ಕರ್ನಾಟಕ

karnataka

ETV Bharat / entertainment

ಸಂಸತ್​ ಸದಸ್ಯರಿಗಾಗಿ ಪ್ಯಾನ್ ಇಂಡಿಯಾ ಸಿನಿಮಾ 'ಖುದಿರಾಮ್ ಬೋಸ್' ಪ್ರದರ್ಶನ

ನವದೆಹಲಿಯ ಮಹದೇವ್ ರಸ್ತೆಯಲ್ಲಿರುವ ಫಿಲ್ಮ್ ಡಿವಿಷನ್ ಆಡಿಟೋರಿಯಂನಲ್ಲಿ ಖುದಿರಾಮ್ ಬೋಸ್' ಚಲನಚಿತ್ರವನ್ನು ಸಂಸತ್​ ಸದಸ್ಯರಿಗಾಗಿ ಪ್ರತ್ಯೇಕ ಪ್ರದರ್ಶನ ಆಯೋಜಿಸಲಾಗಿತ್ತು.

special-screening-of-pan-india-movie-khudiram-bose-for-members-of-parliament
ಸಂಸತ್​ ಸದಸ್ಯರಿಗಾಗಿ ಪ್ಯಾನ್ ಇಂಡಿಯಾ ಸಿನಿಮಾ 'ಖುದಿರಾಮ್ ಬೋಸ್' ಪ್ರದರ್ಶನ

By

Published : Dec 22, 2022, 10:42 PM IST

ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ಅಂತಹ ಮಹಾನ್​ ವ್ಯಕ್ತಿಗಳಲ್ಲಿ ಪಶ್ಚಿಮ ಬಂಗಾಳದ ಖುದಿರಾಮ್ ಬೋಸ್ ಕೂಡ ಒಬ್ಬರು. ಖುದಿರಾಮ್ ಬೋಸ್ ಅವರು ಚಿಕ್ಕ ವಯಸ್ಸಿನಲ್ಲೇ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಅಮರರಾದರು.

ಪ್ರಸ್ತುತ ಭಾರತೀಯ ಚಿತ್ರರಂಗದಲ್ಲಿ ಬಯೋಪಿಕ್‌ ಚಿತ್ರಗಳು ಜೋರಾಗಿವೆ. ಇದರಲ್ಲಿ 'ಖುದಿರಾಮ್ ಬೋಸ್' ಸಿನಿಮಾ ಸಹ ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿಬಂದಿದೆ. ತೆಲುಗು, ತಮಿಳು, ಮಲಯಾಳಂ, ಕನ್ನಡ, ಬಂಗಾಳಿ ಮತ್ತು ಹಿಂದಿ ಭಾಷೆಗಳಲ್ಲಿ ತಯಾರಾದ ಈ ಚಿತ್ರವು ಇತ್ತೀಚೆಗೆ ಗೋವಾದಲ್ಲಿ ನಡೆದ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು.

ಇಂದು ಸಂಜೆ 6 ಗಂಟೆಗೆ 'ಖುದಿರಾಮ್ ಬೋಸ್' ಚಲನಚಿತ್ರವನ್ನು ಸಂಸತ್ ಸದಸ್ಯರಿಗೆ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ನವದೆಹಲಿಯ ಮಹದೇವ್ ರಸ್ತೆಯಲ್ಲಿರುವ ಫಿಲ್ಮ್ ಡಿವಿಷನ್ ಆಡಿಟೋರಿಯಂನಲ್ಲಿ ಈ ಪ್ರತ್ಯೇಕ ಪ್ರದರ್ಶನ ಆಯೋಜಿಸಲಾಗಿತ್ತು.

ಗೋಲ್ಡನ್ ರೈನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರಜಿತಾ ವಿಜಯ್ ಜಗರ್ಲಮುಡಿ ಈ ಚಿತ್ರ ನಿರ್ಮಿಸಿದ್ದು, ಡಿ.ವಿ.ಎಸ್.ರಾಜು ನಿರ್ದೇಶಿಸಿದ್ದಾರೆ. ರಾಕೇಶ್ ಜಾಗರ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಸಂಗೀತ ನಿರ್ದೇಶಕರಾಗಿ ಮಣಿ ಶರ್ಮ, ನಿರ್ಮಾಣ ವಿನ್ಯಾಸಕರಾಗಿ ತೋಟ ತರಣಿ, ಸಾಹಸ ನಿರ್ದೇಶಕ ಕನಲ್ ಕಣ್ಣನ್, ಛಾಯಾಗ್ರಹಣ ರಸುಲ್ ಎಲ್ಲೋರ್, ಸಂಕಲನ ಮಾರ್ತಾಂಡ್ ಕೆ.ವೆಂಕಟೇಶ್ ಹಾಗೂ ಬಾಲಾದಿತ್ಯ ಅವರ ಬರಹವನ್ನು ಖುದಿರಾಮ್ ಬೋಸ್ ಚಿತ್ರ ಹೊಂದಿದೆ.

ಇದನ್ನೂ ಓದಿ:ಬೆಂಗಳೂರು ವಿಶ್ವವಿದ್ಯಾಲಯ ಪಠ್ಯದಲ್ಲಿ ಪುನೀತ್ ರಾಜ್​​ಕುಮಾರ್ ವಿಷಯ

ABOUT THE AUTHOR

...view details