'ಕಾಫಿ ವಿತ್ ಕರಣ್ ಸೀಸನ್ 8' ಪ್ರೇಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣ ಬಡಿಸುತ್ತಿದೆ. ಈಗಾಗಲೇ ಎಂಟು ಸಂಚಿಕೆಗಳು ಮುಗಿದಿದ್ದು, ನೆಚ್ಚಿನ ಸೆಲೆಬ್ರಿಟಿಗಳ ಬಗ್ಗೆ ಇಂಟ್ರಸ್ಟಿಂಗ್ ವಿಚಾರಗಳು ಅಭಿಮಾನಿಗಳಿಗೆ ಸಿಕ್ಕಿದೆ. ಈ ಸೀಸನ್ನ ಮುಂದಿನ ಸಂಚಿಕೆಯಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ನಿರ್ದೇಶಕ ರೋಹಿತ್ ಶೆಟ್ಟಿ ಜೊತೆಗಿನ ಮಾತುಕತೆ ನಡೆಯಲಿದೆ. ಸಿಂಘಂ ಎಗೇನ್ನ ಜನಪ್ರಿಯ ಜೋಡಿಯು ಸಲ್ಮಾನ್ ಖಾನ್ ಮತ್ತು ರಣ್ವೀರ್ ಸಿಂಗ್ ಬಗ್ಗೆ ನಿರ್ಮಾಪಕ ಕರಣ್ ಜೋಹರ್ ಜೊತೆ ಹಂಚಿಕೊಳ್ಳಲಿದ್ದಾರೆ.
ಇದೀಗ ಹೊಸದಾಗಿ ಬಿಡುಗಡೆಯಾದ ಪ್ರೋಮೋದಲ್ಲಿ ಅಜಯ್ ದೇವಗನ್ ಮತ್ತು ರೋಹಿತ್ ಶೆಟ್ಟಿ ಇಬ್ಬರೂ ಎಂದಿನಂತೆ ಡ್ಯಾಪರ್ ಆಗಿ ಕಾಣುತ್ತಿದ್ದಾರೆ. ಕರಣ್ ಜೋಹರ್ ಸಿಂಪಲ್ ಪ್ರಶ್ನೆಗಳೊಂದಿಗೆ ಮಾತುಕತೆ ಪ್ರಾರಂಭಿಸುತ್ತಾರೆ. ಸಿನಿಮಾ ಯಶಸ್ಸಿನ ಬಗ್ಗೆ ಅಜಯ್ ಅವರ ಪ್ರತಿಕ್ರಿಯೆಯನ್ನು ಕೇಳುತ್ತಾರೆ. ಇದಕ್ಕೆ ಅಡ್ಡಿಪಡಿಸಿದ ರೋಹಿತ್ ಶೆಟ್ಟಿ, ಅಜಯ್ ದೇವಗನ್ ಮತ್ತು ಸಲ್ಮಾನ್ ಖಾನ್ ಅವರ ಚಿತ್ರವು ಬ್ಲಾಕ್ಬಸ್ಟರ್ ಆಗಿರಲಿ ಅಥವಾ ಇಲ್ಲದಿರಲಿ, ಸೆಟ್ನಲ್ಲಿ ಅವರಿಬ್ಬರು ಯಾವಾಗಲೂ ಒಂದೇ ರೀತಿಯಾಗಿ ಇರುತ್ತಾರೆ ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.
