ನು ಚಿತ್ರತಂಡ ಅನೌನ್ಸ್​​ ಮಾಡಿದೆ.

ಈ ಬಗ್ಗೆ ಚಿತ್ರದ ನಿರ್ದೇಶಕ ಉಮೇಶ್ ಬಾದರದಿನ್ನಿ ಮಾತನಾಡಿ "ಮೊದಲು ನಮ್ಮ ಚಿತ್ರದ ಟೈಟಲ್ "90 ಹೊಡಿ ಮನೀಗ್ ನಡಿ" ಎಂದು ಇಡಲಾಗಿತ್ತು. ಆದರೆ, ಸೆನ್ಸಾರ್ ಮಂಡಳಿ ಈ ಟೈಟಲ್​ಗೆ ಒಪ್ಪಿಗೆ ನೀಡಲಿಲ್ಲ. ಹಾಗಾಗಿ ಚಿತ್ರದ ಶೀರ್ಷಿಕೆಯನ್ನು "90 ಬಿಡಿ ಮನೀಗ್ ನಡಿ" ಎಂದು ಬದಲಿಸಲಾಯಿತು. ಚಿತ್ರದ ಟ್ರೇಲರ್ ಹಾಗೂ ಹಾಡು ಈಗಾಗಲೇ ಜನರ ಮನ ಗೆದ್ದಿವೆ.‌ ರಾಷ್ಟ್ರಪ್ರಶಸ್ತಿ ವಿಜೇತ ನಟ ಬಿರಾದಾರ್ ಈ ಚಿತ್ರದಲ್ಲಿ ವಿಭಿನ್ನ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದರು.

ನಟ ಬಿರಾದಾರ್ ಮಾತನಾಡಿ "ನನ್ನ ರಂಗಭೂಮಿ ಹಾಗೂ ಸಿನಿ ಪಯಣಕ್ಕೆ 50 ವರ್ಷ ತುಂಬಿದೆ. ಇದು ನನ್ನ 500ನೇ ಚಿತ್ರ. ಡಿಫರೆಂಟ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದೇನೆ. ಹಾಡೊಂದಕ್ಕೆ ಭರ್ಜರಿ ಸ್ಟೆಪ್ ಹಾಕಿದ್ದೇನೆ. ಕುಡಿತದಿಂದ ಏನೆಲ್ಲಾ ದುಷ್ಪರಿಣಾಮ ಆಗುತ್ತದೆ ಎಂಬುದನ್ನು ‌ನಿರ್ದೇಶಕರು ಈ ಚಿತ್ರದಲ್ಲಿ ತೋರಿಸಿದ್ದಾರೆ" ಎಂದರು.

ಹಿರಿಯ ನಟ ಕರಿಸುಬ್ಬು ಚಿತ್ರದಲ್ಲಿ ಬ್ಯಾಂಕ್ ಉದ್ಯೋಗಿಯ ಪಾತ್ರ ಮಾಡಿದ್ದಾರೆ. ಇದರ ಜತೆಗೆ ಅಭಯ್,‌ ಪ್ರೀತು ಪೂಜಾ‌, ನೀತಾ, ಆರ್.ಡಿ ಬಾಬು, ವಿವೇಕ್, ಹೊಸಕೋಟೆ ಮುರುಳಿ, ಧರ್ಮ, ಪ್ರಶಾಂತ್ ಸಿದ್ಧಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

"90 ಬಿಡಿ ಮನೀಗ್ ನಡಿ" ಚಿತ್ರಕ್ಕೆ "ಇವತ್ತೆ ಲಾಸ್ಟು ಗುರು, ನಾಳೆಯಿಂದ ನಾನ್ ಎಣ್ಣೆ ಹೊಡಿಯಲ್ಲ" ಎಂಬ ಪಾನಪ್ರಿಯರ ಜನಪ್ರಿಯ ಸ್ಲೋಗನ್ ಇಡಲಾಗಿದೆ. ಚಿತ್ರದ ಟ್ರೈಲರ್​ ಭಾರಿ ಸದ್ದು ಮಾಡುತ್ತಿದೆ. ಕಾಮಿಡಿ, ಕ್ರೈಮ್ ಥ್ರಿಲ್ಲರ್ ರೂಪದಲ್ಲಿ ಟ್ರೈಲರ್ ಕಟ್ಟಿಕೊಟ್ಟಿದ್ದು, ಚಿತ್ರದ ಮೇಲೊಂದು ನಿರೀಕ್ಷೆ ಹುಟ್ಟಿದೆ.

