ಬೆಂಗಳೂರು: ಸಿನಿಮಾಗೆ ಬಂಡವಾಳ ಹೂಡಿ, ನಷ್ಟ ಅನುಭವಿಸಿ ಅಡ್ಡದಾರಿ ಹಿಡಿದಿದ್ದ ಸ್ಯಾಂಡಲ್ವುಡ್ ನಿರ್ಮಾಪಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ರಿಯಲ್ ಎಸ್ಟೇಟ್ ಹೆಸರಿನಲ್ಲಿ ವಂಚಿಸಿದ್ದ ನಿರ್ಮಾಪಕ ಮಂಜುನಾಥ್, ಶಿವಕುಮಾರ್, ಗೋಪಾಲ್ ಹಾಗೂ ಚಂದ್ರಶೇಖರ್ ಎಂಬಾತನನ್ನ ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮಂಜುನಾಥ ನಟ ಕೋಮಲ್ ಅಭಿನಯದ 'ಲೊಡ್ಡೆ' ಸಿನಿಮಾ ನಿರ್ಮಾಣ ಮಾಡಿದ್ದರು. ಆದರೆ, ಚಿತ್ರ ನಿರೀಕ್ಷಿತ ಪ್ರದರ್ಶನ ಕಾಣದ ಹಿನ್ನೆಲೆ ನಷ್ಟ ಅನುಭವಿಸಿದ್ದರು. ಬಳಿಕ ರಾಜಾಜಿನಗರದಲ್ಲಿ ಈಗಲ್ ಟ್ರೀ ಬಿಲ್ಡರ್ಸ್ ಹಾಗೂ ಡೆವಲಪರ್ಸ್ ಡಾಟ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಕಚೇರಿ ತೆರೆದಿದ್ದ.