ಕರ್ನಾಟಕ

karnataka

ETV Bharat / entertainment

ಕಾಸ್ಮೆಟಿಕ್ ಸರ್ಜರಿ ಒಳ್ಳೆಯದಲ್ಲ.. ಗಾಳಿಪಟದ‌‌‌‌‌ ನಟಿ‌ ನೀತು - ಆಸ್ಪತ್ರೆ ವಿರುದ್ಧ ನಟಿಯ ಪೋಷಕರ ಆಕ್ರೋಶ

ಕಿರುತೆರೆ ನಟಿ ಚೇತನಾರಾಜ್ ಸಾವಿಗೆ​ ಕನ್ನಡ ಚಿತ್ರರಂಗ ಹಾಗು ಕಿರುತೆರೆ ನಟ, ನಟಿಯರು ಸಂತಾಪ ವ್ಯಕ್ತಪಡಿಸಿದ್ದಾರೆ. ನಟಿಯರಾದ ನೀತು ಮತ್ತು ರೂಪಿಕಾ ಈ ಕುರಿತು ಮಾತನಾಡಿದ್ದು, ಕಾಸ್ಮೆಟಿಕ್ ಸರ್ಜರಿ ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ನಮ್ಮ ದೇಹದ ಬಗ್ಗೆ ಜನರು ಆಡಿಕೊಳ್ಳುತ್ತಾರೆಂದು ಚಿಂತಿಸಬಾರದು ಮತ್ತು ನಮ್ಮ ಆತ್ಮವಿಶ್ವಾಸ ಕುಗ್ಗಿಸಿಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ.

ಕಾಸ್ಮೆಟಿಕ್ ಸರ್ಜರಿ ಒಳ್ಳೆಯದಲ್ಲ ಗಾಳಿಪಟದ‌‌‌‌‌ ನಟಿ‌ ನೀತು
ಕಾಸ್ಮೆಟಿಕ್ ಸರ್ಜರಿ ಒಳ್ಳೆಯದಲ್ಲ ಗಾಳಿಪಟದ‌‌‌‌‌ ನಟಿ‌ ನೀತು

By

Published : May 17, 2022, 6:04 PM IST

ಕನ್ನಡ ಕಿರುತೆರೆ ಲೋಕದ ಯುವ ನಟಿ ಚೇತನಾ ರಾಜ್ ಇಂದು ಸಾವನ್ನಪ್ಪಿದ್ದಾರೆ. 21 ವರ್ಷದ ಚೇತನಾ ರಾಜ್, ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳಲು ನವರಂಗ್ ಸರ್ಕಲ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸರ್ಜರಿ ವೇಳೆ ಶ್ವಾಸಕೋಶದಲ್ಲಿ ನೀರಿನ ಅಂಶ ಶೇಖರಣೆಯಾಗಿದ್ದರಿಂದ ಅವರು ಮೃತಪಟ್ಟಿದ್ದಾರೆ ಎನ್ನಲಾಗ್ತಿದೆ. ಗೀತಾ, ದೊರೆಸಾನಿ ಹಾಗು ಒಲವಿನ ನಿಲ್ದಾಣ ಎಂಬ ಸೀರಿಯಲ್​ಗಳಲ್ಲಿ ಚೇತನಾ ರಾಜ್ ನಟಿಸಿದ್ದರು.

ನಾನು ತೆರೆ ಮೇಲೆ ಇನ್ನೂ ಚೆನ್ನಾಗಿ ಕಾಣಬೇಕು ಎಂಬ ಆಸೆಯಿಂದ ಫ್ಯಾಟ್ ಸರ್ಜರಿಗೆ ಚೇತನಾರಾಜ್​ ಮುಂದಾಗಿದ್ದರು. ಸರ್ಜರಿಯ ಸೈಡ್ ಎಫೆಕ್ಟ್​ನಿಂದ ಚೇತನಾ ರಾಜ್ ಸಾವನ್ನಪಿದ್ದಾರೆ. ಈ ಸುದ್ದಿ ಕನ್ನಡ ಕಿರುತೆರೆ ಲೋಕಕ್ಕೆ ಬಹಳ ನೋವುಂಟು ಮಾಡಿದೆ. ಚೇತನಾ ರಾಜ್ ಸಾವಿನ ಬಗ್ಗೆ ಕನ್ನಡ ಚಿತ್ರರಂಗ ಹಾಗು ಕಿರುತೆರೆ ನಟ, ನಟಿಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕಾಸ್ಮೆಟಿಕ್ ಸರ್ಜರಿ ಒಳ್ಳೆಯದಲ್ಲ ಗಾಳಿಪಟದ‌‌‌‌‌ ನಟಿ‌ ನೀತು

