ಕರ್ನಾಟಕ

karnataka

ETV Bharat / entertainment

ವಿಡಿಯೋ : ಮುದ್ದಾದ ನವಿಲಿನೊಂದಿಗೆ ನೃತ್ಯ ಮಾಡಿದ ನಟಿ ಶೆಹನಾಜ್ ಗಿಲ್ - ಮುದ್ದಾದ ನವಿಲಿನೊಂದಿಗೆ ನೃತ್ಯ ಮಾಡಿದ ನಟಿ ಶೆಹನಾಜ್ ಗಿಲ್

ಬಿಗ್​​ಬಾಸ್​ ಖ್ಯಾತಿಯ ಶೆಹನಾಜ್ ಗಿಲ್, ನವಿಲಿನ ಜೊತೆ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ..

ಶೆಹನಾಜ್ ಗಿಲ್
ಶೆಹನಾಜ್ ಗಿಲ್

By

Published : May 9, 2022, 12:59 PM IST

ಮುಂಬೈ: ನಟಿ, ಗಾಯಕಿ ಹಾಗೂ ಬಿಗ್​​ಬಾಸ್​ ಖ್ಯಾತಿಯ ಶೆಹನಾಜ್ ಗಿಲ್ ಎಂದಿಗೂ ತಮ್ಮ ಹ್ಯಾಪಿ ಮೂಡ್​ ಹಾಳು​ ಮಾಡಿಕೊಳ್ಳಲು ಬಯಸುವುದಿಲ್ಲ. ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶೆಹನಾಜ್ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಇದರಲ್ಲಿ ನಟಿ ಸಖತ್​ ಖುಷಿಯಾಗಿರುವುದನ್ನು ಕಾಣಬಹುದು. ಶೆಹನಾಜ್ ಸಂತಸಕ್ಕೆ ಅಭಿಮಾನಿಗಳು ಸಹ ಹರ್ಷ ವ್ಯಕ್ತಪಡಿಸಿದ್ದಾರೆ.

ನವಿಲಿನ ಜೊತೆ ಶೆಹನಾಜ್ ನೃತ್ಯ ಮಾಡುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಗರಿ ಬಿಚ್ಚಿ ನಿಂತ ನವಿಲೊಂದು ಸಂತಸದಿಂದ ನೃತ್ಯ ಮಾಡಿದೆ. ನವಿಲಿನ ನೃತ್ಯಕ್ಕೆ ಮನಸೋತ ನಟ, ತನ್ನ ತೋಳುಗಳನ್ನು ಅಗಲವಾಗಿ ಚಾಚಿ ಮಂದಹಾಸ ಬೀರುತ್ತಾ ಒಂದು ಸುತ್ತು ಹಾಕಿದ್ದಾರೆ. ಮತ್ತೊಂದು ವೈರಲ್ ವಿಡಿಯೋದಲ್ಲಿ, ಶೆಹನಾಜ್ ತನ್ನ ಕೈಗಳಿಂದ ನವಿಲಿಗೆ ಆಹಾರ ನೀಡುತ್ತಿರುವುದನ್ನು ಕಾಣಬಹುದು.

ಕಳೆದ ಕೆಲ ತಿಂಗಳ ಹಿಂದೆ ಸಹ ನಟಿ ಇಂತಹದೇ ವಿಡಿಯೋ ಶೇರ್​ ಮಾಡಿದ್ದರು. "ನಾನು ಕೂಡ ದೂರ ಹಾರಲು ಬಯಸುತ್ತೇನೆ" ಎಂದು ತಮ್ಮ ಇನ್ಸ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡು ಸಮುದ್ರದ ತೀರದಲ್ಲಿ ಓಡುತ್ತಾ ಪಾರಿವಾಳಗಳನ್ನು ಬೆನ್ನಟ್ಟಿದ್ದರು. ನಂತರ ಕ್ಯಾಮೆರಾ ಕಡೆ ತಿರುಗಿ ಸುಸ್ತಾದೆ ಎಂದಿದ್ದರು.

ಇದನ್ನೂ ಓದಿ:ಹ್ಯಾಪಿ ಮೂಡ್​ನಲ್ಲಿ ಶೆಹನಾಜ್​ ಗಿಲ್​​.. ಪಾರಿವಾಳಗಳಂತೆ ಹಾರ ಬಯಸುತ್ತೇನೆಂದ ನಟಿ

ABOUT THE AUTHOR

...view details