ಕರ್ನಾಟಕ

karnataka

ETV Bharat / entertainment

ವಿಚಿತ್ರ ಡ್ರೆಸ್ ತೊಟ್ಟ ಉರ್ಫಿ ಜಾವೇದ್: ನೆಟಿಜನ್‌ಗಳಿಂದ ಮತ್ತೊಮ್ಮೆ ಟ್ರೋಲ್‌ - ಉರ್ಫಿ ಜಾವೇದ್

ಬಿಗ್ ಬಾಸ್ ಮೂಲಕ ಜನಪ್ರಿಯರಾದ ಉರ್ಫಿ ಜಾವೇದ್, ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ತನ್ನ ವಿಚಿತ್ರ ಫ್ಯಾಷನ್ ಸೆನ್ಸ್​ನಿಂದಲೇ ಉರ್ಫಿ ಸದಾ ಸುದ್ದಿಯಲ್ಲಿರುತ್ತಾರೆ.

Urfi Javed
ಉರ್ಫಿ ಜಾವೇದ್

By

Published : May 20, 2023, 1:21 PM IST

ಹೈದರಾಬಾದ್: ಸೋಷಿಯಲ್ ಮೀಡಿಯಾ ಸೆನ್ಸೇಷನ್ ಉರ್ಫಿ ಜಾವೇದ್ ತನ್ನ ವಿಲಕ್ಷಣ ಫ್ಯಾಶನ್ ಸೆನ್ಸ್‌ಗೆ ಹೆಸರುವಾಸಿ. ಬಿಗ್ ಬಾಸ್ ಮೂಲಕ ಜನಪ್ರಿಯರಾದ ಉರ್ಫಿ ಜಾವೇದ್, ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ತಮ್ಮ ವಿಚಿತ್ರ ಫ್ಯಾಷನ್ ಸೆನ್ಸ್​ನಿಂದಲೇ ಉರ್ಫಿ ಸದಾ ಸುದ್ದಿಯಲ್ಲಿರುತ್ತಾರೆ.

ಉರ್ಫಿ ಜಾವೇದ್ ತಿಂಗಳ ಸಂಪಾದನೆಯಲ್ಲಿ ಅನೇಕ ಬಾಲಿವುಡ್ ನಟಿಯರನ್ನು ಕೂಡ ಹಿಂದಿಕ್ಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಉರ್ಫಿ ತಮ್ಮ ವಿಚಿತ್ರ ಫ್ಯಾಷನ್​ನಿಂದ ಅನೇಕ ಬಾರಿ ಟ್ರೋಲ್​ಗೂ ಒಳಗಾಗಿದ್ದಾರೆ. ಶುಕ್ರವಾರ ರಾತ್ರಿ ಸಹ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದಾಗ ಉರ್ಫಿ ತನ್ನ ಉಡುಪಿನಿಂದ ಮತ್ತೆ ಟ್ರೋಲ್​ಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ:ಮನೆಯಲ್ಲಿ ತಂದೆಯಿಂದ ದೈಹಿಕ, ಮಾನಸಿಕ ಕಿರುಕುಳ ಅನುಭವಿಸಿದ್ದೆ: ಉರ್ಫಿ ಜಾವೇದ್

ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಅವರು ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಕ್ಯಾಮೆರಾಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಆದಾಗ್ಯೂ ನೆಟಿಜನ್‌ಗಳು ಅವರ ನೋಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿಲ್ಲ. ವಿಡಿಯೋ ಪೋಸ್ಟ್ ಮಾಡಿದ ಕೂಡಲೇ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. 'ದಯವಿಟ್ಟು ಅವಳನ್ನು ಇನ್ನೊಂದು ಗ್ರಹಕ್ಕೆ ಕಳುಹಿಸಿ' ಎಂದು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:ಕಟೌಟ್​ ಸುಂದರಿ ಉರ್ಫಿ ಜಾವೇದ್ ಗುಣಗಾನ ಮಾಡಿದ ಬಾಲಿವುಡ್​ ಬೇಬೋ

