ದೇಶದಲ್ಲಿ ಮಾತ್ರವಲ್ಲದೇ ಅನೇಕ ವಿದೇಶಗಳಲ್ಲಿ ಧೂಳೆಬ್ಬೆಸಿದ ಚಿತ್ರ ಆರ್ಆರ್ಆರ್. ಅದರಲ್ಲೂ ಇದರಲ್ಲಿನ 'ನಾಟು ನಾಟು' ಹಾಡು ಸಿಕ್ಕಾಪಟ್ಟೆ ಫೇಮಸ್ ಆಗುವುದರ ಜೊತೆ ಇದರ ಕೊರಿಯೋಗ್ರಾಫಿ ಹಲವರ ಗಮನ ಸೆಳೆದಿತ್ತು. ಇದೀಗ ಈ 'ನಾಟು ನಾಟು' ಹಾಡು ಆಸ್ಕರ್ ಅಂಗಳವನ್ನು ತಲುಪಿದೆ.
ಜಾಗತಿಕ ಸಿನಿಮಾ ಕ್ಷೇತ್ರದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿ ಈ ಆಸ್ಕರ್ ಆಗಿದ್ದು, ಈ ಪ್ರಶಸ್ತಿಯ ರೇಸ್ನಲ್ಲಿ ನಾಟು ನಾಟು ಸೇರಿದಂತೆ ಭಾರತದ ಇನ್ನು ಮೂರು ಚಿತ್ರಗಳು ರೇಸ್ನಲ್ಲಿದೆ. ಆಸ್ಕರ್ನ 10 ಕ್ಯಾಟಗರಿಯಲ್ಲಿ ಭಾರತದ ಚಿತ್ರಗಳು 4 ಕ್ಯಾಟಗರಿಯಲ್ಲಿ ಸ್ಥಾನ ಪಡೆದಿದೆ.
ಅತ್ಯುತ್ತಮ ಅಂತಾರಾಷ್ಟ್ರೀಯ ಫಿಲ್ಮ್ ಕ್ಯಾಟಗರಿಯಲ್ಲಿ ಲಾಸ್ಟ್ ಫಿಲ್ಮ್ ಶೋ. ಒರಿಜಿನಲ್ ಸಾಂಗ್ ಕ್ಯಾಟಗರಿಯಲ್ಲಿ ಆರ್ಆರ್ಆರ್ನ 'ನಾಟು ನಾಟು', ಅತ್ಯುತ್ತಮ ಡಾಕ್ಯುಮೆಂಟರಿ ಫೀಚರ್ ಕ್ಯಾಟಗರಿಯಲ್ಲಿ ಆಲ್ ಥಟ್ ಬ್ರಿಥ್ಸ್, ಅತ್ಯುತ್ತಮ ಡಾಕ್ಯುಮೆಂಟರಿ ಶಾರ್ಟ್ಫಿಲ್ಮ್ ಕ್ಯಾಟಗರಿಯಲ್ಲಿ ದಿ ಎಲಿಫಂಟ್ ವಿಸ್ಪರರ್ ಸ್ಥಾನ ಪಡೆದಿದೆ.
ಈ ಆಯ್ಕೆಗೊಂಡ ಚಿತ್ರಗಳಿಗೆ ವೋಟಿಂಗ್ ಇದೇ ಜನವರಿ 12 ರಿಂದ 17ರವರೆಗೆ ನಡೆಯಲಿದೆ. ಈ ಮತಗಳ ಆಧಾರದ ಮೇಲೆ ಆಸ್ಕರ್ ನಾಮ ನಿರ್ದೇಶನ ಚಿತ್ರಗಳನ್ನು ಜ 24ರಂದು ಪ್ರಕಟಿಸಲಾಗುವುದು. ಬಳಿಕ ಮಾರ್ಚ್ 12ರಂದು ಆಸ್ಕರ್ ವಿಜೇತರಿಗೆ ಪ್ರಶಸ್ತಿ ನೀಡಲಾಗುವುದು.
ಇದನ್ನೂ ಓದಿ: ಸಿನಿ ಪ್ರಿಯರಿಗೆ ಗುಡ್ನ್ಯೂಸ್.. ಆಸ್ಕರ್ ರೇಸ್ಗೆ ಕಾಂತಾರ ಎಂಟ್ರಿ