ಬಾಲಿವುಡ್ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಬಹುನಿರೀಕ್ಷಿತ ವೆಬ್ ಸರಣಿ 'ಹೀರಾಮಂಡಿ' ಫಸ್ಟ್ಲುಕ್ ನಿನ್ನೆ(ಶನಿವಾರ) ಅನಾವರಣಗೊಂಡಿದೆ. 1940ರ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಹೀರಾಮಂಡಿ ಎಂಬ ಜಿಲ್ಲೆಯ ಸಾಂಸ್ಕೃತಿಕ ವಾಸ್ತವತೆಯನ್ನು ಬಿಂಬಿಸುವ ಚಿತ್ರವಿದು. ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ ಸಂಜೀದಾ ಶೇಖ್ ಹಾಗೂ ಶರ್ಮಿನ್ ಸೆಗಲ್ ಟೀಸರ್ನಲ್ಲಿ ಮಿಂಚಿದ್ದು, ಸಿನಿಪ್ರಿಯರ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ಹಾಗೂ ನೆಟ್‌ಫ್ಲಿಕ್ಸ್‌ನ ಟೆಡ್ ಸರಂಡೋಸ್ ಅವರು 'ಹೀರಾಮಂಡಿ' ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ. 'ಸಂಜಯ್ ಲೀಲಾ ಬನ್ಸಾಲಿ ನಿಮ್ಮನ್ನು ವೇಶ್ಯೆಯರು ರಾಣಿಯರಾಗಿದ್ದ ಜಗತ್ತಿಗೆ ಆಹ್ವಾನಿಸುತ್ತಾರೆ' ಎಂಬ ಸಾಲಿನಿಂದ ವಿಡಿಯೋ ಪ್ರಾರಂಭವಾಗುತ್ತದೆ. ನೆಟ್‌ಫ್ಲಿಕ್ಸ್ ಇಂಡಿಯಾ ಮತ್ತು ಬನ್ಸಾಲಿ ಪ್ರೊಡಕ್ಷನ್ಸ್ ಹಂಚಿಕೊಂಡ ಪೋಸ್ಟ್‌ನ ಶೀರ್ಷಿಕೆ ಹೀಗಿದೆ. 'ಇನ್ನೊಂದು ಬಾರಿ, ಮತ್ತೊಂದು ಯುಗ. ಸಂಜಯ್ ಲೀಲಾ ಬನ್ಸಾಲಿ ರಚಿಸಿದ ಮತ್ತೊಂದು ಮಾಂತ್ರಿಕ ಜಗತ್ತು. ಇನ್ನು ಕಾಯಲು ಸಾಧ್ಯವಿಲ್ಲ. ಹೀರಾಮಂಡಿಯ ಸುಂದರ ಮತ್ತು ಕುತೂಹಲಕಾರಿ ಪ್ರಪಂಚದ ಒಂದು ನೋಟ ಇಲ್ಲಿದೆ' ಎಂದು ಬರೆಯಲಾಗಿದೆ.
ಹೀರಾಮಂಡಿಯ ಪೋಸ್ಟರ್ ಶೀರ್ಷಿಕೆ ಹೀಗಿದೆ.. "ಒಂದು ನೋಟ, ಒಂದು ಸನ್ನೆ ಮತ್ತು ಒಂದೇ ಆಜ್ಞೆ. ಹೀರಾಮಂಡಿಯ ಮಹಿಳೆಯರು ನಿಮ್ಮ ಹೃದಯವನ್ನು ಕದಿಯಲಿದ್ದಾರೆ, ಶೀಘ್ರದಲ್ಲೇ ತೆರೆಗೆ" ಎಂದು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:'ಸುಕೂನ್': ಬನ್ಸಾಲಿ ಅವರ ಮೊದಲ ಮ್ಯೂಸಿಕ್ ಆಲ್ಬಂ ಬಿಡುಗಡೆಗೆ ಸಿದ್ಧ
ವೇಶ್ಯೆಯರನ್ನು ಆಧರಿಸಿದ ಮೊದಲ ಸರಣಿ:ಹೀರಾಮಂಡಿ ಲಾಹೋರ್‌ನ ವೇಶ್ಯೆಯರು ಮತ್ತು ಅವರ ಜೀವನವನ್ನು ಆಧರಿಸಿದೆ ಎಂದು ಹೇಳಲಾಗುತ್ತದೆ. ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಥಿಯಾವಾಡಿ ಅವರ ಸಂಜಯ್ ಅವರ ಕೊನೆಯ ಚಿತ್ರ. ಹೀರಾಮಂಡಿ ಕಥೆ 14 ವರ್ಷಗಳಿಂದ ನನ್ನ ಬಳಿ ಇದೆ ಎಂದು ಸಂಜಯ್ ಹೇಳಿದ್ದರು. ಈ ಕುರಿತು ಹೇಳಿಕೆ ನೀಡಿರುವ ಅವರು, "ಹೀರಾಮಂಡಿ ಚಿತ್ರ ನಿರ್ಮಾಪಕನಾಗಿ ನನ್ನ ಪಯಣದಲ್ಲಿ ಮಹತ್ವದ ಮೈಲಿಗಲ್ಲು. ಇದು ಮಹಾಕಾವ್ಯವಾಗಿದ್ದು, ಲಾಹೋರ್‌ನ ವೇಶ್ಯೆಯರನ್ನು ಆಧರಿಸಿದ ಮೊದಲ ಸರಣಿ" ಎಂದಿದ್ದಾರೆ.