ಕಸೌತಿ ಜಿಂದಗಿ ಕೇ ಮತ್ತು ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಸೇರಿದಂತೆ ಹಲವಾರು ಟಿವಿ ಶೋಗಳಲ್ಲಿ ಅವರು ಕಾಣಿಸಿಕೊಂಡಿದೆ. ಇತ್ತೀಚೆಗೆ ರಿಯಾಲಿಟಿ ಟಿವಿ ಶೋ ಸ್ಪ್ಲಿಟ್ಸ್ವಿಲ್ಲಾದ 14 ನೇ ಆವೃತ್ತಿಯಲ್ಲಿ ಮಿಸ್ಚೀಫ್ ಮೇಕರ್ ಆಗಿ ಕಾಣಿಸಿಕೊಂಡಿದ್ದರು. ಉರ್ಫಿ ಜಾವೇದ್ ವಿಭಿನ್ನ ಶೈಲಿಯಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಇಲ್ಲಿಯವರೆಗೆ, ಉರ್ಫಿ ಅನಗತ್ಯ ವಸ್ತುಗಳಿಂದ ಮಾಡಿದ ಉಡುಪುಗಳನ್ನು ಧರಿಸಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಇದೇ ನನ್ನ ಫ್ಯಾಷನ್ ಎಂದಿದ್ದಾರೆ.

ಇದನ್ನೂ ಓದಿ:ನೆಟ್ಟಿಗರಿಗೆ 'April Fool' ಮಾಡಿದ ಉರ್ಫಿ ಜಾವೇದ್

ರೆಸ್ಟೋರೆಂಟ್​ ಪ್ರವೇಶಿಸಲು ನಿರಾಕರಣೆ: ಇತ್ತೀಚೆಗೆ ಮುಂಬೈ ರೆಸ್ಟೋರೆಂಟ್​ ಒಂದು ಒಳಗೆ ಪ್ರವೇಶಿಸಲು ಅವಕಾಶ ಕೊಟ್ಟಿಲ್ಲ ಎಂದು ಸ್ವತಃ ಉರ್ಫಿ ಜಾವೇದ್ ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡಿದ್ದರು. ಟೇಬಲ್ ಬುಕ್​​ ಮಾಡಿದ್ದರೂ ಕೂಡ ಮುಂಬೈ ರೆಸ್ಟೋರೆಂಟ್​​​ವೊಂದು ಅವರಿಗೆ ಪ್ರವೇಶ ನಿರಾಕರಿಸಿದೆ ಎನ್ನಲಾಗಿತ್ತು. ಅವರ ಉಡುಪಿನ ಆಯ್ಕೆ ಹಿನ್ನೆಲೆ ರೆಸ್ಟೋರೆಂಟ್​ ಈ ನಿರ್ಧಾರ ಕೈಗೊಂಡಿತ್ತು ಎನ್ನಲಾಗಿದೆ.

ಈ ಹಿನ್ನೆಲೆ ನಟಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಂಡು ರೆಸ್ಟೋರೆಂಟ್‌ ನಡೆಯನ್ನು ಪ್ರಶ್ನೆ ಮಾಡಿದ್ದರು. ಆದರೆ ವಿಡಿಯೋದಲ್ಲಿ, ರೆಸ್ಟೋರೆಂಟ್​ ಮ್ಯಾನೇಜರ್​ ನಟಿಯನ್ನು ಶಾಂತಗೊಳಿಸಲು ಯತ್ನಿಸಿದ್ದಾರೆ. ರೆಸ್ಟೋರೆಂಟ್​​ ಫುಲ್​ ಆಗಿದೆ ಎಂದು ತಿಳಿಸಲು ಪ್ರಯತ್ನಿಸಿದ್ದಾರೆ. ನಟಿ ಮ್ಯಾನೇಜರ್​ಗೆ ಮಾತನಾಡಲು ಅವಕಾಶ ಮಾಡಿಕೊಡದೇ ಕೋಪಗೊಂಡು ತಮ್ಮ ಮಾತನ್ನು ಮುಂದುವರಿಸಿದ್ದರು. ನನ್ನ ಉಡುಪಿನ ಶೈಲಿಯಿಂದಲೇ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ:ರೆಸ್ಟೋರೆಂಟ್​ ಪ್ರವೇಶಿಸಲು ಉರ್ಫಿ ಜಾವೇದ್​ಗೆ ನಿರಾಕರಣೆ: ಪಬ್ಲಿಸಿಟಿ ಗಿಮಿಕ್​ ಎಂದ ನೆಟ್ಟಿಗರು!

ABOUT THE AUTHOR

...view details