ನವದೆಹಲಿ: ಬಾಲಿವುಡ್ನಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಟಿ ರಿಚಾ ಚಡ್ಡಾ ಮತ್ತು ಅಲಿ ಫಜಲ್ ಮದುವೆ ಶಾಸ್ತ್ರಗಳು ಪ್ರಾರಂಭವಾಗಿವೆ. ಅಕ್ಟೋಬರ್ 4 ರಂದು ಈ ತಾರಾ ಜೋಡಿ ಹಸೆಮಣೆ ಏರಲಿದ್ದು, ಶುಕ್ರವಾರ ರಾತ್ರಿ ನಡೆದ ಕಾಕ್‌ಟೇಲ್ ಪಾರ್ಟಿಯಲ್ಲಿ ಅತ್ಯಾಕರ್ಷಕ ಉಡುಗೆಯಲ್ಲಿ ಕಾಣಿಸಿಕೊಂಡರು.
ಗುರುವಾರ ಸಂಗೀತ ಮತ್ತು ಮೆಹೆಂದಿ ಸಮಾರಂಭ ಎಂಜಾಯ್ ಮಾಡಿದ ರಿಚಾ ಚಡ್ಡಾ, ಅಲಿ ಫಜಲ್ ನಿನ್ನೆ ರೋಮ್ಯಾಂಟಿಕ್ ಆಗಿ ಕೈ ಹಿಡಿದು ಸಾಂಪ್ರದಾಯಿಕ ಉಡುಗೆಯಲ್ಲಿ ಪೋಸ್ ನೀಡಿದರು. ಈ ವೇಳೆ ಅಲಿ ವರ್ಣರಂಜಿತ ಶೆರ್ವಾನಿ ಧರಿಸಿದ್ದು, ಚಿನ್ನದ ಕಸೂತಿ ಸೀರೆಯಲ್ಲಿ ರಿಚಾ ಮಿಂಚುತ್ತಿದ್ದರು.