ರಣ್ವೀರ್ ಸಿಂಗ್ ಜೊತೆ ಕೆಲಸ ಮಾಡುವ ಬಗ್ಗೆ ಕೇಳಿದಾಗ, ರೋಹಿತ್ ಶೆಟ್ಟಿ ಅವರು ನಟನಿಗಿರುವ ಅನನ್ಯ ಶಕ್ತಿ ಒಪ್ಪಿಕೊಂಡರು. ಇದಕ್ಕೆ ಹಾಸ್ಯಮಯವಾಗಿ ಉತ್ತರಿಸಿದ ಅಜಯ್ ದೇವಗನ್, "ಒಂದೋ ನಾನೇ ಅವನ ಬಾಯಿಯನ್ನು ಮುಚ್ಚುತ್ತೇನೆ ಅಥವಾ ನಾನು ನನ್ನ ಕಿವಿಯನ್ನೇ ಮುಚ್ಚಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ. ಅಜಯ್ ಅವರು ತಮ್ಮ ಬಗ್ಗೆ ಕೆಲವು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಉದಾಹರಣೆಗೆ ಪಾರ್ಟಿಗಳಿಗೆ ಆಹ್ವಾನಿಸದಿರುವುದು ಮತ್ತು ವಿಮಾನ ನಿಲ್ದಾಣಗಳಲ್ಲಿ ಉದ್ದೇಶಪೂರ್ವಕವಾಗಿ ಪಾಪರಾಜಿಗಳನ್ನು ತಪ್ಪಿಸುವುದು ಹೀಗೆ. ಏಕೆಂದರೆ, ನಾನು ಪಾಪರಾಜಿಗಳನ್ನು ಎಲ್ಲಿಗೂ ಆಹ್ವಾನಿಸಿಯೇ ಇರುವುದಿಲ್ಲ ಎಂದು ತಮಾಷೆ ಮಾಡಿದ್ದಾರೆ.
ಒಟ್ಟಿನಲ್ಲಿ ಅಜಯ್ ದೇವಗನ್ ಮತ್ತು ರೋಹಿತ್ ಶೆಟ್ಟಿ ಜೊತೆಗಿನ ಮಾತುಕತೆಯಂತೂ ಸಖತ್ ಮಜವಾಗಿದೆ. ಈ ಸಂಚಿಕೆಯು ಡಿಸೆಂಬರ್ 21ರಂದು ಬೆಳಗ್ಗೆ 11 ಗಂಟೆಗೆ ಓಟಿಟಿ ಫ್ಲಾಟ್ಫಾರ್ಮ್ ಹಾಟ್ಸ್ಟಾರ್ನಲ್ಲಿ ಪ್ರಸಾರಗೊಳ್ಳಲಿದೆ. 'ಕಾಫಿ ವಿತ್ ಕರಣ್' ಈ ಮೋಸ್ಟ್ ಎಕ್ಸ್ಪೆಕ್ಟೆಡ್ ಶೋನಲ್ಲಿ ಜನಪ್ರಿಯ ಸೆಲೆಬ್ರಿಟಿಗಳು ಹಲವು ಆಸಕ್ತಿಕರ ವಿಷಯಗಳ ಕುರಿತು ಮಾತನಾಡುತ್ತಾರೆ. ನಿರೂಪಕ ಕರಣ್ ಜೋಹರ್ ಕೇಳುವ ಪ್ರಶ್ನೆಗಳಿಗೂ ಉತ್ತರಿಸುತ್ತಾರೆ. ತಮ್ಮ ಸಿನಿಮಾ ಪ್ರಚಾರದ ಲಾಭವನ್ನೂ ಸೆಲೆಬ್ರಿಟಿಗಳು ಪಡೆಯುತ್ತಾರೆ. ಮೆಚ್ಚಿನ ನಟ, ನಟಿ ಬಗ್ಗೆ ತಿಳಿದುಕೊಳ್ಳುವ ಅಭಿಮಾನಿಗಳ ಆಸೆ ಈ ಕಾರ್ಯಕ್ರಮದ ಮೂಲಕ ಈಡೇರುತ್ತದೆ. ಮುಂದಿನ ಸಂಚಿಕೆಯಲ್ಲಿ ಯಾರು ಅತಿಥಿಗಳಾಗಿ ಆಗಮಿಸುತ್ತಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿದೆ.
ಇದನ್ನೂ ಓದಿ:'ಕಾಫಿ ವಿತ್ ಕರಣ್' ಎಂಟನೇ ಸಂಚಿಕೆಯಲ್ಲಿ ಆದಿತ್ಯ ರಾಯ್ ಕಪೂರ್, ಅರ್ಜುನ್ ಕಪೂರ್