ಚೆನ್ನೈ (ತಮಿಳುನಾಡು):ಜನಪ್ರಿಯ ನಟ ನಿರ್ಮಾಪಕ ಸೂರ್ಯ 25ನೇ ವರ್ಷದ ಸಿನಿ ಬದುಕಿನ ಸಂಭ್ರಮದಲ್ಲಿದ್ದಾರೆ. ಸೂರ್ಯ ಅವರು ಚೊಚ್ಚಲ ಚಲನಚಿತ್ರ ನೆರುಕ್ಕು ನೆರ್‌ನ 25 ನೇ ವಾರ್ಷಿಕೋತ್ಸವ ಆಚರಿಸಿದರು. ಇದೇ ವೇಳೆ, ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಅರ್ಪಿಸಿದರು.
ತಮಿಳು ಚಿತ್ರಗಳಾದ ನಂದ, ಕಾಖ ಕಾಖಾ, ಗಜಿನಿ ಮತ್ತು ಸಿಂಗಂ ಟ್ರೈಲಾಜಿಗಳಿಗೆ ಹೆಸರುವಾಸಿಯಾಗಿರುವ ಈ ಸೂಪರ್‌ಸ್ಟಾರ್ ತಮ್ಮ ಮೈಲಿಗಲ್ಲು ಬಗ್ಗೆ ಟ್ವಿಟರ್‌ನಲ್ಲಿ ಸಂಕ್ಷಿಪ್ತ ಟಿಪ್ಪಣಿ ಬರೆದಿದ್ದಾರೆ. "ನಿಜವಾಗಿಯೂ ಸುಂದರ ಮತ್ತು ಆಶೀರ್ವದಿಸಿದ 25 ವರ್ಷಗಳು..! ಕನಸು ಮತ್ತು ನಂಬಿಕೆ..! ನಿಮ್ಮ ಸೂರ್ಯ ಎಂದು ಅವರು ಟ್ವೀಟ್ ಮಾಡಿದ್ದಾರೆ.
2015ರಲ್ಲಿ, ಸೂರ್ಯ ತನ್ನ 2D ಎಂಟರ್‌ಟೈನ್‌ಮೆಂಟ್ ನಿರ್ಮಾಣ ಕಂಪನಿಯಿಂದ 36 ವಯದಿನಿಲೆ ಸಿನಿಮಾವನ್ನು ಬಿಡುಗಡೆ ಮಾಡಿದರು. ಇದುವರೆಗೆ ಸುಮಾರು 50 ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅಲ್ಲದೇ ಸೂರರೈ ಪೊಟ್ರು (2020) ಮತ್ತು ಜೈ ಭೀಮ್ (2021) ನಂತಹ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸೂರರೈ ಪೊಟ್ರು ಸಿನಿಮಾದಲ್ಲಿ ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಂದಿದೆ. ಜೂನ್‌ನಲ್ಲಿ, 95 ನೇ ಅಕಾಡೆಮಿ ಪ್ರಶಸ್ತಿಗಳಿಗಾಗಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್‌ಗೆ ಸೇರಲು ಆಹ್ವಾನಿಸಲಾದ 397 ಪ್ರಸಿದ್ಧ ವ್ಯಕ್ತಿಗಳಲ್ಲಿ ಸೂರ್ಯ ಕೂಡ ಸೇರಿದ್ದಾರೆ.
ಇದನ್ನೂ ಓದಿ:ಆಸ್ಕರ್ ಸಮಿತಿಯಲ್ಲಿ ನಟ ಸೂರ್ಯ! ಈ ಗೌರವ ಪಡೆದ ಮೊದಲ ತಮಿಳು ನಟ