ಸಿನಿಮಾ ಎಂಬ ಬಣ್ಣದ ಲೋಕಕ್ಕೆ ಸ್ಟಾರ್ ನಟರ ಮಕ್ಕಳು ಹಾಗೂ ರಾಜಕಾರಣಿಗಳ ಕುಡಿಗಳು ಬರೋದು ಹೊಸತೆನಲ್ಲ.ಇದೀಗ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಸುಪುತ್ರ ಪ್ರವೀರ್ ಶೆಟ್ಟಿ"ಸೈರನ್" ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪ್ರವೇಶ ಮಾಡಿದ್ದಾರೆ.
ಮೊನ್ನೆ 'ಸೈರನ್' ಟೀಸರ್ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನಡೆಯಿತು. "ಉಪಾಧ್ಯಕ್ಷ" ಚಿಕ್ಕಣ್ಣ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿದರು. ನಿರ್ಮಾಪಕ ಉಮಾಪತಿ ಗೌಡ, ಲಹರಿ ವೇಲು, ಶಿವಾನಂದ ಶೆಟ್ಟಿ, ಶರತ್ ಚಂದ್ರ ಸಾನಿಲ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿ, ಯುವ ನಟನ ಸಿನಿಮಾಕ್ಕೆ ಶುಭ ಹಾರೈಯಿಸಿದರು.
'ಸೈರನ್' ಚಿತ್ರದ ಟೀಸರ್ ಲಾಂಚ್ ಮಾಡಿ ಮಾತನಾಡಿದ ಉಪಾಧ್ಯಕ್ಷ ಚಿಕ್ಕಣ್ಣ, ರೋಡಿನಲ್ಲಿ 'ಸೈರನ್' ಸದ್ದಿಗೆ ಎಲ್ಲರೂ ದಾರಿ ಬಿಡುತ್ತಾರೆ. ಸ್ಯಾಂಡಲ್ವುಡ್ನಲ್ಲೂ ಈ 'ಸೈರನ್' ಭಾರಿ ಸದ್ದು ಮಾಡಲಿ. ಭರ್ಜರಿ ಯಶಸ್ಸು ಕಾಣಲಿ. ಟೀಸರ್ನಲ್ಲೇ ಪ್ರವೀರ್ ಶೆಟ್ಟಿ ಒಳ್ಳೆಯ ಭರವಸೆ ಮೂಡಿಸಿದ್ದಾರೆ. ಅವರಿಗೂ ಒಳ್ಳೆಯದಾಗಲಿ ಎಂದರು.
'ಸೈರನ್' ಸಿನಿಮಾ ನಿರ್ದೇಶನಕ ರಾಜ ವೆಂಕಯ್ಯ ಚಿತ್ರದ ಕುರಿತು ಅನುಭವ ಹಂಚಿಕೊಂಡರು. 'ನಾನು ಕಳೆದ ಇಪ್ಪತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದೀನಿ. ಛಾಯಾಗ್ರಹಕನಾಗಿ, ಸಂಕಲನಕಾರನಾಗಿ ಕಾರ್ಯ ನಿರ್ವಹಿಸಿದ್ದೇನೆ. ಈಗ ಕನ್ನಡದಲ್ಲಿ 'ಸೈರನ್' ಚಿತ್ರವನ್ನು ನಿರ್ದೇಶಿಸಿದ್ದೇನೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ನಾಯಕ ಪ್ರವೀರ್ ಶೆಟ್ಟಿ ತುಂಬಾ ಚೆನ್ನಾಗಿ ಅಭಿನಯಿಸುತ್ತಿದ್ದಾರೆ ಎಂದರು.
ಬಳಿಕ ನಟ ಪ್ರವೀರ್ ಶೆಟ್ಟಿ ಮಾತನಾಡಿ, ನಮ್ಮ ಚಿತ್ರವನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಅರ್ಪಿಸುತ್ತೇವೆ. ಈ ಚಿತ್ರದ ನಿರ್ದೇಶಕ ರಾಜ ವೆಂಕಯ್ಯ ಅವರು ನನ್ನನ್ನು ಭೇಟಿಯಾಗಿ ಕಥೆ ಹೇಳಿದರು. ತುಂಬಾ ಇಷ್ಟವಾಯಿತು. 'ಸೈರನ್' ಅನ್ನು ಬಿಜು ಶಿವಾನಂದ್ ಅವರು ನಿರ್ಮಾಣ ಮಾಡುತ್ತಿದ್ದಾರೆ ಎಂದರು.
ಇನ್ನು ಪ್ರವೀರ್ ಶೆಟ್ಟಿ ಜೋಡಿಯಾಗಿ ನಾಯಕಿ ಲಾಸ್ಯ ಕಾಣಿಸಿಕೊಂಡಿದ್ದಾರೆ.ಇದರ ಜೊತೆಗೆ ಪ್ರಮುಖ ಪಾತ್ರದಲ್ಲಿ ಸುಕನ್ಯ ನಟಿಸಿದ್ದಾರೆ. ಈ ಚಿತ್ರಕ್ಕೆ ನಾಗೇಶ್ ಆಚಾರ್ಯ ಛಾಯಾಗ್ರಹಣದವಿದ್ದು, ಭಾರದ್ವಾಜ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಬೀಜ್ ಶಿವಾನಂದ್ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಈ ವೇಳೆ ನಿರ್ಮಾಪಕ ಉಮಾಪತಿ ಗೌಡ, ಲಹರಿ ವೇಲು ಶಿವಾನಂದ ಶೆಟ್ಟಿ, ಪಳನಿ ಪ್ರಕಾಶ್, ಬಂಟರ ಸಂಘದ ಅಧ್ಯಕ್ಷರು ಸೇರಿದಂತೆ ಸಾಕಷ್ಟು ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ:ಮೋಹಕ ತಾರೆ ರಮ್ಯಾ 18ನೇ ವಯಸ್ಸಿನಲ್ಲಿ ಹೇಗಿದ್ರು? ಫೋಟೋ ಇದೆ ನೋಡಿ!