ಮುಂಬೈ:ನಟಿ ಶಿಲ್ಪಾ ಶೆಟ್ಟಿ ಅವರ ತಾಯಿ ಸುನಂದಾ ಶೆಟ್ಟಿ ಅವರ ಹುಟ್ಟುಹಬ್ಬ ಹಿನ್ನೆಲೆ ಅವರ ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಈ ಸಂತೋಷದ ಸಂದರ್ಭದಲ್ಲಿ, ಮಗಳು ಶಿಲ್ಪಾ ಶೆಟ್ಟಿ, ಪ್ರೀತಿಯ ಅಮ್ಮನಿಗಾಗಿ ವಿಶೇಷ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಶಿಲ್ಪಾ ಅವರು ಹೊಸ ಮತ್ತು ಹಳೆಯ ಫೋಟೋಗಳ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ನೀವು ನನ್ನ ಪ್ರಪಂಚ, ಆತ್ಮೀಯ ಗೆಳತಿ. ನೀವು ಸೂರ್ಯ, ಚಂದ್ರರಂತೆ ಸದಾ ಹೊಳೆಯುವ ನಕ್ಷತ್ರ. ನಿಮಗೆ ಜನ್ಮದಿನದ ಶುಭಾಶಯಗಳು. ನಿಮಗೆ ದೇವರು ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ನೀಡಲಿ ಎಂದು ಹಾರೈಸುತ್ತೇನೆ ಬರೆದುಕೊಂಡಿದ್ದಾರೆ.