ಚೇತನಾ ರಾಜ್ ಸಾವಿನ ಬಗ್ಗೆ ಮಾತನಾಡಿರೋ ಗಾಳಿಪಟ ಚಿತ್ರದ ನಟಿ ನೀತು, ಯುವ ನಟಿ ಸಾವಿನ ಬಗ್ಗೆ ಬೇಸರ ವ್ಯಕ್ತಪಡಿಸಿ, ಈ ಕಾಸ್ಮೆಟಿಕ್ ಸರ್ಜರಿ ದೇಹಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ಹೇಳಿದ್ದಾರೆ. ನಾನು ಕೂಡ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಮಡಿದ್ದೆ. ಆದರೆ ಪ್ರಯೋಜನವಾಗಿರಲಿಲ್ಲ. ಇಂಡಸ್ಟ್ರಿ, ಸಮಾಜದ ದೃಷ್ಟಿಯಿಂದ ನಾವು ಚೆನ್ನಾಗಿ ಕಾಣಬೇಕು ಅಂತಾ ಸಾಕಷ್ಟು ಜನ ಈ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಆದರೆ ಅದು ಒಳ್ಳೆಯದಲ್ಲ. ನಾನು ಯಾರಿಗೂ ಕೂಡ ಕಾಸ್ಮೆಟಿಕ್ ಸರ್ಜರಿ ಸಲಹೆ ನೀಡುವುದಿಲ್ಲ. ದೇಹದ ಬಗ್ಗೆ ಆಡಿಕೊಳ್ಳುತ್ತಾರೆ ಎಂದು ಆತ್ಮ ವಿಶ್ವಾಸ ಕಳೆದುಕೊಳ್ಳಬಾರದು ಎಂದು ಹೇಳಿದರು.

ಬೆಳ್ಳಿ ತೆರ ಹಾಗು ಸದ್ಯ ಕಿರುತೆರೆಯಲ್ಲಿ ಅಭಿನಯಿಸತ್ತಿರುವ ನಟಿ ರೂಪಿಕಾ ಕೂಡ ಸಹ ನಟಿ‌ ಚೇತನಾ ರಾಜ್ ಸಾವಿನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸಣ್ಣ ಅಥವಾ ದಪ್ಪದ ಆಧಾರದಲ್ಲಿ ಅವಕಾಶಗಳು ಸಿಗುವುದಿಲ್ಲ. ನಾನು ದಪ್ಪ ಆಗಿದ್ದಾಗ ವ್ಯಾಯಾಮ ಮಾಡಿ ಸಣ್ಣಗಾದೆ, ಆದ್ರೆ ಅವಕಾಶಗಳೇ ಬರಲಿಲ್ಲ. ನಂತರ ದಪ್ಪ ಆದೆ ಈಗ ಬ್ಯುಸಿ ಇದ್ದೇನೆ. ನಾವು ಇನ್ನೂ ಸ್ಕ್ರೀನ್ ಮೇಲೆ ಚೆನ್ನಾಗಿ ಕಾಣಬೇಕು ಎಂಬ ಹುಚ್ಚು ಆಸೆಗೆ, ಈ ರೀತಿಯ ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಬಾರದು ಅಂತಾ ನಟಿ ರೂಪಿಕಾ ಹೇಳಿದರು.

ಒಟ್ಟಿನಲ್ಲಿ ಎಲ್ಲಾರಿಗಿಂತ ನಾನು ಚೆನ್ನಾಗಿ ಕಾಣಬೇಕು ಅಂತಾ ಕಾಸ್ಮೆಟಿಕ್ ಸರ್ಜರಿ ಒಳಗಾದ ಚೇತನಾ ರಾಜ್ ಸಾವಿಗೆ ಚಿತ್ರರಂಗ ಹಾಗು ಕಿರುತೆರೆ ಕಲಾವಿದರು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ:ಬೆಂಗಳೂರಲ್ಲಿ ಫ್ಯಾಟ್ ಸರ್ಜರಿ ವೇಳೆ ನಟಿ ಸಾವು

For All Latest Updates

ABOUT THE AUTHOR

...view details