90 ಬಿಡಿ ಮನೀಗ್ ನಡಿ ಚಿತ್ರ ತಂಡ

ಚಿತ್ರಕ್ಕೆ ಕೃಷ್ಣ ನಾಯ್ಕರ್ ಛಾಯಾಗ್ರಹಣ, ವೆಂಕಟೇಶ್ ಯುಡಿವಿ ಸಂಕಲನ, ರಾಕಿ ರಮೇಶ್ ಸಾಹಸ ನಿರ್ದೇಶನ, ವೀರ್ ಸಮರ್ಥ್ ಅವರ ಹಿನ್ನೆಲೆ ಸಂಗೀತವಿದೆ. ಕಿರಣ್ ಶಂಕರ್ ಮತ್ತು ಶಿವು ಭೇರಗಿ ಅವರ ಸಂಗೀತ ನಿರ್ದೇಶನವಿದೆ. ರತ್ನಮಾಲ ಬಾದರದಿನ್ನಿ ಈ ಚಿತ್ರವನ್ನು ನಿರ್ಮಾಣ‌ ಮಾಡಿದ್ದಾರೆ. ತಿಂಗಳ ಕೊನೆಗೆ ಅಥಾವ ಜುಲೈ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವುದಾಗಿ ಚಿತ್ರತಂಡ ಪ್ಲಾನ್ ಮಾಡಿದೆ.

ಚಿತ್ರದ ನಾಯಕಿಯ ಜತೆ ನಟ ಬಿರಾದಾರ

ಬಿರಾದಾರ್​ ಜೊತೆ ಕರಿಸುಬ್ಬು, ಪ್ರಶಾಂತ್​ ಸಿದ್ದಿ ಸಖತ್​ ಸ್ಟೆಪ್​:70 ವರ್ಷ ವಯಸ್ಸಿನ ಬಿರಾದಾರ್, ಚಿತ್ರದ ನಾಯಕಿಯ ಜತೆ ಡಾನ್ಸ್ ಮಾಡಿದ ಎನರ್ಜಿ ಕಂಡು ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದರು. ಅಲ್ಲಿಂದಾಚೆಗೆ ಚಿತ್ರದ ಮೇಲೊಂದು ನಿರೀಕ್ಷೆ ಮೂಡಿತ್ತು. ಬಳಿಕ ಚಿತ್ರತಂಡ ಡಾ. ವಿ ನಾಗೇಂದ್ರ ಪ್ರಸಾದ್ ರಚನೆಯ, ಡಾ. ರಾಜೇಶ್ ಕೃಷ್ಣನ್ ಧ್ವನಿಯಲ್ಲಿ ಮೂಡಿಬಂದ ಸಖತ್​ ಹಾಡೊಂದನ್ನು ಬಿಡುಗಡೆಗೊಳಿಸಿತ್ತು.

ಇದನ್ನೂ ಓದಿ:'90 ಬಿಡಿ ಮನೀಗ್ ನಡಿ' ಚಿತ್ರದ ಹೊಸ ಹಾಡು ಬಿಡುಗಡೆ.. ಬಿರಾದಾರ್​ ಜೊತೆ ಕರಿಸುಬ್ಬು, ಪ್ರಶಾಂತ್​ ಸಿದ್ದಿ ಸಖತ್​ ಸ್ಟೆಪ್​

Last Updated : Jun 19, 2023, 12:58 PM IST

ABOUT THE AUTHOR

...view details