ಈ ಸರಣಿಯು 1940 ರ ಭಾರತೀಯ ಸ್ವಾತಂತ್ರ್ಯ ಹೋರಾಟದ ಪ್ರಕ್ಷುಬ್ಧ ಕಾಲದಲ್ಲಿ ಲಾಹೋರ್‌ನ ಹೀರಾ ಮಂಡಿ ಪ್ರದೇಶದಲ್ಲಿ ವೇಶ್ಯೆಯರ ಜೀವನವನ್ನು ಪ್ರದರ್ಶಿಸುತ್ತದೆ ಮತ್ತು ಮೂರು ವಿಭಿನ್ನ ಪೀಳಿಗೆಯ ಜೀವನವನ್ನು ತೋರಿಸುತ್ತದೆ. ಮುಂಬೈನ ಫಿಲ್ಮ್ ಸಿಟಿಯಲ್ಲಿ ಬೃಹತ್ ಸೆಟ್‌ಗಳನ್ನು ಹಾಕಿ ನಿರ್ಮಿಸಲಾಗಿದೆ. ಅಲ್ಲಿ ಗಂಗೂಬಾಯಿ ಕಥಿಯಾವಾಡಿ ಚಿತ್ರವನ್ನು ಚಿತ್ರೀಕರಿಸಲಾಗಿತ್ತು.
"ಬನ್ಸಾಲಿಯಂತಹ ದಾರ್ಶನಿಕರೊಂದಿಗೆ ಸಹಕರಿಸುವುದು ಗೌರವವಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಪಾಲುದಾರಿಕೆಗೆ ನಾವು ಹೆಮ್ಮೆಪಡುತ್ತೇವೆ. ಸಂಜಯ್ ಲೀಲಾ ಬನ್ಸಾಲಿ ಅವರು ನಿಜವಾದ ದಾರ್ಶನಿಕರಾಗಿದ್ದಾರೆ ಮತ್ತು ಅವರೊಂದಿಗೆ ಸಹಕರಿಸಲು ನಾವು ಉತ್ಸುಕರಾಗಿದ್ದೇವೆ" ಎಂದು ನೆಟ್‌ಫ್ಲಿಕ್ಸ್ ಸಹ-ಸಿಇಒ ಟೆಡ್ ಸರಂಡೋಸ್ ಹೇಳಿದರು.
ಸಂಜಯ್ ಲೀಲಾ ಬನ್ಸಾಲಿ, ಎ ಲವ್ ಸ್ಟೋರಿ, ಖಾಮೋಶಿ,ದಿ ಮ್ಯೂಸಿಕಲ್, ಬ್ಲ್ಯಾಕ್, ದೇವದಾಸ್, ಹಮ್ ದಿಲ್ ದೇ ಚುಕೆ ಸನಮ್ ಮತ್ತು ಗುಜಾರಿಶ್, ಗಬ್ಬರ್, ಬಾಜಿ ರಾವ್ ಮಸ್ತಾನಿ, ಪದ್ಮಾವತ್, ಗಂಗೂಬಾಯಿ ಕಥಿಯಾವಾಡಿ ಸೇರಿದಂತ್ ಹಲವು ಚಲನ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರ ಕೊನೆಯ ನಿರ್ದೇಶನದ ಚಿತ್ರ ಗಂಗೂಬಾಯಿ ಕಥಿಯಾವಾಡಿ ಸೂಪರ್ ಹಿಟ್ ಆಗಿತ್ತು. ಆಲಿಯಾ ಭಟ್ ಮುಖ್ಯ ಪಾತ್ರದಲ್ಲಿ ಮತ್ತು ಅಜಯ್ ದೇವಗನ್ ಪೋಷಕ ಪಾತ್ರದಲ್ಲಿ ನಟಿಸಿದ್ದರು.
ಇದನ್ನೂ ಓದಿ:'ಗಂಗೂಬಾಯಿ ಕಥಿಯಾವಾಡಿ' ಚಿತ್ರದ ಬಿಡುಗಡೆಗೆ ಅಪಸ್ವರ! ಕಾರಣ?