ಖ್ಯಾತ ಚಿತ್ರನಿರ್ಮಾಪಕ ಕರಣ್ ಜೋಹರ್ ಅವರ ಜನಪ್ರಿಯ ಟಾಕ್ ಶೋ ಕಾಫಿ ವಿತ್ ಕರಣ್-7 ರ ಮೊದಲ ಎರಡು ಸಂಚಿಕೆಗಳು ಕೆಲವೊಂದಿಷ್ಟು ಸುದ್ದಿಯಾಗಿದ್ದವು. ಇದೀಗ ಕಾರ್ಯಕ್ರಮದ ಮೂರನೇ ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದೆ. ಮೂರನೇ ಸಂಚಿಕೆಯಲ್ಲಿ ಬಾಲಿವುಡ್ ಮತ್ತು ಸೌತ್ ಫಿಲ್ಮ್ ಇಂಡಸ್ಟ್ರಿಯಿಂದ ಇಬ್ಬರು ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ.
ಮೊದಲ ಸಂಚಿಕೆಗೆ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಭಾಗವಹಿಸಿದ್ದರು ಮತ್ತು ಎರಡನೇ ಸಂಚಿಕೆಯಲ್ಲಿ ಬಾಲಿವುಡ್ ಸ್ಟಾರ್ ಕಿಡ್ಸ್ ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಆಗಮಿಸಿದ್ದರು. ಈ ಬಾರಿ ಅಕ್ಷಯ್ ಕುಮಾರ್ ಮತ್ತು ಸೌತ್ ಸಿನಿಮಾದ ನಂಬರ್ ಒನ್ ನಟಿ ಸಮಂತಾ ರುತ್ ಪ್ರಭು ಪಾಲ್ಗೊಂಡಿದ್ದಾರೆ.
ಕಾರ್ಯಕ್ರಮದ ಎರಡು ಸಂಚಿಕೆಗಳಿಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ಮೂರನೇ ಸಂಚಿಕೆಯ ಪ್ರೋಮೋ ವಿಡಿಯೋದಲ್ಲಿ ಅಕ್ಷಯ್ ಕುಮಾರ್ ಅವರ ಸಿನಿ ಜರ್ನಿಯನ್ನು ತಮಾಷೆಯಾಗಿ ಚರ್ಚಿಸಿರುವುದನ್ನು ಕಾಣಬಹುದಾಗಿದೆ. ಹಾಗೆ ಸಮಂತಾ ಅವರ ಕೆಲವು ಗಾಸಿಪ್ಗಳು ಮತ್ತು ಅವರ ಇಷ್ಟದ - ಬೇಸರದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಪ್ರೋಮೋದಲ್ಲಿ ಕರಣ್ ಅವರು ಅಕ್ಷಯ್ ಮತ್ತು ಸಮಂತಾಗೆ ಕೇಳುವ ಕೆಲವು ಪ್ರಶ್ನೆಗಳು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಹಿಂದಿನ ಆಸ್ಕರ್ ನಿರೂಪಕ ಕ್ರಿಸ್ ರಾಕ್ಸ್ ನಿಮ್ಮ ಪತ್ನಿ ಟ್ವಿಂಕಲ್ ಖನ್ನಾ ಬಗ್ಗೆ ತಮಾಷೆ ಮಾಡಿದ್ದರೆ ನೀವು ಏನು ಮಾಡುತ್ತಿದ್ದಿರಿ ಎಂದು ಕರಣ್ ಜೋಹರ್ ಅವರು ಅಕ್ಷಯ್ ಕುಮಾರ್ ಅವರನ್ನು ಕೇಳಿದರು. ಅಕ್ಷಯ್ ಕುಮಾರ್ ಅವರು "ಅವರ ಅಂತಿಮ ಸಂಸ್ಕಾರಕ್ಕೆ ನಾನು ಹಣ ಪಾವತಿಸುತ್ತೇನೆ", "ಸರಿ" ಎಂದು ಕಟುವಾಗಿ ಉತ್ತರಿಸಿದ್ದಾರೆ.