ಕನ್ನಡದಲ್ಲಿ ನಟನಾಗಿ ಹಾಗೂ ಪೋಷಕ ಪಾತ್ರಗಳಿಂದ ಗಮನ ಸೆಳೆದಿದ್ದ ನಟ ಉದಯ್ ಹುತ್ತಿನಗದ್ದೆ ನಿನ್ನೆ (ಗುರುವಾರ) ಸಂಜೆ ನಿಧನರಾಗಿದ್ದಾರೆ. 1987ರಲ್ಲಿ ಆರಂಭ ಸಿನಿಮಾದಲ್ಲಿ ನಾಯಕ ನಟನಾಗಿ ಮಿಂಚಿದ್ದ ಇವರು, ಜಯಭೇರಿ, ಅಮೃತ ಬಿಂದು, ಕರ್ಮ, ಉಂಡುಹೋದ ಕೊಂಡಹೋದ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು.
ಕನ್ನಡದ ಹಿರಿಯ ನಟ ಉದಯ್ ಹುತ್ತಿನಗದ್ದೆ ವಿಧಿವಶ - Sandalwood veteran actor Uday Huttinagadde
ಕನ್ನಡದ ಹಿರಿಯ ನಟ ಉದಯ್ ಹುತ್ತಿನಗದ್ದೆ ಇಹಲೋಕ ತ್ಯಜಿಸಿದ್ದಾರೆ. 1987ರಲ್ಲಿ ಡಾ.ರಾಜ್ ಕುಮಾರ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದ ದೇವತಾ ಮನುಷ್ಯ ಸೇರಿ ಹಲವು ಚಿತ್ರದಲ್ಲಿ ಇವರು ನಟಿಸಿದ್ದರು..
ನಟ ಉದಯ್ ಹುತ್ತಿನಗದ್ದೆ
ಡಾ. ರಾಜ್ ಕುಮಾರ್ ಅಭಿನಯದ ದೇವತಾ ಮನುಷ್ಯ ಸಿನಿಮಾದಲ್ಲಿ ಸುಧಾರಾಣಿ ಜೋಡಿಯಾಗಿ ಉದಯ್ ಹುತ್ತಿನಗದ್ದೆ ನಟಿಸಿದರು. ಲಲಿತಾಂಜಲಿ ಎಂಬ ಕಿರುತೆರೆ ನಟಿಯನ್ನ ಮದುವೆಯಾದ ಇವರು, ಮಾಗಡಿ ರಸ್ತೆಯಲ್ಲಿ ವಾಸವಾಗಿದ್ದರು. ರಾಜಾಜಿನಗರದ ಬಾಷ್ಯಂ ಸರ್ಕಲ್‌ನಲ್ಲಿ ಉದಯ್ ಹುತ್ತಿನಗದ್ದೆ ಫೋಟೋಗ್ರಫಿ ಸ್ಟುಡಿಯೋ ನಡೆಸುತ್ತಿದ್ದರು. ಇವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಇದನ್ನೂ ಓದಿ:ವಿಭಿನ್ನ ಪೋಸ್ಟರ್ನಿಂದ ಅಭಿಮಾನಿಗಳ ತಲೆಯಲ್ಲಿ ಹುಳಬಿಟ್ಟ ರಿಯಲ್ ಸ್ಟಾರ್!
Last Updated : Jun 3, 2022, 2:43 PM IST